ಬ್ರೇಕಿಂಗ್ ನ್ಯೂಸ್
22-08-23 01:52 pm Source: News18 Kannada ಕ್ರೀಡೆ
ಏಷ್ಯಾ ಕಪ್ 2023 ಆಗಸ್ಟ್ 30 ರಿಂದ ಆರಂಭವಾಗಲಿದೆ. ಇಂದು 17 ಸದಸ್ಯರ ಟೀಂ ಇಂಡಿಯಾದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದರ ಬೆನ್ನಲ್ಲೇ ಪ್ಲೇಯಿಂಗ್ 11 ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಪ್ರತಿಷ್ಠಿತ ಟೂರ್ನಿಯಲ್ಲಿ ಮತ್ತೊಮ್ಮೆ ರೋಹಿತ್ ಶರ್ಮಾ ಮತ್ತು ಶುಭಮನ್ ಜೋಡಿ ಇನ್ನಿಂಗ್ಸ್ ಆರಂಭಿಸಬಹುದು. ಹಿಟ್ ಮ್ಯಾನ್ ಬಗ್ಗೆ ಹೆಚ್ಚು ಹೇಳಬೇಕಿಲ್ಲ.
ಯುವ ಬ್ಯಾಟ್ಸ್‌ಮನ್ ಗಿಲ್ ಪ್ರತಿಭೆ ಕೌಶಲ್ಯಗಳ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಗಿಲ್ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲುವ ಕೌಶಲ್ಯವನ್ನು ಹೊಂದಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲೂ ಇದನ್ನೇ ತೋರಿಸಿದ್ದಾರೆ. ಮಧ್ಯಮ ಕ್ರಮಾಂಕದ ಕಮಾಂಡ್ ವಿಶೇಷವಾಗಿ ವಿರಾಟ್ ಕೊಹ್ಲಿ ಮೇಲೆ ನಿಂತಿದೆ. ವಿರಾಟ್ ಕೊಹ್ಲಿ ಯಾವುದೇ ಸ್ಥಾನದಲ್ಲಿ ಬಂದು ಆಡಿದರೂ, ಅಬ್ಬರಿಸೋದು ಕನ್ಫರ್ಮ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ.



ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಆಡುವುದು ಖಚಿತವಾಗಿದೆ. ಇನ್ನೂ ಆರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಆಡುವ ಸಾಧ್ಯತೆ ಹೆಚ್ಚಿದೆ. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಏಷ್ಯಾಕಪ್‌ನಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಕಾರಣ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಬ್ಯಾಟ್ ಮತ್ತು ಬಾಲ್‌ನಿಂದ ಪಂದ್ಯದ ದಿಕ್ಕನ್ನು ಬದಲಾಯಿಸುವಲ್ಲಿ ನಿಪುಣರು. ಇದನ್ನು ಬಿಟ್ಟರೆ ಫೀಲ್ಡಿಂಗ್‌ನಲ್ಲಿಯೂ ಎಕ್ಸ್‌ಪರ್ಟ್ಸ್.




ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಆಡುವುದು ಖಚಿತವಾಗಿದೆ. ಅದೇ ಸಮಯದಲ್ಲಿ, ಕುಲದೀಪ್ ಯಾದವ್ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಡುವ XI ನಲ್ಲಿ ಅವರು ಕೂಡ ಸ್ಥಾನ ಪಡೆದುಕೊಳ್ಳಬಹುದು. ಏಷ್ಯಾಕಪ್‌ಗಾಗಿ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಸ್ಟ್ಯಾಂಡ್-ಬೈ ಆಟಗಾರ: ಸಂಜು ಸ್ಯಾಮ್ಸನ್
Asia Cup India Squad 2023 Expected Playing 11 Match Dates Captain check details here.
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm