ಮತ್ತೆ ದೇಶೀಯ ಕ್ರಿಕೆಟ್‌ಗೆ ಯುವರಾಜ್?

15-12-20 03:30 pm       Source: MYKHEL Madhukara Shetty   ಕ್ರೀಡೆ

ಯುವರಾಜ್ ಸಿಂಗ್ ಮತ್ತೊಮ್ಮೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿದೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೊಮ್ಮೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಪಂಜಾಬ್ ಹೆಸರಿಸಿರುವ 30 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಹೆಸರು ಕೂಡ ಸೇರಿಕೊಂಡಿದೆ. ಆದರೆ ಯುವರಾಜ್ ಸಿಂಗ್ ಆಡಲು ಬಿಸಿಸಿಐ ಅನುಮತಿ ಅಗತ್ಯವಾಗಿದೆ. ಯುವರಾಜ್ ಸಿಂಗ್ ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ನಿವೃತ್ತಿಯನ್ನು ಪಡೆದುಕೊಂಡಿದ್ದರು. ಆದರೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಯುವರಾಜ್ ಸಿಂಗ್ ಬಳಿ ವಿಶೇಷ ಮನವಿಯನ್ನು ಮಾಡಿಕೊಂಡಿದ್ದು ನಿವೃತ್ತಿ ವಾಪಾಸ್ ಪಡೆದು ಪಂಜಾಬ್ ಪರ ಕಣಕ್ಕಿಳಿಯಲು ಮನವಿ ಮಾಡಿಕೊಂಡಿತ್ತು.



ಬಿಸಿಸಿಐಗೆ ಯುವಿ ಪತ್ರ ಪಂಜಾಬ್ ಕ್ರಿಕೆಟ್ ಅಸೊಸಿಯೇಶನ್‌ನ ಮನವಿಯ ಹಿನ್ನೆಲೆಯಲ್ಲಿ ಯುವರಾಜ್ ಸಿಂಗ್ ತಮ್ಮ ನಿವೃತ್ತಿ ವಾಪಾಸ್ ಪಡೆದು ಮತ್ತೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಅನುಮತಿ ಕೋರಿ ಪತ್ರವನ್ನು ಬರೆದಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಕ್ರಿಕ್ ಬಜ್‌ಜೊತೆಗೆ ಈ ಬಗ್ಗೆ ಮಾತನಾಡಿದ್ದ "ಯುವರಾಜ್ ಸಿಂಗ್ ನಾನು ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ್ದೇನೆ. ಈಗ ಬಿಸಿಸಿಐ ನನಗೆ ಮತ್ತೆ ಅನುಮತಿಯನ್ನು ನೀಡಿದರೆ ಪಂಜಾಬ್ ಪರವಾಗಿ ಆಡುತ್ತೇನೆ" ಎಂದು ಹೇಳಿದ್ದರು.


ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಂಡಿರುವ ಯುವಿ ಆದರೆ ನಿವೃತ್ತಿಯನ್ನು ಪಡೆದ ಬಳಿಕ ಯುವರಾಜ್ ಸಿಂಗ್ ಕೆಲ ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಕೂಡ ಪಾಲ್ಗೊಂಡಿದ್ದಾರೆ. ನಿವೃತ್ತಿಯ ನಂತರ ಮಾತ್ರವೇ ಭಾರತೀಯ ಆಟಗಾರರಿಗೆ ಬಿಸಿಸಿಐ ಕಡೆಯಿಂದ ಎನ್‌ಒಸಿ ಪಡೆದು ಈ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ನಿವೃತ್ತಿ ಪಡೆಯದೆ ಆಡಿದರೆ ಅವರನ್ನು ಬಿಸಿಸಿಐ ನಿಷೇಧಿಸುವ ನಿಯಮ ಬಿಸಿಸಿಐ ಹೊಂದಿದೆ. ಹೀಗಾಗಿ ಯುವರಾಜ್ ಸಿಂಗ್ ವಿಚಾರದಲ್ಲಿ ಬಿಸಿಸಿಐ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

This News Article is a Copy of MYKHEL