ಟಿ ಟ್ವೆಂಟಿ ವಿಶ್ವಕಪ್ ; ಹಾರ್ದಿಕ್ ಆಟ, ಗೆಲುವಿನ ಓಟ ; ಬಾಂಗ್ಲಾ ವಿರುದ್ಧ ರೋಹಿತ್ ಪಡೆಗೆ ಸುಲಭ ಗೆಲುವು, ಅಫ್ಘನ್ನರ ವಿರುದ್ಧ ಬಲಿಷ್ಠ ಆಸೀಸ್ ಪಡೆ ಅಪ್ಪಚ್ಚಿ ! 

23-06-24 12:40 pm       HK News Desk   ಕ್ರೀಡೆ

ಲಯಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ (50* 27 ಎಸೆತ, 4x4, 3x6) ಅವರ ಆಲ್ರೌಂಡ್ ಆಟದ ನೆರವಿನಿಂದ ಭಾರತ ತಂಡ ಟಿ 20 ವಿಶ್ವಕಪ್ ಟೂರ್ನಿಯ ಸೂಪರ್ 8 ವಿಭಾಗದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 50 ರನ್ ಅಂತರದಿಂದ ಸೋಲಿಸಿದೆ. ತನ್ಮೂಲಕ ಸೆಮಿಫೈನಲ್ ಹಾದಿ ಬಹುತೇಕ ಖಚಿತಗೊಳಿಸಿದೆ‌.

ಆಂಟಿಗುವಾ, ಜೂನ್ 23 : ಲಯಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ (50* 27 ಎಸೆತ, 4x4, 3x6) ಅವರ ಆಲ್ರೌಂಡ್ ಆಟದ ನೆರವಿನಿಂದ ಭಾರತ ತಂಡ ಟಿ 20 ವಿಶ್ವಕಪ್ ಟೂರ್ನಿಯ ಸೂಪರ್ 8 ವಿಭಾಗದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 50 ರನ್ ಅಂತರದಿಂದ ಸೋಲಿಸಿದೆ. ತನ್ಮೂಲಕ ಸೆಮಿಫೈನಲ್ ಹಾದಿ ಬಹುತೇಕ ಖಚಿತಗೊಳಿಸಿದೆ‌.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಭಾರತ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 196 ರನ್ ಸೇರಿಸಿತು. ಈ ಟೂರ್ನಿಯಲ್ಲಿ ಮೊದಲ ಬಾರಿ ಆರಂಭದಲ್ಲೇ ಬಿರುಸಿನ ಆಟಕ್ಕಿಳಿದ ನಾಯಕ ರೋಹಿತ್ ಶರ್ಮ  (23 ರನ್, 11 ಎಸೆತ, 3x4, 1x6) ತಂಡಕ್ಕೆ ಉತ್ತಮ ಆರಂಭ ತಂದಿತ್ತರು. 3 ಸಿಕ್ಸರ್ ಸಿಡಿಸಿ ಅಪಾಯಕಾರಿ ಆಟದ ಮುನ್ಸೂಚನೆ ನೀಡಿದ ವಿರಾಟ್ ಕೊಹ್ಲಿ (37) ಮತ್ತು ಸೂರ್ಯಕುಮಾರ್ ಯಾದವ್(6) ಅವರನ್ನು ಒಂದೇ ಓವರ್‌ನಲ್ಲಿ ಕಬಳಿಸಿದ ತಂಜಿಮ್ ಹಸನ್ ಬಾಂಗ್ಲಾದೇಶಕ್ಕೆ ಮೇಲುಗೈ ತಂದರು. ಈ ಹಂತದಲ್ಲಿ ಜೊತೆ ಸೇರಿದ ರಿಷಬ್ ಪಂತ್(36, 24 ಎಸೆತ, 4x4, 2x6) ಮತ್ತು ಶಿವಮ್ ದುಬೆ(34, 24 ಎಸೆತ, 3x6) ಮರಳಿ ಪಂದ್ಯವನ್ನು ಹಿಡಿತಕ್ಕೆ ತಂದರು. ದುಬೆ ಹಾಗೂ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್ ಗೆ 53 ರನ್ ಸೇರಿಸಿ  ಭಾರತಕ್ಕೆ ಮೇಲುಗೈ ಒದಗಿಸಿದರು. ಕೊನೆಯ ಐದು ಓವರ್‌ಗಳಲ್ಲಿ ಭಾರತ 63 ರನ್ ಸೂರೆಗೈದ ಕಾರಣ ತಂಡದ ಮೊತ್ತ 200ರ ಸಮೀಪಕ್ಕೆ ಬಂತು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಯಾವ ಹಂತದಲ್ಲೂ ಭಾರತಕ್ಕೆ ಸಾಟಿಯಾಗಲಿಲ್ಲ. ಬುಮ್ರಾ (13/2), ಅರ್ಷದೀಪ್ (32/2), ಕುಲದೀಪ್ ಯಾದವ್ (19/3) ದಾಳಿಯ ಮುಂದೆ ಮಂಕಾದ ಬಾಂಗ್ಲಾದೇಶ ಎಂಟು ವಿಕೆಟ್ ಗೆ 146 ರನ್ ಮಾಡಲಷ್ಟೇ ಶಕ್ತವಾಯಿತು. (ಸಂಕ್ಷಿಪ್ತ ಸ್ಕೋರ್ - ಭಾರತ 196/5(ಹಾರ್ದಿಕ್ ಪಾಂಡ್ಯ 50*, ಕೊಹ್ಲಿ‌ 37, ರಿಷಬ್ 36, ದುಬೆ 34, ತಂಜಿಮ್ 32/2, ರಿಷಾದ್ 43/2), ಬಾಂಗ್ಲಾದೇಶ-  146/8(ನಜ್ಮುಲ್ ಹುಸೇನ್ 40, ತಂಜಿಮ್ 29, ರಿಷಾದ್ 24, ಕುಲದೀಪ್ 19/3,  ಬುಮ್ರಾ‌13/2) 

ಅಫ್ಘನ್ ಆಟಕ್ಕೆ ಆಸೀಸ್ ಅಪ್ಪಚ್ಚಿ 

ಕಿಂಗ್ಸ್ ಟೌನ್ ಮೈದಾನದಲ್ಲಿ ನಡೆದ ಮತ್ತೊಂದು ಸೂಪರ್ 8 ಪಂದ್ಯದಲ್ಲಿ ಸಾಂಘಿಕ ಆಟದ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 21 ರನ್ ಅಂತರದಿಂದ ಪರಾಭವಗೊಳಿಸಿ, ಸೆಮಿಫೈನಲ್‌ ಆಸೆಯನ್ನು ಜೀವಂತವಿರಿಸಿಕೊಂಡಿದೆ. 

ಮೊದಲು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ ತಂಡಕ್ಕೆ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ (60, 49 ಎಸೆತ, 4x4, 4x6) ಮತ್ತು ಇಬ್ರಾಹಿಂ ಜರ್ದಾನ್(51, 48 ಎಸೆತ, 6x4) 118 ರನ್ ಗಳ ಉತ್ತಮ ಆರಂಭ ಒದಗಿಸಿದರು. ಬಳಿಕ ಬಂದ ಆಟಗಾರರು ಕಿರು ಕಾಣಿಕೆಗಳ ಮೂಲಕ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ 6 ವಿಕೆಟ್ ಗೆ 148 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಆಸೀಸ್ ಪರ ಪ್ಯಾಟ್ ಕಮ್ಮಿನ್ಸ್ (28/3) ಸತತ ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಪಟ್ಟಿ ಸೇರಿದರು. 

ಗುರಿ‌ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಅಫ್ಘನ್ ಬೌಲರ್ ಗಳು ನಿಯಂತ್ರಣ ಹೇರಿದರು. ಟ್ರಾವಿಸ್ ಹೆಡ್(0), ಡೇವಿಡ್ ವಾರ್ನರ್ (3) ಬೇಗನೆ ಔಟಾದರೂ, ಗ್ಲೆನ್ ಮ್ಯಾಕ್ಸ್ ವೆಲ್ (59, 41 ಎಸೆತ, 6x4, 3x6) ಇರುವ ತನಕವೂ ಆಸೀಸ್ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಗುಲ್ಬಾದಿನ್ ನೈಬ್(20/4) ದಾಳಿಗೆ ನಿರುತ್ತರವಾದ ಆಸೀಸ್ 127ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು.

Hardik Pandya blasted Bangladesh with a 27-ball half-century and Kuldeep Yadav’s three wickets finished off India’s win at the Twenty20 World Cup on Saturday. Pandya struck four boundaries and three sixes in an unbeaten 50 to lead India to 196-5.
Yadav then took 3-19 in four overs to limit Bangladesh to 146-8.