United States vs West Indies, T20 World Cup 2024: ದಕ್ಷಿಣ ಆಫ್ರಿಕಾಗೆ ಇಂಗ್ಲೆಂಡ್ ವಿರುದ್ಧ ಏಳು ರನ್ನುಗಳ ರೋಚಕ ಜಯ ; ಅಮೆರಿಕಾ ವಿರುದ್ಧ ವೆಸ್ಟ್ ಇಂಡೀಸ್ ಸುಲಭ ಗೆಲುವು, ಅಂಕ ಪಟ್ಟಿಯಲ್ಲಿ ವೆಸ್ಟ್ ಇಂಡಿಯನ್ನರ ನೆಗೆತ 

22-06-24 11:42 am       HK News Desk   ಕ್ರೀಡೆ

ಅಂತಿಮ ಮೂರು ಓವರ್‌ಗಳಲ್ಲಿ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಮಾರ್ಕೋ ಜಾನೆಸನ್, ಕಾಗಿಸೊ ರಬಾಡ ಹಾಗೂ ಆನ್ರಿಕ್ ನೋಕಿಯ ಅವರ ಪರಾಕ್ರಮದಿಂದ ದಕ್ಷಿಣ ಆಫ್ರಿಕಾ ತಂಡವು ಟಿ 20 ವಿಶ್ವಕಪ್ ಸೂಪರ್ -8 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಏಳು ರನ್‌ಗಳಿಂದ ಪರಾಭವಗೊಳಿಸಿತು.

ಗ್ರಾಸ್ ಐಲೆಟ್, ಜೂನ್.22: ಅಂತಿಮ ಮೂರು ಓವರ್‌ಗಳಲ್ಲಿ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಮಾರ್ಕೋ ಜಾನೆಸನ್, ಕಾಗಿಸೊ ರಬಾಡ ಹಾಗೂ ಆನ್ರಿಕ್ ನೋಕಿಯ ಅವರ ಪರಾಕ್ರಮದಿಂದ ದಕ್ಷಿಣ ಆಫ್ರಿಕಾ ತಂಡವು ಟಿ 20 ವಿಶ್ವಕಪ್ ಸೂಪರ್ -8 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಏಳು ರನ್‌ಗಳಿಂದ ಪರಾಭವಗೊಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್(65 ರನ್, 38 ಎಸೆತ, 4x4, 4x6) ಬಿರುಸಿನ ಆಟದ ನೆರವಿನಿಂದ ಆರು ವಿಕೆಟ್ ಗೆ 163 ರನ್ ಗಳಿಸಿತು. ಡಿಕಾಕ್ ಮತ್ತು ರೀಜಾ ಹೆಂಡ್ರಿಕ್ಸ್(19) ಮೊದಲ ವಿಕೆಟ್ ಗೆ ಭರ್ಜರಿ 86 ರನ್ ಸೇರಿಸಿದರೂ ನಂತರ ಬಂದ ಆಟಗಾರರು ಇದರ ಉಪಯೋಗ ಪಡೆಯಲಿಲ್ಲ. ಕೊನೆಯಲ್ಲಿ ಡೇವಿಡ್‌ ಮಿಲ್ಲರ್(43) ತಂಡದ ಮೊತ್ತವನ್ನು ಹಿಗ್ಗಿಸಿದರು. 

United States vs West Indies Highlights, T20 World Cup 2024: Shai Hope's  Fiery Knock Powers West Indies To Thumping Win vs USA | Cricket News

WI vs USA Highlights, T20 World Cup: West Indies seal crucial 9-wicket  victory | Crickit

T20 World Cup: Roston Chase, Shai Hope star in West Indies' nine-wicket win  against USA | Cricket News - Times of India

United States vs West Indies Live Score, T20 World Cup 2024: Shai Hope  powers West Indies to 9-wicket victory | Cricket News - The Indian Express

In Battle Of Hosts Hopes Blitzkrieg Powers West Indies To Dominating 9  Wicket Win Over USA

ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಆರು ವಿಕೆಟ್ ಗೆ 156 ರನ್ ಮಾಡಲಷ್ಟೇ ಶಕ್ತವಾಗಿ ಸೋಲನುಭವಿಸಿತು. ಒಂದು ಹಂತದಲ್ಲಿ ಹ್ಯಾರಿ ಬ್ರೂಕ್ (53 ರನ್, 37 ಎಸೆತ, 7x4) ಮತ್ತು ಲಿಯಮ್ ಲಿವಿಂಗ್ ಸ್ಟೋನ್ (33) ಆಫ್ರಿಕಾ ಕೈಯಿಂದ ಜಯ ಕಸಿಯುವ ಯತ್ನ ಮಾಡಿದರೂ ಸಫಲವಾಗಲಿಲ್ಲ. 

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ 163/6 (ಡಿಕಾಕ್ 65, ಮಿಲ್ಲರ್ 43, ಹೆಂಡ್ರಿಕ್ಸ್ 19,  ಆರ್ಚರ್‌ 40/3)
ಇಂಗ್ಲೆಂಡ್ 156/6 (ಬ್ರೂಕ್ 53, ಲಿವಿಂಗ್ ಸ್ಟೋನ್ 33, ಕೇಶವ ಮಹಾರಾಜ್ 25/2, ರಬಾಡ 32/2)

ವೆಸ್ಟ್ ಇಂಡೀಸ್ ಜಯಭೇರಿ; ಇಂದು ಬೆಳಗ್ಗೆ ನಡೆದ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ಅಮೇರಿಕಾವನ್ನು 9 ವಿಕೆಟ್ ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಅಮೇರಿಕಾ ಮೊದಲು ಬ್ಯಾಟಿಂಗ್ ಮಾಡಿ 128ಕ್ಕೆ ಆಲೌಟ್ ಆದರೆ ವೆಸ್ಟ್ ಇಂಡೀಸ್ 10.5 ಓವರ್‌ಗಳಲ್ಲ್ಲೇ ಒಂದು ವಿಕೆಟ್ ಗೆ 130 ರನ್ ಗಳಿಸಿ ಗೆಲುವಿನ ನಗು ಬೀರಿತು.

Chasing a target of 129, West Indies were powered to a nine-wicket victory over the USA in their Super 8 game by Shai Hope, who blasted a 39-ball 82 (with eight sixes and four fours). Hope had reached his half century off just 26 balls.