ಟಿ20 ಕ್ರಿಕೆಟ್‌ನಲ್ಲಿ ಬಾಬರ್, ರೋಹಿತ್ ಶರ್ಮಾ ದಾಖಲೆ ಮೇಲೆ ವಿರಾಟ್ ಕೊಹ್ಲಿ ಕಣ್ಣು

04-12-20 12:30 pm       Source: MYKHEL   ಕ್ರೀಡೆ

ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ಸಜ್ಜಾಗಿದ್ದು ಕೆಲ ದಾಖಲೆಗಳನ್ನು ಮುರಿಯಲು ಕೊಹ್ಲಿ ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು 2-1 ಅಂತರದಿಂದ ಸೋಲು ಕಂಡ ಬಳಿಕ ಟಿ20 ಸರಣಿಯಲ್ಲಿ ತಿರುಗೇಟು ನೀಡಿ ಭರ್ಜರಿ ಕಮ್‌ಬ್ಯಾಕ್ ಮಾಡುವ ಉತ್ಸಾಹದಲ್ಲಿ ಟೀಮ್ ಇಂಡಿಯಾ ಇದೆ. ಟಿ20 ಸರಣಿಯ ಮೊದಲ ಪಂದ್ಯ ಕ್ಯಾನ್‌ಬೆರಾದಲ್ಲಿ ಶುಕ್ರವಾರ ನಡೆಯಲಿದೆ.

ಈ ಮಧ್ಯೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2020ನೇ ಇಸವಿಯನ್ನು ಏಕದಿನ ಕ್ರಿಕೆ್‌ನಲ್ಲಿ ಶತಕವನ್ನು ದಾಖಲಿಸದೇ ಅಂತ್ಯಗೊಳಿಸಿದ್ದಾರೆ. ಆದರೆ ಈ ವರ್ಷ ಆಡಿದ 9 ಏಕದಿನ ಪಂದ್ಯಗಳಲ್ಲಿ 5 ಅರ್ಧ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 12000 ರನ್ ಗಳ ಗುರಿ ತಲುಪಿದ್ದಾರೆ. ಈ ಮೂಲಕ ಈ ಗುರಿಯನ್ನು ವೇಗವಾಗಿ ತಲುಪಿದ ಆಟಗಾರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.



ಇನ್ನು ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ಸಜ್ಜಾಗಿದ್ದು ಈ ಮಾದರಿಯಲ್ಲೂ ಕೆಲ ದಾಖಲೆಗಳನ್ನು ಮುರಿಯಲು ಕೊಹ್ಲಿ ಸಜ್ಜಾಗಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಮುರಿಯಲು ಅವಕಾಶವಿರುವ ದಾಖಲೆಗಳತ್ತ ದೃಷ್ಟಿ ಹಾಯಿಸೋಣ.

ಬಾಬರ್ ಅಜಂ ದಾಖಲೆ

ಟಿ20 ಕ್ರಿಕೆಟ್‌ನಲ್ಲಿ ಸದ್ಯ ಅತ್ಯಂತ ಹೆಚ್ಚಿನ ಸರಾಸರಿ ಹೊಂದಿರುವ ಆಟಗಾರ ಬಾಬರ್ ಅಜಂ. ಸಣ್ಣ ಅಂತರದಿಂದ ವಿರಾಟ್ ಕೊಹ್ಲಿ ಅಜಮ್‌ಗಿಂತ ಹಿಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 59 ರನ್‌ಗಳಿಗಿಂತ ಅಧಿಕ ರನ್ ಗಳಿಸಲು ಸಾಧ್ಯವಾದರೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನನ್ನು ಹಿಂದಿಕ್ಕಲಿದ್ದಾರೆ.

ಈ ಸರಣಿಯಲ್ಲಿ ಶರ್ಮಾ ದಾಖಲೆ ಮುರೀತಾರಾ ಕೊಹ್ಲಿ? ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಅರ್ಧ ಶತಕವನ್ನು ಸಿಡಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಆದರೆ ಮೂರು ಪಂದ್ಯಗಳ ಈ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ 2 ಅರ್ಧ ಶತಕವನ್ನು ದಾಖಲಿಸಿದರೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿರುವ ಈ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲಿದ್ದಾರೆ.

This News Article is a Copy of MYKHEL