ಬ್ರೇಕಿಂಗ್ ನ್ಯೂಸ್
29-06-24 11:48 pm Sports HK ಕ್ರೀಡೆ
ಬ್ರಿಜ್ ಟೌನ್, ಜೂ 29: ದಕ್ಷಿಣ ಆಫ್ರಿಕಾ 30 ಎಸೆತಗಳಲ್ಲಿ 30 ರನ್ ಗಳಿಸಬೇಕಿದ್ದಾಗ ಬೌಲಿಂಗ್ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿದ ದಕ್ಷಿಣ ಆಫ್ರಿಕಾ ಟಿ 20 ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಏಳು ರನ್ ಗಳಿಂದ ಶರಣಾಗಿದ್ದು ರೋಹಿತ್ ಶರ್ಮ ಬಳಗ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.
ತನ್ಮೂಲಕ ದೀರ್ಘ ಸಮಯದಿಂದ ಐಸಿಸಿ ಟ್ರೋಫಿಯಿಂದ ವಂಚಿತವಾಗಿದ್ದ ಭಾರತ ಶಾಪ ವಿಮೋಚನೆ ಮಾಡಿಕೊಂಡಿದ್ದಲ್ಲದೆ ಕೋಚ್ ರಾಹುಲ್ ದ್ರಾವಿಡ್ ಗೆ ಗೆಲುವಿನ ವಿದಾಯ ಹೇಳಿದೆ. ಅಲ್ಲದೆ ಏಕದಿನ ವಿಶ್ವಕಪ್ ಮತ್ತು ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ನ ಸೋಲಿನ ಕಹಿಯನ್ನು ಮರೆಯುವಂತಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ವಿರಾಟ್ ಕೊಹ್ಲಿ ಮೊದಲ ಓವರ್ನಲ್ಲೇ ಮೂರು ಬೌಂಡರಿ ಬಾರಿಸಿ ಶುಭಾರಂಭದ ಸೂಚನೆ ನೀಡಿದರು. ಆದರೆ ನಾಯಕ ರೋಹಿತ್ ಶರ್ಮ(9) ಮತ್ತು ರಿಷಬ್ ಪಂತ್(0)ಬಅವರು ಕೇಶವ ಮಹಾರಾಜ್(23/2) ಎಸೆದ ಎರಡನೇ ಓವರ್ನಲ್ಲೇ ಪೆವಿಲಿಯನ್ ಸೇರಿಕೊಂಡರು. ಸೂರ್ಯ ಕುಮಾರ್ ಯಾದವ್ (3) ಕೂಡ ಪವರ್ ಪ್ಲೇ ಮುಗಿಯುವ ಮೊದಲೇ ಔಟಾದಾಗ ಭಾರತದ ಖಾತೆಯಲ್ಲಿದ್ದುದು ಕೇವಲ 34 ರನ್.
ಭಡ್ತಿ ಪಡೆದು ಬಂದ ಅಕ್ಸರ್ ಪಟೇಲ್ (47, 31 ಎಸೆತ, 1x4, 4x6) ನಿಧಾನಗತಿಯ ಆಟ ಆಡುತ್ತಿದ್ದ ವಿರಾಟ್ ಕೊಹ್ಲಿ ಜೊತೆ ನಾಲ್ಕನೇ ವಿಕೆಟ್ ಗೆ 72 ರನ್ ಸೇರಿಸಿ ದುರದೃಷ್ಟವಶಾತ್ ರನೌಟಾದರು. ನಂತರ ಬಂದ ಶಿವಮ್ ದುಬೆ (27) ಭಾರತದ ಮೊತ್ತ ಹಿಗ್ಗಿಸಿದರು. ತೀರ ನಿಧಾನಗತಿಯ ಆಟವಾಡುತ್ತಿದ್ದ ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಬಳಿಕವಷ್ಟೇ ಆಕ್ರಮಣಕಾರಿ ಆಟವಾಡಿ ಅಂತಿಮವಾಗಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ ಔಟಾದರು. ಇದಕ್ಕಾಗಿ ಅವರು 59 ಎಸೆತ ವ್ಯಯಿಸಿದ್ದರು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಟಿ 20 ಫೈನಲ್ ಇತಿಹಾಸದಲ್ಲೇ ಇದು ಅತ್ಯಂತ ಗರಿಷ್ಠ ಮೊತ್ತವೆನಿಸಿತು. ಈ ಮೂಲಕ 2021ರಲ್ಲಿ ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್ ವಿರುದ್ಧ ದಾಖಲಿಸಿದ 173/2ರ ಮೊತ್ತವನ್ನು ಹಿಂದೆ ಹಾಕಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಆರಂಭದಲ್ಲೇ ಪ್ರಬಲ ಏಟು ನೀಡಿದರು. ಆರಂಭಿಕ ರೀಜಾ ಹೆಂಡ್ರಿಕ್ಸ್(4) ಮತ್ತು ನಾಯಕ ಐಡನ್ ಮಾರ್ಕ್ರಮ್(4) ತಂಡದ ಖಾತೆಯಲ್ಲಿ 12 ರನ್ ಇರುವಾಗ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ತಂಡವನ್ನು ಆಧರಿಸಿದ ಕ್ವಿಂಟನ್ ಡಿಕಾಕ್ (39, 31 ಎಸೆತ, 4x4, 1x6) ಮತ್ತು ಟ್ರಿಸ್ಟನ್ ಸ್ಟಬ್ಸ್ (31, 21 ಎಸೆತ, 3x4, 1x6) ಮೂರನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಸೇರಿಸಿ ಭಾರತವನ್ನು ಕಾಡಿದರು. ಅಕ್ಸರ್ ಪಟೇಲ್ ಸ್ಟಬ್ಸ್ ವಿಕೆಟ್ ಪಡೆದು ಪಂದ್ಯವನ್ನು ಮತ್ತೆ ಭಾರತದತ್ತ ಹೊರಳಿಸಿದರು.
ಸ್ಟಬ್ಸ್ ಬಳಿಕ ಡಿಕಾಕ್ ಜೊತೆಗೂಡಿದ ಹೆನ್ರಿಕ್ ಕ್ಲಾಸೆನ್ (52, 27 ಎಸೆತ, 2x4, 5x6) ಸಿಕ್ಸರ್ ಗಳ ಮೂಲಕವೇ ಭಾರತವನ್ನು ಕಂಗೆಡಿಸಿದಾಗ ಅರ್ಷದೀಪ್ ಸಿಂಗ್ ಈ ಜೊತೆಯಾಟಕ್ಕೆ ಅಂತ್ಯ ಹಾಡಿದರು. ಡಿಕಾಕ್ ಪತನದ ಬಳಿಕ ಜೊತೆ ಸೇರಿದ ಮಿಲ್ಲರ್ ಮತ್ತು ಕ್ಲಾಸೆನ್ ಭಾರತದ ಬೌಲರ್ ಗಳನ್ನು ಕಾಡಿದರು. ಟೂರ್ನಿಯ ಯಶಸ್ವಿ ಬೌಲರ್ ಗಳಲ್ಲೊಬ್ಬರಾದ ಕುಲದೀಪ್ ಯಾದವ್(45/0) ದುಬಾರಿಯಾದರು. ಅಕ್ಸರ್ ಪಟೇಲ್ (49/1) ಕೂಡ ಪರಿಣಾಮ ಬೀರಲಿಲ್ಲ. ಪ್ರಮುಖ ಪಂದ್ಯದಲ್ಲೇ ಭಾರತದ ಸ್ಪಿನ್ನರ್ ಗಳು ಕೈಕೊಟ್ಟರು. ಅಕ್ಸರ್ ಪಟೇಲ್ ಎಸೆದ ಓವರ್ ನಲ್ಲಿ 24 ರನ್ ದೋಚಿದ ಕ್ಲಾಸೆನ್ ಪಂದ್ಯವನ್ನು ಮರಳಿ ದಕ್ಷಿಣ ಆಫ್ರಿಕಾ ತೆಕ್ಕೆಗೆ ತಂದಾಗಿತ್ತು.
ಆದರೆ 17ನೇ ಓವರ್ ನ ಮೊದಲ ಎಸೆತದಲ್ಲಿ ಕ್ಲಾಸೆನ್ ಔಟಾದಾಗ ಮತ್ತೆ ಭಾರತದ ಪಾಳಯದಲ್ಲಿ ಭರವಸೆ ಮೂಡಿತು. ಕೊನೆಯ ಐದು ಓವರ್ನಲ್ಲಿ ಚಮತ್ಕಾರ ಮಾಡಿದ ಭಾರತ ದಕ್ಷಿಣ ಆಫ್ರಿಕಾ ವನ್ನು 169 ರನ್ ಗೆ ಕಟ್ಟಿ ಹಾಕಿ ಗೆಲುವನ್ನು ತನ್ನತ್ತ ಸೆಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರ್ ;
India edged past South Africa by 7 runs in the final match of T20 World Cup 2024 at Kensington Oval, Barbados. Chasing 177 in the game, South Africa were restricted to 169/8 in 20 overs.
04-10-24 09:18 pm
HK News Desk
ಬೆಂಗಳೂರು ; 3 ಪ್ರತಿಷ್ಠಿತ ಕಾಲೇಜುಗಳಿಗೆ ಹುಸಿ ಬಾಂ...
04-10-24 08:25 pm
Dinesh Gundu Rao, Savarkar: ಸಾವರ್ಕರ್ ಮಾಂಸಾಹಾರ...
04-10-24 12:38 pm
Vijay Tata, HD Kumaraswamy, Ramesh Gowda: ಚನ್...
04-10-24 12:02 pm
Lawyer Jagadish, Big Boss Kannada: ಬಿಗ್ ಬಾಸ್...
03-10-24 08:37 pm
05-10-24 06:40 pm
HK News Desk
Tirupati laddu row, CBI: ತಿರುಪತಿ ಲಡ್ಡಿನಲ್ಲಿ ಕ...
04-10-24 07:10 pm
Isha foundation raid, Court: ಇಶಾ ಫೌಂಡೇಶನ್ ಆಶ್...
02-10-24 02:10 pm
Israel-Iran war: ಇಸ್ರೇಲ್ ಮೇಲೆ ಮುಗಿಬಿದ್ದ ಇರಾನ್...
02-10-24 11:43 am
Fire in Thailand: ಥಾಯ್ಲೆಂಡ್ ; ಸ್ಕೂಲ್ ಬಸ್ ಟಯರ...
01-10-24 07:36 pm
05-10-24 10:54 pm
Mangalore Correspondent
Mangalore crime, Arun Ullal: ಬೇರೆಯವರ ಹಾಲ್ ಗಳಲ...
05-10-24 10:06 pm
Mangalore Pradeep Acharya, powerlifting: ಕಾಮನ...
05-10-24 07:11 pm
Mangalore News, Israel Travels Bus: ಇಸ್ರೇಲ್ ಟ...
05-10-24 04:42 pm
Nalin Kateel, Mangalore: ನಮ್ಮನ್ನು 40 ಪರ್ಸೆಂಟ್...
05-10-24 03:54 pm
05-10-24 08:26 pm
Mangalore Correspondent
ಬೆಂಗಳೂರು ಏರ್ಪೋರ್ಟಲ್ಲಿ ಸಿಕ್ಕಿಬಿದ್ದಿದ್ದೇನೆ, ದೊಡ...
03-10-24 10:49 pm
BMTC Conductor Stabbed, Bangalore crime; ಫುಟ್...
02-10-24 05:44 pm
CCB Mangalore Police, Drugs: ತಲಪಾಡಿ ಗಡಿಭಾಗದಲ್...
02-10-24 04:45 pm
Vardhman Group, Digital Arrest, Fraud; ವರ್ಧಮಾ...
02-10-24 04:03 pm