ಭಾರತ vs ಆಸ್ಟ್ರೇಲಿಯಾ 3ನೇ ಟಿ20: ಭಾರತದ ಗೆಲುವಿಗೆ 187 ರನ್‌ಗಳ ಗುರಿ ನೀಡಿದ ಆಸ್ಟ್ರೇಲಿಯಾ

08-12-20 04:23 pm       Source: MYKHEL   ಕ್ರೀಡೆ

ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಭರ್ಜರಿ ಪ್ರದರ್ಶನದಿಂದ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 186ರನ್ ಗಳಿಸಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲಿಗೆ ಬ್ಯಾಟಿಂಗ್ ನಡೆಸಿದ್ದು ಭಾರತಕ್ಕೆ ಸವಾಲಿನ ಗುರಿಯನ್ನು ನೀಡಿದೆ. ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಭರ್ಜರಿ ಪ್ರದರ್ಶನದಿಂದ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 186ರನ್ ಗಳಿಸಿದೆ.

ಆಸ್ಟ್ರೇಲಿಯಾ ತಂಡದ ಪರವಾಗಿ ಮ್ಯಾಥ್ಯೂ ವೇಡ್ ಸತತ ಎರಡನೇ ಪಂದ್ಯದಲ್ಲಿ ಅರ್ಧ ಶತಕದ ಪ್ರದರ್ಶನವನ್ನು ನೀಡಿದ್ದಾರೆ. ಆರಂಭದಿಂದಲೇ ಭರ್ಜರಿ ಹೊಡೆತಕ್ಕೆ ಮುಂದಾದ ವೇಡ್ ಆಸಿಸ್ ಇನ್ನಿಂಗ್ಸ್‌ನ ಕಡೇ ಹಂತದಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಸಂದರ್ಭದಲ್ಲಿ 53 ಎಸೆತಗಳನ್ನು ಎದುರಿಸಿ 80 ರನ್ ಗಳ ಕಾಣಿಗೆ ನೀಡಿದ್ದಾರೆ. ಇದರಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು.


ಆಸಿಸ್ ತಂಡದ ಪರವಾಗಿ ನಾಯಕ ಆರೋನ್ ಫಿಂಚ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದ ಸ್ಟೀವ್ ಸ್ಮಿತ್ ಕೂಡ 24 ರನ್‌ಗಳಿಗೆ ಔಟಾದರು. ಆದರೆ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಂದು ಅದ್ಭುತ ಆಟವನ್ನು ಭಾರತದ ವಿರುದ್ಧ ಪ್ರದರ್ಶಿಸಿದ್ದಾರೆ. ಮೂರನೇ ಟಿ20 ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಅರ್ಧ ಶತಕವನ್ನು ಬಾರಿಸಿದರು. 36 ಎಸೆತ ಎದುರಿಸಿದ ಮ್ಯಾಕ್ಸ್‌ವೆಲ್ 54 ರನ್ ಬಾರಿಸಿದರು. ಈ ಮೂಲಕ ತಂಡದ ದೊಡ್ಡ ಮೊತ್ತ ಗಳಿಸಲು ಕಾರಣರಾದರು. ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ಸಿಡಿದಿದೆ.



ಟೀಮ್ ಇಂಡಿಯಾ ಪರವಾಗಿ ವಾಶಿಂಗ್ಟನ್ ಸುಂದರ್ 2 ವಿಕೆಟ್ ಕಿತ್ತು ಮಿಂಚಿದ್ದಾರೆ. ಉಳಿದಂತೆ ಟಿ ನಟರಾಜನ್ ಹಾಗೂ ಶಾರ್ದೂಲ್ ಟಾಕೂರ್ ತಲಾ ಒಂದು ವಿಕೆಟ್ ಪಡೆದರು. ಮೂರನೇ ಟಿ20 ಪಂದ್ಯದಲ್ಲೂ ಭಾರತ ಕೆಲ ಜೀವದಾನವನ್ನು ಆಸ್ಟ್ರೇಲಿಯಾ ದಾಂಡಿಗರಿಗೆ ನೀಡಿದೆ.

This News Article is a Copy of MYKHEL