ಟೆಸ್ಟ್​ ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಅಶ್ವಿನ್! ದೀರ್ಘ ಮಾದರಿಯಲ್ಲಿ ಅಪ್ಪ-ಮಗನ ವಿಕೆಟ್​ ಪಡೆದ ಏಕೈಕ ಬೌಲರ್​

13-07-23 01:42 pm       Source: News18 Kannada   ಕ್ರೀಡೆ

ಪ್ರಸ್ತುತ ವೆಸ್ಟ್​ ಇಂಡೀಸ್ 46 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 105 ರನ್​ಗಳಿಸಿದೆ. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಪಡೆದಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಬುಧವಾರ ಆರಂಭವಾಗಿದೆ. ಈ ಪಂದ್ಯದಲ್ಲಿ ಆತಿಥೇಯ ತಂಡದ ನಾಯಕ ಕ್ರೇಗ್ ಬ್ರಾತ್‌ವೈಟ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಆರಂಭಿಕ ಜೋಡಿ ಮೊದಲ 10 ಓವರ್‌ಗಳಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿತ್ತು. ಆದರೆ ನಾಯಕ ಬ್ರೈತ್‌ವೈಟ್ ಜೊತೆಗೂಡಿ ತೇಜ್​ನಾರಾಯಣ್ ಚಂದ್ರಪಾಲ್ ವಿಕೆಟ್ ಉಡಾಯಿಸಿದರು.

ಬಹುಬೇಗನೆ ನಾಯಕ ರೋಹಿತ್ ಶರ್ಮಾ ಸ್ಪಿನ್ನರ್ ಆರ್​ಅಶ್ವಿನ್ ಕೈಗೆ ಚೆಂಡನ್ನು ನೀಡಿರು. ಅಶ್ವಿನ್ ತಮ್ಮ ಸ್ಪಿನ್ ಮೋಡಿಯಿಂದ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಭಾರತೀಯ ದೈತ್ಯ ಸ್ಪಿನ್‌ನ ಬಲೆಗೆ ತೇಜ್​ನಾರಾಯಣ ಬಲೆಗೆ ಬಿದ್ದರು. ತೇಜ್ 12 ರನ್ ಗಳಿಸಿದ್ದಾಗ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು.  ಭಾರತ ತಂಡದ ಅನುಭವಿ ಸ್ಪಿನ್ನರ್ ಈ ಪಂದ್ಯದಲ್ಲಿ ಮೊದಲ ವಿಕೆಟ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದರು. ಅವರು ಅಂತಾರಾಷ್ಟ್ರೀಯ ತಂಡದಲ್ಲಿ ಆಡಿದ ತಂದೆ ಮತ್ತು ಮಗನ ವಿಕೆಟ್ ಪಡೆದ ಮೊದಲ ಭಾರತೀಯರಾದರು. ಇದಕ್ಕೂ ಮುನ್ನ ಅಶ್ವಿನ್ ಟೆಸ್ಟ್ ಪಂದ್ಯದಲ್ಲಿ ಶಿವನಾರಾಯಣ ಚಂದ್ರಪಾಲ್ ಅವರನ್ನು ಔಟ್ ಮಾಡಿದ್ದರು. 

 ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಆರಂಭಿಕ ಜೋಡಿ ಮೊದಲ 10 ಓವರ್‌ಗಳಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿತ್ತು. ಆದರೆ ನಾಯಕ ಬ್ರೈತ್‌ವೈಟ್ ಜೊತೆಗೂಡಿ ತೇಜ್​ನಾರಾಯಣ್ ಚಂದ್ರಪಾಲ್ ವಿಕೆಟ್ ಉಡಾಯಿಸಿದರು.(PTI)

 ಬಹುಬೇಗನೆ ನಾಯಕ ರೋಹಿತ್ ಶರ್ಮಾ ಸ್ಪಿನ್ನರ್ ಆರ್​ಅಶ್ವಿನ್ ಕೈಗೆ ಚೆಂಡನ್ನು ನೀಡಿರು. ಅಶ್ವಿನ್ ತಮ್ಮ ಸ್ಪಿನ್ ಮೋಡಿಯಿಂದ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಭಾರತೀಯ ದೈತ್ಯ ಸ್ಪಿನ್‌ನ ಬಲೆಗೆ ತೇಜ್​ನಾರಾಯಣ ಬಲೆಗೆ ಬಿದ್ದರು. ತೇಜ್ 12 ರನ್ ಗಳಿಸಿದ್ದಾಗ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. (AP)

2011ರಲ್ಲಿ ತಂದೆ ಶಿವನಾರಾಯಣ್‌ ಚಂದ್ರಪಾಲ್‌ ವಿಕೆಟ್ ಪಡೆದಿದ್ದ ಆರ್‌ ಅಶ್ವಿನ್‌, ಡೊಮಿನಿಕಾ ಟೆಸ್ಟ್‌ನಲ್ಲಿ ಪುತ್ರ ತೇಜ್‌ನಾರಾಯಣ್‌ ಅವರನ್ನು ಔಟ್‌ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅಶ್ವಿನ್​ 2011ರ ಸರಣಿಯಲ್ಲಿ ದೆಹಲಿ ಮತ್ತು ಕೋಲ್ಕತ್ತಾ ಟೆಸ್ಟ್ ಪಂದ್ಯಗಳಲ್ಲಿ ತೇಜ್​ ತಂದೆ ತಂದೆ ಚಂದ್ರಪಾಲ್ ಅವರ ವಿಕೆಟ್ ಪಡೆದಿದ್ದರು 2011 ರಲ್ಲಿ, ಶಿವನಾರಾಯಣ್ ಚಂದ್ರಪಾಲ್ ದೆಹಲಿ ಟೆಸ್ಟ್ ಪಂದ್ಯದಲ್ಲಿ 47 ರನ್‌ಗಳಿಗೆ ಅಶ್ವಿನ್​ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಆಗಿದ್ದರು. ಕೋಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಅವರು 2 ರನ್‌ಗಳಿಗೆ ವಿಕೆಟ್‌ನ ವಿಕೆಟ್​ ಒಪ್ಪಿಸಿದ್ದರು. ಎರಡೂ ಬಾರಿ ಅಶ್ವಿನ್ ಅವರನ್ನು ಎಲ್​ಬಿ ಬಲೆಗೆ ಬೀಳಿಸಿದ್ದರು. ಇದೀಗ ಅವರ ಮಗ ಮೊದಲ ಪಂದ್ಯದಲ್ಲೇ ಕ್ಲೀನ್ ಬೌಲ್ಡ್ ಆಗಿದ್ದಾರೆ

ಪ್ರಸ್ತುತ ವೆಸ್ಟ್​ ಇಂಡೀಸ್ 46 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 105 ರನ್​ಗಳಿಸಿದೆ. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಪಡೆದಿದ್ದಾರೆ.

Cricket India vs West Indies 1st Test live score r Ashwin becomes 1st Indian Bowler to take Wicket of Father and Son in Test.