ಐಎಸ್‌ಎಲ್: ಅಂಕ ಹಂಚಿಕೊಂಡ ಮುಂಬೈ ಸಿಟಿ, ಜೆಮ್ಷೆಡ್ಪುರ ಎಫ್‌ಸಿ

15-12-20 04:17 pm       Source: MYKHEL   ಕ್ರೀಡೆ

ಹೀರೋ ಇಂಡಿಯನ್ ಸೂಪರ್ ಲೀಗ್ ನ 28ನೇ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು.

ಗೋವಾ: ಜೆಮ್ಷೆಡ್ಪುರ ಎಫ್ ಸಿ ಪರ ನೆರಿಜಸ್ ವಾಸ್ಕಿಸ್ (9ನೇ ನಿಮಿಷ) ಹಾಗೂ ಮುಂಬೈ ಸಿಟಿ ಪರ ಬಾರ್ಥಲೋಮ್ಯೊ ಒಗ್ಬಚೆ (15ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 28ನೇ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು. ನಿರೀಕ್ಷೆಯಂತೆ ಮುಂಬೈ ಸಿಟಿ ಹಾಗೂ ಜೆಮ್ಷೆಡ್ಪುರ ತಂಡಗಳ ನಡುವಿನ ಪ್ರಥಮಾರ್ಧ ಅತ್ಯಂತ ರೋಚಕವಾಗಿ ನಡೆಯಿತು. ಆಕ್ರಮಣಕಾರಿ ಆಟವಾಡಿದ ಇತ್ತಂಡಗಳಿಗೆ ಸಮಬಲದ ಯಶಸ್ಸು.

ಬಾರ್ಥಲೋಮ್ಯೋ ಒಗ್ಬಚೆ ಮಾಡಿದ ಪ್ರಮಾದದಿಂದಾಗಿ ಜೆಎಫ್ ಸಿ 9ನೇ ನಿಮಿಷದಲ್ಲಿ ಗೊಲು ಗಳಿಸಿ ಮುನ್ನಡೆಯಿತು. ನೆರಿಜಸ್ ವಾಸ್ಕಿಸ್ ಗಳಿಸಿ ಗೋಲು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಪಂದ್ಯದ ಆರಂಭದಲ್ಲಿ ಸಾಮಾನ್ಯ ಪಾಸ್ ಗಳು ಉದಾಸೀನದಿಂದ ಕೂಡಿರುತ್ತದೆ. ಒಗ್ಬಚೆ ನೀಡಿದ ಪಾಸ್ ಅದೇ ರೀತಿಯಿಂದ ಕೂಡಿತ್ತು.

ಜಾಕಿಚಾಂದ್ ಸಿಂಗ್ ಈ ಪಾಸನ್ನು ನಿಯಂತ್ರಿಸಿದರು. ವೇಗದಲ್ಲಿ ಚೆಂಡನ್ನು ಮುನ್ನಡೆಸಿದ ಸಿಂಗ್ ಪೆನಾಲ್ಟಿ ವಲಯಕ್ಕೆ ಚೆಂಡನ್ನು ಪಾಸ್ ಮಾಡಿದರು. ಸಮಯ ಹಾಗೂ ಅಂತರ ಎರಡರ ಸದುಪಯೋಗ ಪಡೆದ ವಾಸ್ಕಿಸ್ ಸುಲಭವಾಗಿ ಗೋಲು ಗಳಿಸಿದರು.

ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ ಜೆಎಫ್ ಸಿ ಯ ಈ ಮುನ್ನಡೆಯ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಜೆಎಫ್ ಸಿ ಗೋಲು ಗಳಿಸುವಲ್ಲಿ ಕಾರಣರಾಗಿದ್ದ ಒಗ್ಬಚೆ ತಮ್ಮ ತಂಡಕ್ಕೆ ನೆರವಾಗಿ ಆ ನೋವನ್ನು ಕೂಡಲೇ ಮರೆಯುವಂತೆ ಮಾಡಿದರು. ಲೆ ಫ್ರಾಂಡೆ ಅವರ ಕಾರ್ನರ್ ಕಿಕ್ ಬಿಪಿನ್ ಸಿಂಗ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಅವರು ಚೆಂಡನ್ನು ಬಾರ್ಥಲೋಮ್ಯೊ ಒಗ್ಬಚೆಗೆ ನೀಡಿದರು. ಒಗ್ಬಚೆ ಎದುರಾಳಿ ತಂಡದ ಗೋಲ್ ಕೀಪರ್ ಟಿ ಪಿ ರೆಹನೇಶ್ ಅವರನ್ನು ವಂಚಿಸುವಲ್ಲಿ ಸಫಲರಾದರು. ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಐಟರ್ ಮನ್ರಾಯ್ ಅವರು ಎರಡನೇ ಬಾರಿಗೆ ರೆಡ್ ಹಳದಿ ಕಾರ್ಡ್ ಗಳಿಸಿ ರೆಡ್ ಕಾರ್ಡ್ ಮೂಲಕ ಅಂಗಣದಿಂದ ಹೊರನಡೆದದ್ದು ಟಾಟಾ ಪಡೆಗೆ ತುಂಬಲಾರದ ನಷ್ಟವಾಯಿತು. ಕೇವಲ 10 ಮಂದಿ ಆಟಗಾರರಿದ್ದರೂ ಜೆಎಫ್ ಸಿ ಉತ್ತಮ ರೀತಿಯಲ್ಲಿ ಹೋರಾಟ ನೀಡಿತು.

This News Article is a Copy of MYKHEL