T20 World Cup 2024 semi-finals: ಸೇಡು ತೀರಿಸಿದ 'ಹಿಟ್' ಮ್ಯಾನ್ ಬಳಗ ; ಟಿ ಟ್ವೆಂಟಿ ವಿಶ್ವಕಪ್ ನಿಂದ ಹೊರಬಿದ್ದ ಆಸ್ಟ್ರೇಲಿಯಾ ; ಭಾರತ, ಅಫ್ಘಾನಿಸ್ತಾನ ಉಪಾಂತ್ಯಕ್ಕೆ 

25-06-24 11:54 am       HK News Desk   ಕ್ರೀಡೆ

ಕಳೆದ ವರ್ಷದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಸೋಲಿಗೆ ಸರಿಯಾದ ಪ್ರತೀಕಾರ ತೀರಿಸಿಕೊಂಡ ಭಾರತ ತಂಡ ಟಿ 20 ವಿಶ್ವಕಪ್ ಸೂಪರ್ 8 ವಿಬಾಗದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 24 ರನ್ ಗಳಿಂದ ಸೋಲಿಸಿದೆ.

ಗ್ರಾಸ್ ಐಲೆಟ್, ಜೂನ್.25: ಕಳೆದ ವರ್ಷದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಸೋಲಿಗೆ ಸರಿಯಾದ ಪ್ರತೀಕಾರ ತೀರಿಸಿಕೊಂಡ ಭಾರತ ತಂಡ ಟಿ 20 ವಿಶ್ವಕಪ್ ಸೂಪರ್ 8 ವಿಬಾಗದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 24 ರನ್ ಗಳಿಂದ ಸೋಲಿಸಿದೆ. ಈ ಮಧ್ಯೆ ಅಂತಿಮ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶವನ್ನು 8 ರನ್ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ನಾಯಕ ರೋಹಿತ್ ಶರ್ಮ(92 ರನ್, 41 ಎಸೆತ, 7x4, 8x6) ಭರ್ಜರಿ ಆರಂಭ ಒದಗಿಸಿದರು. ವಿಶ್ವಕಪ್ ಫೈನಲ್ ಸೋಲಿನ ಒಂದೊಂದು ಎಸೆತಕ್ಕೂ ಲೆಕ್ಕ ಚುಕ್ತಾ ಮಾಡುವಂತೆ ಬ್ಯಾಟಿಂಗ್ ಮಾಡಿದ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಮಿಚೆಲ್ ಸ್ಟಾರ್ಕ್ ಎಸೆದ ಎರಡನೇ ಓವರ್‌ನಲ್ಲಿ 29 ರನ್ ದೋಚಿದರು. ಶತಕದ ಗಡುವಿನಲ್ಲಿ ಔಟಾದರೂ ತಂಡವನ್ನು ಸುಸ್ಥಿತಿಗೆ ತಂದಿದ್ದರು. ವಿರಾಟ್ ಕೊಹ್ಲಿ ಖಾತೆ ತೆರೆಯದೆ ಔಟಾದರೂ ರಿಷಬ್ ಪಂತ್(15), ಸೂರ್ಯ ಕುಮಾರ್ ಯಾದವ್ (31, 16 ಎಸೆತ, 3x4, 2x6), ಶಿವಮ್ ದುಬೆ(28), ಹಾರ್ದಿಕ್ ಪಾಂಡ್ಯ(27*, 17 ಎಸೆತ, 1x4, 2x6) ಭಾರತದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ205ಕ್ಕೆ ತಲುಪಿಸಿದರು. 

Afghanistan reach T20 World Cup semi-finals after beating Bangladesh in  thriller – Firstpost

T20 World Cup semifinal: सेमीफाइनल लाइनअप तैयार, 26 को अफगानिस्तान और  दक्षिण अफ्रीका में टक्कर, 27 जून को टीम इंडिया के सामने गत चैंपियन  इंग्लैंड, इस ...

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಮೊದಲ ಓವರ್ ನಲ್ಲೇ ಅರ್ಷದೀಪ್ ಸಿಂಗ್ ಆಘಾತವಿಕ್ಕಿದರು. ಭಾರತದ ವಿರುದ್ಧ ಪ್ರಮುಖ ಟೂರ್ನಿಗಳಲ್ಲಿ ಯಾವಾಗಲೂ ರನ್ ಮಳೆ ಹರಿಸುವ ಟ್ರಾವಿಸ್ ಹೆಡ್ (76, 43 ಎಸೆತ, 9x4, 4x6) ಎರಡನೇ ವಿಕೆಟ್ ಗೆ ನಾಯಕ ಮಿಚೆಲ್ ಮಾರ್ಷ್ (37) ಜೊತೆ 81 ರನ್ ಸೇರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಭಾರತದ ಅತ್ಯುತ್ತಮ ಫೀಲ್ಡಿಂಗ್ ಮತ್ತು ಬೌಲಿಂಗ್ ನೆರವಿನಿಂದ ಆಸೀಸ್ ಏಳು ವಿಕೆಟ್ ಗೆ 181 ರನ್ ಮಾಡಿ ಸೋಲಪ್ಪಿತು.

ಸಂಕ್ಷಿಪ್ತ ಸ್ಕೋರ್
ಭಾರತ 205/5( ರೋಹಿತ್ 92, ಸೂರ್ಯ ಕುಮಾರ್ 31, ದುಬೆ 28, ಪಾಂಡ್ಯ 27*,  ಸ್ಟಾರ್ಕ್ 45/2)
ಆಸ್ಟ್ರೇಲಿಯಾ 181/7(ಹೆಡ್ 76, ಮಾರ್ಷ್ 37, ಮ್ಯಾಕ್ಸ್ ವೆಲ್ 20, ಅರ್ಷದೀಪ್ 37/3, ಕುಲದೀಪ್ 24/2)

After a dramatic end to the Super Eight stage, with Afghanistan winning a thriller against Bangladesh in St Vincent to knock out Australia, the four semi-finalists of the T20 World Cup 2024 have been confirmed: Group 2 toppers South Africa will take on Afghanistan in the first semi-final, while Group 1 leaders India will face England in the second semi-final.