ನಿವೃತ್ತಿ ಘೋಷಿಸಿ ಬೇಸ್ತು ಬೀಳಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು !

02-11-20 09:13 pm       Headline Karnataka News Network   ಕ್ರೀಡೆ

ಖ್ಯಾತ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು ಅವರು ನಿವೃತ್ತಿ ಘೋಷಿಸಿದ್ದಾರೆ. ಟ್ವೀಟ್​​ ಮಾಡುವ ಮೂಲಕ ಪಿ.ವಿ.ಸಿಂಧು ನಿವೃತ್ತಿ ಘೋಷಿಸಿದ್ದಾರೆ.

ನವದೆಹಲಿ, ನವೆಂಬರ್ 2: ರಿಯೋ ಒಲಿಂಪಿಕ್ಸ್ ರಜತ ವಿಜೇತೆ ಹಾಗೂ ಭಾರತದ ಬ್ಯಾಡ್ಮಿಂಟನ್ ಚಾಂಪ್ಯನ್ 25ರ ಹರೆಯದ ಪಿ.ವಿ. ಸಿಂಧು, ತಾನು ನಿವೃತ್ತಿಯಾಗುತ್ತಿದ್ದೇನೆಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಸಿಂಧು ತಮ್ಮ ಟ್ವಿಟರ್ ನಲ್ಲಿ ಹೀಗೆ ದೊಡ್ಡಕ್ಷರದಲ್ಲಿ ಬರೆದುಕೊಂಡಿದ್ದನ್ನು ನೋಡಿದ ಕೆಲವು ಮಾಧ್ಯಮಗಳು ಸಿಂಧು ನಿವೃತ್ತಿ ಎಂದು ಬ್ರೇಕಿಂಗ್ ಹೊಡೆದು ಬೇಸ್ತು ಬಿದ್ದಿದ್ದೂ ಆಗಿತ್ತು. ಆಬಳಿಕ ಪಿ.ವಿ. ಸಿಂಧು ಬರೆದ ಪತ್ರವನ್ನು ಪೂರ್ತಿ ಓದಿದ ಬಳಿಕ ಅದು ಆಕೆಯ ಆಟಕ್ಕೆ ನಿವೃತ್ತಿಯಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.

ಕೋವಿಡ್ ಸೋಂಕಿನಿಂದಾಗಿ ಹರಡಿರುವ ಅನಿಶ್ಚಿತತೆಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಆಕೆ ಬರೆದಿದ್ದ ಪತ್ರದ ಸಾರಾಂಶವಾಗಿತ್ತು. ಕೋವಿಡ್ ಸೋಂಕಿಗೆ ಗುಡ್ ಬೈ ಹೇಳುತ್ತಾ ಡೇನ್ಮಾರ್ಕ್ ಓಪನ್ ಟೂರ್ನಮೆಂಟ್ ನನ್ನು ಕೊನೆಯ ಪಂದ್ಯ ಎಂದು ಬರೆದಿದ್ದರು. ಆಬಳಿಕ ಕೊರೊನಾ ಭಯದ ನಂತರ ಮತ್ತಷ್ಟು ಉತ್ಸಾಹ ತುಂಬಿಕೊಂಡು ಫೀಲ್ಡಿಗೆ ಮರಳುತ್ತೇನೆ. ಕೋವಿಡ್ ಕಾರಣದಿಂದ ಅಡರಿಕೊಂಡಿದ್ದ ಉದಾಸೀನ ಭಾವಕ್ಕೆ ನಿವೃತ್ತಿ ನೀಡುತ್ತೇನೆ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಸಿಂಧು ನಮಗೆಲ್ಲಾ ಶಾಕ್ ನೀಡಿದ್ದಾರೆ. ಆದರೆ ನಿಮ್ಮ ದೃಢ ನಿಶ್ಚಯದ ಬಗ್ಗೆ ಅಪಾರ ವಿಶ್ವಾಸವಿದೆ ಎಂದಿದ್ದಾರೆ

PV Sindhu nearly gave her fans, admirers and well-wishers a ‘mini heart-attack’ with her latest Twitter Post saying ‘Denmark Open was the final straw, I retire’