ಬ್ರೇಕಿಂಗ್ ನ್ಯೂಸ್
30-05-23 02:43 am HK News Desk ಕ್ರೀಡೆ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ (CSK vs GT) 20 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದರುಗುಜರಾತ್ ಆರಂಭಿಕರಾದ ಶುಭಮನ್ ಗಿಲ್ (Shubman Gill) ಮತ್ತು ಸಾಹಾ ಟೈಟಾನ್ಸ್‌ಗೆ ಉತ್ತಮ ಆರಂಭ ನೀಡಿದರು. ಅಲ್ಲದೇ ಕೊನೆಯಲ್ಲಿ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ ತಂಡವು ಚೆನ್ನೈ ವಿರುದ್ಧ ಬೃಹತ್ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ನಿಗದಿತ 15 ಓವರ್ಗೆ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸುವ ಮೂಲಕ ಚೆನ್ನೈ 5ನೇ ಬಾರಿಗೆ ಚಾಂಪಿಯನ್ ಆಯಿತು. ಕೊನೆಯಲ್ಲಿ ಜಡೇಜಾ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಮತ್ತು ಫೋರ್ ಮೂಲಕ ಪಂದ್ಯವನ್ನು ಗೆಲ್ಲಿಸಿದರು.
ಮಳೆಯಿಂದಾಗಿ ಪಂದ್ಯ 12.10ಕ್ಕೆ ಆರಂಭವಾಯಿತು. 2 ಗಂಟೆಗೂ ಹೆಚ್ಚು ವಿಳಂಬದಿಂದಾಗಿ 5 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಇದರಿಂದಾಗಿ ಚೆನ್ನೈ ತಂಡ 15 ಓವರ್ನಲ್ಲಿ 171 ರನ್ ಟಾರ್ಗೆಟ್ ಬೆನ್ನಟ್ಟಿತು. ಚೆನ್ನೈ ಪರ ಆರಮಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಮತ್ತು ಡ್ವೈನ್ ಕಾನ್ವೆ ಭರ್ಜರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಆರಮಭದಿಂದಲೇ ಹೆಚ್ಚಿಸಿದರು. ಈ ಜೋಡಿ 74 ರನ್ಗಳ ಜೊತಟಯಾಟವಾಡಿತು.
ಈ ವೇಳೆ ಡ್ವೈನ್ ಕಾನ್ವೆ 25 ಎಸೆತದಲ್ಲಿ 2 ಸಿಕ್ಸ್ 4 ಫೊರ್ ಮೂಲಕ 47 ರನ್ ಮತ್ತು ಗಾಯಕ್ವಾಡ್ 16 ಎಸೆತದಲ್ಲಿ 1 ಸಿಕ್ಸ್ ಮತ್ತು 3 ಫೋರ್ ಮೂಲಕ 26 ರನ್ ಗಳಿಸಿದರು. ಬಳಿಕ ಬಂದ ಅಂಜಿಕ್ಯಾ ರಹಾನೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಕೇವಲ 13 ಎಸೆತದಲ್ಲಿ 2 ಸಿಕ್ಸ್ 2 ಬೌಂಡರಿ ಮೂಲಕ 27 ರನ್ ಸಿಡಿಸಿ ಮೋಹಿತ್ ಶರ್ಮಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ತಮ್ಮ ಐಪಿಎಲ್ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಅಂಬಾಡಿ ರಾಯಡು 8 ಬಾಲ್ನಲ್ಲಿ 2 ಸಿಕ್ಸ್ ಮತ್ತು 1 ಫೋರ್ ಮೂಲಕ 19 ರನ್ ಗಳಿಸಿ ಔಟ್ ಆದರು. ಬಳಿಕ ಬಂದ ಎಂಎಸ್ ಧೋನಿ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಧೋನಿ ಮೊದಲ ಎಸೆತದಲ್ಲಿಯೆ ಕ್ಯಾಚ್ ನೀಡಿ ಔಟ್ ಆಗುವ ಮೂಲಕ ಕೋಟ್ಯಾಂತರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಶತಕ ವಂಚಿತರಾದ ಸಾಯಿ ಸುದರ್ಶನ್:
ಇನ್ನು, ಯುವ ಆಟಗಾರ ಸಾಯಿ ಸುದರ್ಶನ್ (47 ಎಸೆತಗಳಲ್ಲಿ 96; 8 ಬೌಂಡರಿ, 6 ಸಿಕ್ಸರ್) ಸೂಪರ್ ಬ್ಯಾಟಿಂಗ್ ಮೂಲಕ ಮಿಂಚಿದರು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ (39 ಎಸೆತಗಳಲ್ಲಿ 54; 5 ಬೌಂಡರಿ, 1 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು. ಮತ್ತೋರ್ವ ಆರಂಭಿಕ ಆಟಗಾರ ಶುಭಮನ್ ಗಿಲ್ (20 ಎಸೆತಗಳಲ್ಲಿ 39; 7 ಬೌಂಡರಿ) ಇರುವವರೆಗೂ ಆಕ್ರಮಣಕಾರಿ ಆಟವಾಡಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (12 ಎಸೆತಗಳಲ್ಲಿ ಔಟಾಗದೆ 21; 2 ಸಿಕ್ಸರ್) ಮಿಂಚಿದರು. ಚೆನ್ನೈ ಬೌಲರ್ ಪತಿರಾನ ಎರಡು ವಿಕೆಟ್ ಪಡೆದರು. ಜಡೇಜಾ ಮತ್ತು ದೀಪಕ್ ಚಹಾರ್ ತಲಾ ಒಂದು ವಿಕೆಟ್ ಪಡೆದರು.
ಚೆನ್ನೈ ಬೌಲರ್‌ಗಳ ವಿರುದ್ಧ ಮೊದಲ ವಿಕೆಟ್‌ಗೆ 67 ರನ್ ಸೇರಿಸಿದ ನಂತರ ಧೋನಿ ಸೂಪರ್ ಸ್ಟಂಪಿಂಗ್‌ಗಾಗಿ ಗಿಲ್ ಪೆವಿಲಿಯನ್ ತಲುಪಿದರು. ಬಳಿಕ ಸಹಾ ಸಾಯಿ ಸುದರ್ಶನ್ ಜೊತೆಗೂಡಿ ತಂಡವನ್ನು ಮುನ್ನಡೆಸಿದರು. ಆರಂಭದಲ್ಲಿ ನಿಧಾನವಾಗಿ ಆಡಿದ ಸುದರ್ಶನ್, ಸಾಹಾ ಔಟಾದ ಬಳಿಕ ವೇಗವಾಗಿ ಬ್ಯಾಟಿಂಗ್ ಆರಂಭಿಸಿದರು. ಇನ್ನು, ಇದು ಐಪಿಎಲ್ ಇತಿಹಾಸದಲ್ಲಿ ಫೈನಲ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ 208 ರನ್ ಇದುವರೆಗಿನ ಫೈನಲ್‌ನಲ್ಲಿ ಗರಿಷ್ಠ ಸ್ಕೋರ್ ಆಗಿತ್ತು.
A passing shower interrupted the match between Gujarat Titans and Chennai Super Kings at the Narendra Modi Stadium on Monday. Earlier, Sai Sudharsan (96) narrowly missed out on his century as Gujarat Titans posted 214/4, the highest-ever score in an IPL final, against the Chennai Super Kings at the Narendra Modi Stadium. Wriddhiman Saha gave him apt support with his own half century.
21-10-25 11:01 pm
Bangalore Correspondent
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 09:49 pm
Mangalore Correspondent
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
21-10-25 10:51 pm
Mangalore Correspondent
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm