ನಪೋಲಿ ಸ್ಟೇಡಿಯಂಗೆ ಫುಟ್ಬಾಲ್‌ ದಂತಕತೆ ಡಿಯಾಗೋ ಮರಡೋನಾ ಹೆಸರು

05-12-20 01:20 pm       Source: MYKHEL   ಕ್ರೀಡೆ

ಇಟಲಿ ಫುಟ್ಬಾಲ್ ತಂಡದ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರು ನಾಮಕರಣ ಮಾಡಲಾಗಿದೆ.

ರೋಮ್: ಇಟಲಿ ಫುಟ್ಬಾಲ್ ತಂಡದ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರು ನಾಮಕರಣ ಮಾಡಲಾಗಿದೆ. ಇತ್ತೀಚೆಗಷ್ಟೇ ನಿಧನರಾಗಿರುವ ಫುಟ್ಬಾಲ್ ದಂತಕತೆ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ಹೆಸರನ್ನು ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ.

ನಪೋಲಿ ತಂಡಕ್ಕೆ ನಾಯಕರಾಗಿ 7 ವರ್ಷಗಳ ಕಾಲ ಮುನ್ನಡೆದ್ದ ಡಿಯಾಗೋ ಮರಡೊನಾ ಎರಡು ಬಾರಿ ಸೀರೀ ಎ ಕಪ್‌ಗಳನ್ನು ಗೆಲ್ಲಿಸಿಕೊಟ್ಟಿದರು. 1984ರಿಂದ 1991ರ ವರೆಗೆ ಡಿಯಾಗೋ ಅವರು ನಪೋಲಿ ತಂಡದ ಬಲವಾಗಿದ್ದರು.

ನೆಪೋಲಿಯ ಸ್ಯಾನ್ ಪಾವೊಲೊ ಸ್ಟೇಡಿಯಂಗೆ 'ಸ್ಟೇಡಿಯೋ ಡಿಯಾಗೋ ಅರ್ಮಾಂಡೋ ಮರಡೋನಾ' ಎಂದು ಮರು ನಾಮಕರಣ ಮಾಡಲು ನೇಪಲ್ಸ್ ನಗರ ಮಂಡಳಿ ಅವಿರೋಧವಾಗಿ ಒಪ್ಪಿಕೊಂಡಿದೆ, ಅನುಮತಿ ನೀಡಿದೆ,' ಎಂದು ಗೋಲ್ ಡಾಕ್ ಕಾಮ್ ವರದಿ ಹೇಳಿದೆ.

ಮಾರ್ಜೆಂಟೀನಾಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಫುಟ್ಬಾಲ್ ದಿಗ್ಗಜ ಮರಡೋನಾ ಅವರು ನವೆಂಬರ್ 25ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

This News Article is a Copy of GIZBOT