Ind vs WI: ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ 13 ಆಟಗಾರರ ಬಳಗ ಪ್ರಕಟಿಸಿದ ವೆಸ್ಟ್ ಇಂಡೀಸ್

18-07-23 02:10 pm       Source: Mykhel Kannada   ಕ್ರೀಡೆ

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜುಲೈ 20ರಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸುಲಭವಾಗಿ ಶರಣಾಗಿರುವ ವೆಸ್ಟ್ ಇಂಡೀಸ್ ತಂಡ ಎರಡನೇ ಪಂದ್ಯಕ್ಕಾಗಿ ಸಿದ್ಧವಾಗುತ್ತಿದೆ.

ತವರಿನಲ್ಲಿಯೇ ನಡೆಯುತ್ತಿರುವ ಈ ಸರಣಿಯ ಮೊದಲ ಪಂದ್ಯದಲ್ಲಿ ಸೋತು 0-1ರ ಅಂತರದಿಂದ ಹಿನ್ನಡೆಯಲ್ಲಿರುವ ವೆಸ್ಟ್ ಇಂಡೀಸ್ ತಂಡ ಸರಣಿ ಸಮಬಲಗೊಳಿಸುವ ಒತ್ತಡದಲ್ಲಿದೆ. ಇದಕ್ಕಾಗಿ ವಿಂಡಿಸ್ ಪಡೆ ಮೊದಲ ಬಾರಿಗೆ ಕೆವಿನ್ ಸಿಂಕ್ಲೇರ್ ಅವರನ್ನು ಟೆಸ್ಟ್ ತಂಡಕ್ಕೆ ಸೇರ್ಪಡೆಗೊಳಿಸಿದೆ. ಮೊದಲ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರೇಮನ್ ರೈಫರ್ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ.

ರೈಫರ್ ಅವರನ್ನು ಪ್ರಾಥಮಿಕ ತಂಡದಿಂದ ಕೈಬಿಟ್ಟಿದ್ದರೂ ಇಂಜುರಿ ರಿಸರ್ವ್ ಆಗಿ ತಂಡದ ಜೊತೆಗೆ ಉಳಿದುಕೊಳ್ಳಲಿದ್ದಾರೆ. ಮೊದಲ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿದ್ದ ರೈಫರ್ ಕ್ರಮವಾಗಿ 2 ಮತ್ತು 11 ರನ್‌ಗಳನ್ನು ಗಳಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಅವರು ಆಡದಿರುವ ಕಾರಣದಿಂದಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅನಿವಾರ್ಯವಾಗಿದೆ.

IND vs WI 1st Test, Day 1 Highlights: India 80/0 (23); West Indies 150 all  out after Ashwin fifer; Stumps on Day 1 - Sportstar

ಇನ್ನು ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದ ಅಲಿಕ್ ಅಥನಾಜೆ 47 ಮತ್ತು 28 ರನ್‌ಗಳನ್ನು ಗಳಿಸಿದ್ದು ಎರಡನೇ ಪಂದ್ಯದಲ್ಲಿ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಜರ್ಮೈನ್ ಬ್ಲಾಕ್‌ವುಡ್ ನಾಲ್ಕನೇ ಸ್ಥಾನದಲ್ಲಿ ಉಳಿಯುವುವ ಸಾಧ್ಯತೆಯಿದೆ. ಇನ್ನು ಸಿಂಕ್ಲೇರ್‌ಗೆ ಕರೆ ನೀಡಿರುವ ಕಾರಣ ರಖೀಮ್ ಕಾರ್ನ್‌ವಾಲ್ ತಂಡದಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಆಫ್-ಸ್ಪಿನ್ನರ್ ಆಗಿರುವ ಕೆವಿನ್ ಸಿಂಕ್ಲೇರ್ ಬೌಲಿಂಗ್‌ನಲ್ಲಿ ಪ್ರಥದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಅವರು ಈವರೆಗೆ 18 ಪಂದ್ಯಗಳಲ್ಲಿ 23.98 ಸರಾಸರಿಯಲ್ಲಿ 54 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿರುವ ಇವರು ಆರು ಅರ್ಧಶತಕಗಳೊಂದಿಗೆ 29.07 ಸರಾಸರಿಯಲ್ಲಿ 756 ರನ್ ಗಳಿಸಿದ್ದಾರೆ. 23ರ ಹರೆಯದ ಅವರು ಈಗಾಗಲೇ ವೆಸ್ಟ್ ಇಂಡೀಸ್ ಪರವಾಗಿ ಏಳು ಏಕದಿನ ಮತ್ತು ಆರು ಟಿ20 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 11 ಮತ್ತು 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

India vs West Indies, 1st Test match: Windies bat first; Ishan Kishan,  Yashasvi Jaiswal debut — Check when and where to watch? Check date, squad,  venue, match timing | IND vs WI |

2ನೇ ಟೆಸ್ಟ್‌ಗೆ ವೆಸ್ಟ್ ಇಂಡೀಸ್ ತಂಡ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್ (ಉಪನಾಯಕ), ಅಲಿಕ್ ಅಥಾನಾಜೆ, ಟಾಗೆನರೈನ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ (ವಿಕೆ), ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕ್‌ವಿನ್‌ಜಿಕ್, ಕಿರ್ಕ್ ಸಿಂಕ್ಲೇರ್, ಕೆಮರ್ ರೋಚ್, ಜೋಮೆಲ್ ವಾರಿಕನ್ ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶ್ರೀಕರ್ ಭರತ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕತ್, ನವದೀಪ್ ಸೈನಿ, ಮುಖೇಶ್ ಕುಮಾರ್.

Ind vs WI, West Indies announced 13 member squad with one change for 2nd test against India.