ಬ್ರೇಕಿಂಗ್ ನ್ಯೂಸ್
28-06-24 10:00 am HK News Desk ಕ್ರೀಡೆ
ಗಯಾನ, ಜೂನ್ 28: 2022ರ ಟಿ 20 ವಿಶ್ವಕಪ್ ಸೆಮಿಫೈನಲ್ ನಲ್ಲಿ ತಮ್ಮನ್ನು ಸೋಲಿಸಿದ್ದ ಇಂಗ್ಲೆಂಡ್ ತಂಡದ ವಿರುದ್ಧ ಭರ್ಜರಿ ಪ್ರತೀಕಾರ ತೀರಿಸಿದ ರೋಹಿತ್ ಶರ್ಮ ಬಳಗ ಗುರುವಾರ ತಡರಾತ್ರಿ ನಡೆದ ಟಿ 20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ 68 ರನ್ ಅಂತರದ ಭರ್ಜರಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದೆ.
ತನ್ಮೂಲಕ ಒಂದು ವರ್ಷದ ಅಂತರದಲ್ಲಿ ಮೂರನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ ದಾಖಲೆ ರೋಹಿತ್ ಶರ್ಮ ಬಳಗದ್ದಾಯಿತು. ಕಳೆದ ವರ್ಷ ಭಾರತ ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್ಸ್ ಪ್ರವೇಶ ಮಾಡಿತ್ತು. ಮಳೆಯಿಂದ ಅಡ್ಡಿಗೀಡಾದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಭಾರತವನ್ನು ಬ್ಯಾಟಿಂಗ್ ಗೆ ಇಳಿಸುತ್ತು. ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮೂಲಕವೇ ಹೆಚ್ಚಿನ ಪಂದ್ಯ ಗೆದ್ದಿರುವ ಭಾರತ ಈ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿತು. ಎಂದಿನಂತೆ ರೋಹಿತ್ ಶರ್ಮ(57, 39 ಎಸೆತ, 6x4, 2x6) ಭದ್ರ ಬುನಾದಿ ಹಾಕಿದರೂ, ಸತತ ವೈಫಲ್ಯ ಮುಂದವರಿಸಿದ ವಿರಾಟ್ ಕೊಹ್ಲಿ(9) ಮತ್ತು ಅಪರೂಪದಲ್ಲಿ ಬೇಗನೆ ಔಟಾದ ರಿಷಬ್ ಪಂತ್ (4) ಪವರ್ ಪ್ಲೇ ಮುಗಿಯುವ ವೇಳೆಗೆ ಡಗೌಟ್ ಸೇರಿದರು.
ಈ ಹಂತದಲ್ಲಿ ಜೊತೆಗೂಡಿದ ರೋಹಿತ್ ಮತ್ತು ಸೂರ್ಯ ಕುಮಾರ್ ಯಾದವ್(47, 36 ಎಸೆತ, 4x4, 2x6) ಮೂರನೇ ವಿಕೆಟ್ ಗೆ 73 ರನ್ ಸೇರಿಸಿ ತಂಡವನ್ನು ಆಧರಿಸಿದರು. ಹಾರ್ದಿಕ್ ಪಾಂಡ್ಯ(23), ರವೀಂದ್ರ ಜಡೇಜ(17*) ಮತ್ತು ಅಕ್ಸರ್ ಪಟೇಲ್(10) ಡೆತ್ ಓವರ್‌ಗಳಲ್ಲಿ ಉಪಯುಕ್ತ ಕೊಡುಗೆ ನೀಡಿದ್ದರಿಂದ ಭಾರತ ಏಳು ವಿಕೆಟ್ ಗೆ 171 ರನ್ ಗಳಿಸಿತು.
ಪ್ರತಿಯಾಗಿ ಬ್ಯಾಟಿಂಗ್ ಗೆ ಇಳಿದ ಆಂಗ್ಲರಿಗೆ ಜಸ್ಪ್ರೀತ್ ಬುಮ್ರಾ(12/2) ಆರಂಭದಲ್ಲೇ ಆಘಾತವಿಕ್ಕಿದರು. ಫಿಲ್ ಸಾಲ್ಟ್(5) ಬುಮ್ರಾ ಬಲೆಗೆ ಬಿದ್ದರೆ, ಮೊಯಿನ್ ಅಲಿ(8) ಹಾಗೂ ಜಾನಿ ಬೇರ್ಸ್ಟೋ(0) ಅಕ್ಸರ್ ಪಟೇಲ್(23/3)ಗೆ ಬಲಿಯಾದರು. ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಮೇಲೆ ಪ್ರಹಾರವಿಕ್ಕಿದ ಕುಲದೀಪ್ ಯಾದವ್(19/3) ಆಂಗ್ಲರಿಗೆ ಪ್ರತಿರೋಧ ತೋರಿಸುವ ಅವಕಾಶವನ್ನೇ ನೀಡಲಿಲ್ಲ. ಇದರಿಂದ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 103 ರನ್ ಗೆ ಸರ್ವಪತನ ಕಂಡಿತು. ಅಕ್ಸರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಜೂನ್ 29ರ ಶನಿವಾರ ರಾತ್ರಿ 8ರಿಂದ ನಡೆಯುವ ಫೈನಲ್ ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್ ಭಾರತ 171/7(ರೋಹಿತ್ 57, ಸೂರ್ಯ ಕುಮಾರ್ 47, ಪಾಂಡ್ಯ 23, ಕ್ರಿಸ್ ಜೋರ್ಡಾನ್ 37/3)
ಇಂಗ್ಲೆಂಡ್ 103/10 (ಬ್ರೂಕ್ 25, ಬಟ್ಲರ್ 23, ಆರ್ಚರ್ 21, ಕುಲದೀಪ್ 19/3, ಅಕ್ಸರ್ ಪಟೇಲ್ 23/3, ಬುಮ್ರಾ 12/2)
India versus England in a T20 World Cup semi-final used to bring back memories of a 10-wicket hammering suffered by Rohit Sharma’s side in Adelaide in 2022. India had made 168/6 in that match and England got there in 16 overs. So when the Indian innings ended at 171/7 in this ongoing edition of the event in Georgetown, Guyana, fingers were crossed.
05-02-26 05:52 pm
HK News Desk
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
54 ಸಾವಿರಕ್ಕೂ ಹೆಚ್ಚು RTI ಅರ್ಜಿಗಳು ಬಾಕಿ ; ಮಾಹಿತ...
03-02-26 08:17 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
05-02-26 11:03 pm
Mangalore Correspondent
ಅತಿದೊಡ್ಡ ಸೈಬರ್ ನೆಟ್ವರ್ಕ್ ಪತ್ತೆಹಚ್ಚಿದ ಮಂಗಳೂರು...
05-02-26 10:01 pm
ಆಯುಷ್ ಇಲಾಖೆಯಲ್ಲಿ ಅವ್ಯವಹಾರ ; ಜಿಲ್ಲಾ ಆಯುಷ್ ಅಧಿಕ...
05-02-26 09:29 pm
Nantoor Accident, Protest: ನಂತೂರಿನಲ್ಲಿ ಬಸ್ಸಿನ...
05-02-26 06:20 pm
Accident in Mangalore, Nantoor: ನಂತೂರಿನಲ್ಲಿ ಭ...
04-02-26 10:15 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm