2021ರ ಐಪಿಎಲ್‌ನಲ್ಲಿ 2 ಹೆಚ್ಚುವರಿ ತಂಡ ಸೇರ್ಪಡೆಗೆ ಬಿಸಿಸಿಐ ತಯಾರಿ

04-12-20 11:52 am       Source: MYKHEL   ಕ್ರೀಡೆ

2021ರ ಇಂಡಿಯನ್ ಪ್ರೀಮಿಯರ್‌ ಲೀಗ್‌ಗೆ ಎರಡು ಹೆಚ್ಚುವರಿ ತಂಡಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ತಯಾರಿ ನಡೆಸುತ್ತಿದೆ.

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್‌ ಲೀಗ್‌ಗೆ ಎರಡು ಹೆಚ್ಚುವರಿ ತಂಡಗಳನ್ನು ಸೇರ್ಪಡೆಗೊಳಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಯಾರಿ ನಡೆಸುತ್ತಿದೆ. ಬೋರ್ಡ್‌ನ ವಾರ್ಷಿಕ ಸಭೆಯ ವೇಳೆ ಈ ವಿಚಾರವನ್ನು ಚರ್ಚಿಸುವುದಾಗಿ ಬಿಸಿಸಿಐ ಗುರುವಾರ ತಿಳಿಸಿದೆ.

2020ರ ಐಪಿಎಲ್ ಕೊರೊನಾ ಕಾರಣದಿಂದಾಗಿ ಮೂರು ಸಾರಿ ಮುಂದೂಡಲ್ಪಟ್ಟಿತ್ತು. ಅಂತಿಮವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲಾಗಿತ್ತು. ಆದರೆ ಯುಎಇಯಲ್ಲಿ ನಡೆದಿದ್ದ ಐಪಿಎಲ್‌ಗೆ ದೂರದರ್ಶನ, ಜಾಲತಾಣದಲ್ಲಿ ದಾಖಲೆ ಮಟ್ಟದಲ್ಲಿ ವೀಕ್ಷಣೆ ಲಭಿಸಿತ್ತು. 13ನೇ ಆವೃತ್ತಿ ಯಶಸ್ವಿಯಾಗಿರುವುದರಿಂದ ಹುಮ್ಮಸ್ಸಿನಲ್ಲಿರುವ ಬಿಸಿಸಿಐ ಮುಂದಿನ ಆವೃತ್ತಿಗೆ ಹೆಚ್ಚಿನ ತಂಡಗಳನ್ನು ಸ್ಪರ್ಧೆಗಿಳಿಸುವತ್ತ ಒಲವು ತೋರಿದೆ. ಬಿಸಿಸಿಐನ ಖಜಾಂಚಿ ಅರುಣ್ ಧುಮಾಲ್ ಈ ಸಂಗತಿಯನ್ನು ಖಾತರಿಪಡಿಸಿದ್ದಾರೆ.

ಡಿಸೆಂಬರ್ 24ರಂದು ನಡೆಯುವ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಐಪಿಎಲ್ ಎರಡು ತಂಡಗಳ ಸೇರ್ಪಡೆ ಬಗ್ಗೆ ಚರ್ಚೆ ನಡೆಯಲಿದೆ. ಯೋಜನೆಯೂ ಅಲ್ಲೇ ರೂಪುಗೊಳ್ಳಲಿದೆ. ಆ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಧುಮಾಲ್ ತಿಳಿಸಿದ್ದಾರೆ.

This News Article is a Copy of MYKHEL