ವೇಗವಾಗಿ 1500 ಟಿ20ಐ ರನ್ ದಾಖಲಿಸಿದವರ ಪಟ್ಟಿಗೆ ಸೇರಿದ ಕೆಎಲ್ ರಾಹುಲ್

04-12-20 04:20 pm       Source: MYKHEL   ಕ್ರೀಡೆ

ಕೆಎಲ್ ರಾಹುಲ್ ಐಪಿಎಲ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದೆ. ಆದರೆ ಕೆಎಲ್ ರಾಹುಲ್ ಐಪಿಎಲ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ್ದಾರೆ. ಆರಂಬಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆಸಿಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1500 ರನ್ ದಾಖಲಿಸಿದ ಸಾಧನೆ ಮಾಡಿದ್ದಾರೆ. ಅತ್ಯಂತ ಕಡಿಮೆ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಸೇರಿಕೊಂಡಿದ್ದಾರೆ.



ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1500 ರನ್ ಗಳಿಸಲು 39 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಈ ಮೈಲಿಗಲ್ಲನ್ನು ಇಷ್ಟೇ ಇನ್ನಿಂಗ್ಸ್‌ಗಳಿಂದ ರಾಹುಲ್ ಸೇರಿಸಿಕೊಮಡು ನಾಲ್ವರು ಆಟಗಾರರು ತಲುಪಿದ್ದಾರೆ ಎಂಬುದು ಕಾಕತಾಳೀಯ. ಇದರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಸೇರಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್ ಕೂಡ 39 ಇನ್ನಿಂಗ್ಸ್‌ಗಳಲ್ಲಿ 1500 ರನ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಈಗ ಕೆಎಲ್ ರಾಹುಲ್ ಕೂಡ ಇಷ್ಟೇ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇನ್ನು ಕೆಎಲ್ ರಾಹುಲ್ ಈ ಬಾರಿ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ ಸಾಧನೆಯನ್ನೂ ಮಾಡಿದ್ದಾರೆ. ಅಂಥಾರಾಷ್ಟ್ರೀಯ ಟಿ20 ಕಡಿಮೆ ನಡೆದರೂ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಬಹುಪಾಲು ರನ್ ಗಳಿಸಿದ್ದಾರೆ.

This News Article is a Copy of MYKHEL