ಚೊಚ್ಚಲ ಪಂದ್ಯವನ್ನಾಡಿದ ಆಸಿಸ್ ಆಟಗಾರನಿಗೆ ಪ್ರೇರಣೆ ನೀಡಿತು ರಾಹುಲ್ ಆಡಿದ ಸ್ಪೂರ್ತಿಯ ಮಾತು

03-12-20 03:56 pm       Source: MYKHEL   ಕ್ರೀಡೆ

ಆಸ್ಟ್ರೇಲಿಯಾ ತಂಡದ ಪರವಾಗಿ ಕ್ಯಾಮರೂನ್ ಗ್ರೀನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲ ಚೊಚ್ಚಲ ಪಂದ್ಯವನ್ನು ಆಡಿದ್ದರು.

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಟಿ ನಟರಾಜನ್ ಪದಾರ್ಪಣೆಯನ್ನು ಮಾಡಿದ್ದರೆ ಅತ್ತ ಆಸ್ಟ್ರೇಲಿಯಾ ತಂಡದ ಪರವಾಗಿ ಕ್ಯಾಮರೂನ್ ಗ್ರೀನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲ ಚೊಚ್ಚಲ ಪಂದ್ಯವನ್ನು ಆಡಿದ್ದರು. ಈ ಸ್ಮರಣೀಯ ಸಂದರ್ಭದಲ್ಲಿ ಆತಂಕದಲ್ಲಿದ್ದ ಕ್ಯಾಮರೂನ್ ಗ್ರೀನ್‌ಗೆ ಭಾರತದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಸ್ಪೂರ್ತಿಯ ಮಾತಿನ ಮೂಲಕ ಹುರಿದುಂಬಿಸಿದ್ದಾರೆ.

ಈ ವಿಚಾರವನ್ನು ಸ್ವತಃ ಕ್ಯಾರೂನ್ ಗ್ರೀನ್ ಹಂಚಿಕೊಂಡಿದ್ದಾರೆ. ಬ್ಯಾಟಿಂಗ್‌ಗೆ ಇಳಿದಾಗ ಎದುರಾಳಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಆಡಿದ ಮಾತನ್ನು ನಾನು ಎಂದಿಗೂ ಮರೆಯಲಾರೆ. ಆ ಕ್ಷಣದಲ್ಲಿ ನನ್ನಲ್ಲಿದ್ದ ಆತಂಕವನ್ನು ಹಿಂದಕ್ಕೆ ಸರಿಯುವಂತೆ ಮಾಡಿದ್ದರು ರಾಹುಲ್ ಎಂದು ಗ್ರೀನ್ ಹೇಳಿದ್ದಾರೆ.

ಸಂಭಾವ್ಯ ತಂಡ, ನೇರಪ್ರಸಾರ "ಕೆಎಲ್ ರಾಹುಲ್ ವಿಕೆಟ್‌ನ ಹಿಂದೆ ನಿಜಕ್ಕೂ ಅದ್ಭುತವಾಗಿ ಸ್ಪೂರ್ತಿಯನ್ನು ನೀಡಿದರು. ಆತ ನನ್ನಲ್ಲಿ ಕೇಳಿದರು ನೀನು ನರ್ವಸ್ ಆಗಿದ್ದೀಯಾ ಎಂದು ಕೇಳಿದರು. ಅದಕ್ಕೆ ನಾನು ಸ್ವಲ್ಪ ನರ್ವಸ್ ಆಗಿದ್ದೇನೆ ಎಂದು ಉತ್ತರಿಸಿದ್ದೆ. ಅದಕ್ಕೆ ಅವರು ಸ್ಪೂರ್ತಿಯ ಮಾತುಗಳ ಮೂಲಕ ನನಗೆ ಪ್ರೇರಣೆಯನ್ನು ನೀಡಿದರು. 'ಉತ್ತಮವಾಗಿ ಆಡು ಯಂಗ್‌ಸ್ಟರ್' ಎಂದು ರಾಹುಲ್ ಬೆಂಬಲಿಸಿದರು.

ರಾಹುಲ್ ಆಡಿದ ಮಾತಿನಿಂದ ನಾನು ಪ್ರೇರಣೆ ಪಡೆದೆ" ಎಂದು ಗ್ರೀನ್ ಹೇಳಿದ್ದಾರೆ. ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾದ ಏಕದಿನ ಕ್ರಿಕೆಟ್‌ನಲ್ಲಿ 230ನೇ ಆಟಗಾರನಾಗಿ ಪದಾರ್ಪಣೆಯನ್ನು ಮಾಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಅವರಿಗೆ ಮಾಜಿ ನಾಯಕ ಸ್ಟೀವ್ ಸ್ಮಿತ್ ಕ್ಯಾಪ್ ವಿತರಿಸಿದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕ್ಯಾಮರೂನ್ 27 ಎಸೆತಗಳಲ್ಲಿ 21 ರನ್ ಬಾರಿಸಿದರು. ಇದರಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.

ಚೊಚ್ಚಲ ಪಂದ್ಯವನ್ನು ಆಡುತ್ತಿರುವ ಕಾರಣ ಎದುರಾಳಿ ಭಾರತದ ಕಡೆಯಿಂದ ಪ್ರತಿಕೂಲ ಸ್ವಾಗತವನ್ನು ಪಡೆಯುವ ನಿರೀಕ್ಷೆಯಲ್ಲಿ ಗ್ರೀನ್ ಇದ್ದರು. ಆದರೆ ಕೆಎಲ್ ರಾಹುಲ್ ಅವರ ವರ್ತನೆಯಿಂದ ಗ್ರೀನ್ ಆಶ್ಚರ್ಯಗೊಂಡರು ಎಂದು 21 ವರ್ಷದ ಯುವ ಆಟಗಾರ ಕ್ಯಾಮರೂನ್ ಗ್ರೀನ್ ಒಪ್ಪಿಕೊಂಡಿದ್ದಾರೆ.

This News Article is a Copy of MYKHEL