6ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಮುಂದೂಡಿಕೆ

09-12-20 12:50 pm       Source: MYKHEL   ಕ್ರೀಡೆ

ಕೊರೊನಾವೈರಸ್ ಕಾರಣದಿಂದಾಗಿ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ನಿರ್ಧಾರವನ್ನು ಆಯೋಜಕರು ಪ್ರಕಟಿಸಿದ್ದಾರೆ.

ನವದೆಹಲಿ, ಡಿಸೆಂಬರ್ 9: 6ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್‌) ಮುಂದೂಡಲ್ಪಟ್ಟಿದೆ. ಕೊರೊನಾವೈರಸ್ ಕಾರಣದಿಂದಾಗಿ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ನಿರ್ಧಾರವನ್ನು ಆಯೋಜಕರು ಪ್ರಕಟಿಸಿದ್ದಾರೆ.

ವಿಶ್ವದ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಅತೀ ಹೆಚ್ಚು ಬಹುಮಾನದ ಮೊತ್ತವಿರುವ ಅದ್ದೂರಿ ಟೂರ್ನಿಗಳಲ್ಲಿ ಒಂದಾಗಿ ಭಾರತದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಗುರುತಿಸಿಕೊಂಡಿತ್ತು. ವಿಶ್ವದ ಬಲಿಷ್ಠ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡು ಗಮನ ಸೆಳೆಯುತ್ತಿದ್ದರು.

ಎಣಿಕೆಯಂತೆ ಪಿಬಿಎಲ್ ಈ ವರ್ಷವೇ ನಡೆಯುತ್ತಿದ್ದರೆ ಡಿಸೆಂಬರ್ ಕೊನೇ ವಾರ ನವದೆಹಲಿ, ಮುಂಬೈ ಮತ್ತು ಪೂಣೆ ತಾಣಗಳಲ್ಲಿ ನಡೆಯುತ್ತಿತ್ತು. ಆದರೆ ಟೂರ್ನಿ ಮುಂದೂಡಲ್ಪಟ್ಟಿದೆ. ಭಾರತದಲ್ಲಿ ಕೊರೊನಾಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲವಾದ್ದರಿಂದ ಪಂದ್ಯಾಟ ಮುಂದೂಡುವ ನಿರ್ಧಾರ ತಾಳಲಾಗಿದೆ.

ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ (ಬಿಎಐ) ಅಡಿಯಲ್ಲಿರುವ ಟೂರ್ನಿಯ ಅಧಿಕೃತ ಪರವಾನಗಿ ಹೊಂದಿರುವ 'ಸ್ಪೋರ್ಟ್ಸ್‌ಲೈವ್' ಟೂರ್ನಿ ಮುಂದೂಡುವ ನಿರ್ಧಾರ ತಾಳಿದೆ.

This News Article is a Copy of MYKHEL