ಬ್ರೇಕಿಂಗ್ ನ್ಯೂಸ್
12-07-23 02:01 pm Source: News18 Kannada ಕ್ರೀಡೆ
ಬೈಜೂಸ್ ಹಿಂತೆಗೆದುಕೊಂಡ ನಂತರ, ಭಾರತ ತಂಡವು ಯಾವುದೇ ಶೀರ್ಷಿಕೆ ಪ್ರಾಯೋಜಕರಿಲ್ಲದೆ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಆಡಿತು. ಅದೇ ಸಮಯದಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲು, ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ ಡ್ರೀಮ್ 11 ಜುಲೈ 2023 ರಿಂದ ಮಾರ್ಚ್ 2026ರ ವರೆಗೆ ಮುಖ್ಯ ಪ್ರಾಯೋಜಕರಾಗಿ ಹಕ್ಕುಗಳನ್ನು ಪಡೆದುಕೊಂಡಿದೆ.
ಟ್ರೋಲ್ ಆಗ್ತಿದೆ ಜೆರ್ಸಿ:
ಟೀಮ್ ಇಂಡಿಯಾ ಹೊಸ ಟೈಟಲ್ ಪ್ರಾಯೋಜಕರನ್ನು ಪಡೆದ ನಂತರ ಆಟಗಾರರು ಫೋಟೋಶೂಟ್ ಮಾಡಿದ್ದಾರೆ. ಆದರೆ, ನೀಲಿ ತಂಡದ ಹೊಸ ಜೆರ್ಸಿಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮೆಚ್ಚಿಲ್ಲವಂತೆ. ಅಭಿಮಾನಿಗಳು ನ್ಯೂ ಜೆರ್ಸಿ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬರು, ಇದಕ್ಕಿಂತ ಬೈಜೂಸ್ ಅವರ ಜೆರ್ಸಿಯೇ ಉತ್ತಮವಾಗಿತ್ತು ಎಂದು ಹೇಳಿದರೆ, ಇನ್ನೊಬ್ಬ ದೆಹಲಿಯ ಶಾಲಾ ಹುಡುಗರು ಇದಕ್ಕಿಂತ ಉತ್ತಮವಾದ ಜೆರ್ಸಿ ಧರಿಸಿ ಕಬಡ್ಡಿ ಆಡುತ್ತಾರೆ! ಎಂದೆಲ್ಲಾ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ನಾಳೆಯಿಂದ ಟೆಸ್ಟ್ ಸರಣಿ ಆರಂಭ:
ಇನ್ನು, ಭಾರತ ಮತ್ತು ವೆಸ್ಟ್ ಇಂಡೀಸ್ (IND vs WI Test) ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಜುಲೈ 12 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಡೊಮಿನಿಕಾದಲ್ಲಿ ನಡೆಯಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC Final) ಹೊಸ ಋತುವಿನ ಎರಡೂ ತಂಡಗಳ ಮೊದಲ ಸರಣಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಗೆಲುವಿನೊಂದಿಗೆ ಶುಭಾರಂಭ ಮಾಡುವ ತವಕದಲ್ಲಿದೆ.
ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ XI:
ರೋಹಿತ್ ಶರ್ಮಾ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್ ಮತ್ತು ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ:
ಜುಲೈ 12 ರಿಂದ 16, 1 ನೇ ಟೆಸ್ಟ್, ಡೊಮಿನಿಕಾ
ಜುಲೈ 20 ರಿಂದ 24, 2 ನೇ ಟೆಸ್ಟ್, ಟ್ರಿನಿಡಾಡ್
ಜುಲೈ 27, 1 ನೇ ODI, ಬಾರ್ಬಡೋಸ್
ಜುಲೈ 29, 2 ನೇ ODI, ಬಾರ್ಬಡೋಸ್
ಆಗಸ್ಟ್ 1, 3 ನೇ ODI, ಟ್ರಿನಿಡಾಡ್
ಆಗಸ್ಟ್ 3, 1ನೇ ಟಿ20, ಟ್ರಿನಿಡಾಡ್
ಆಗಸ್ಟ್ 6, 2ನೇ ಟಿ20, ಗಯಾನಾ
ಆಗಸ್ಟ್ 8, 3ನೇ ಟಿ20, ಗಯಾನಾ
ಆಗಸ್ಟ್ 12, 4ನೇ ಟಿ20, ಫ್ಲೋರಿಡಾ
ಆಗಸ್ಟ್ 13, 5ನೇ ಟಿ20, ಫ್ಲೋರಿಡಾ
IND vs WI BCCI has Released the New Test Jersey of Team India.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm