ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಡುವ 11 ಆಟಗಾರರನ್ನು ಪ್ರಕಟಿಸಿದ ಬಿಸಿಸಿಐ

16-12-20 02:39 pm       Source: MYKHEL Madhukara Shetty   ಕ್ರೀಡೆ

ಕೋಹ್ಲಿ ನೇತೃತ್ವದ ಈ ತಂಡದ ಆರಂಭಿಕ ಆಟಗಾರರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಅಡಿಲೇಡ್‌ನಲ್ಲಿ ಈ ಪಂದ್ಯ ಆರಂಭವಾಗಲಿದ್ದು ಈ ಪಂದ್ಯ ಡೇ-ನೈಟ್ ಪಂದ್ಯವಾಗಿ ಸಾಗಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಆಡುವ 11 ಆಟಗಾರರ ಪಟ್ಟಿಯನ್ನು ಬಿಸಿಸಿಐ ಘೋಷಿಸಿದೆ.

ಕೋಹ್ಲಿ ನೇತೃತ್ವದ ಈ ತಂಡದ ಆರಂಭಿಕ ಆಟಗಾರರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಮಯಾಂಕ್ ಅಗರ್ವಾಲ್ ಜೊತೆಗೆ ಪೃಥ್ವಿ ಶಾ ಟೀಮ್ ಇಂಡಿಯಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಶುಭ್ಮನ್ ಗಿಲ್ ಹಾಗೂ ಕೆಎಲ್ ರಾಹುಲ್‌ಗೆ ಈ ತಂಡದಲ್ಲಿ ನಿರಾಸೆ ಉಂಟಾಗಿದೆ.



ಆಡುವ ಬಳಗದಲ್ಲಿಲ್ಲ ರಾಹುಲ್ ಕೆಎಲ್ ರಾಹುಲ್

ಮಯಾಂಕ್ ಅಗರ್ವಾಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿತ್ತು. ಆದರೆ ಈ ತಂಡದಲ್ಲಿ ಕೆಎಲ್ ರಾಹುಲ್ ಅವರನ್ನು ಹೊರಗಿಡಲಾಗಿದೆ. ಸೀಮಿತ ಓವರ್‌ಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ರಾಹುಲ್ ಟೆಸ್ಟ್‌ನಲ್ಲಿ ಸುದೀರ್ಘ ಸಮಯದಿಂದ ಅವಕಾಶವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.



ಅಗ್ರ ಹಾಗೂ ಮಧ್ಯಮ ಕ್ರಮಾಂಕ

ಅಗ್ರ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಚೇತೇಶ್ವರ್ ಪೂಜಾರ ಸಾಥ್ ನೀಡಲಿದ್ದಾರೆ. ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಾಹ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಲಿದ್ದಾರೆ. ವಿಕೆಟ್ ಕೀಪಿಂಗ್‌ಗೆ ವಿಚಾರವಾಗಿ ಪಂತ್ ಹಾಗೂ ಸಾಹಾ ಮಧ್ಯೆ ಯಾರ ಎಂಬ ಪ್ರಶ್ನೆಗೂ ಸಾಹಾ ಅವರೇ ಮೊದಲ ಆಯ್ಕೆಯಾಗಿದ್ದಾರೆ.



ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಸ್ಪಿನ್ನರ್ ಆಗಿ ಕಣಕ್ಕಿಳಿಯಲಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾಗೆ ಉಮೇಶ್ ಯಾದವ್ ಮೂರನೇ ವೇಗಿಯಾಗಿ ಸಾಥ್ ನೀಡಲಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ತಂಡದಲ್ಲಿರುವ 11 ಕ್ರಿಕೆಟಿಗರೂ ಕೂಡ ಬಲಗೈ ಆಟಗಾರರಾಗಿದ್ದಾರೆ.



ಸಂಪೂರ್ಣ ಆಟಗಾರರ ಪಟ್ಟಿ

ಟೀಮ್ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ಹನುಮ ವಿಹಾರಿ, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ

This News Article is a Copy of MYKHEL