ಬ್ಯಾಡ್ಮಿಂಟನ್ ವರ್ಲ್ಡ್ ಜೂನಿಯರ್ ಚಾಂಪಿಯನ್‌ಷಿಪ್‌ ರದ್ದು

16-12-20 03:08 pm       Source: MYKHEL Sadashiva   ಕ್ರೀಡೆ

ಜನವರಿಗೆ ಮುಂದೂಡಲ್ಪಟ್ಟಿದ್ದ 2020ರ ವರ್ಲ್ಡ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ರದ್ದಾಗಿದೆ.

ವೆಲ್ಲಿಂಗ್ಟನ್, ಡಿ.16: ಜನವರಿಗೆ ಮುಂದೂಡಲ್ಪಟ್ಟಿದ್ದ 2020ರ ವರ್ಲ್ಡ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ರದ್ದಾಗಿದೆ. ಈ ಟೂರ್ನಿ ನ್ಯೂಜಿಲೆಂಡ್‌ನಲ್ಲಿ ನಡೆಯುವುದರಲ್ಲಿತ್ತು. ಕೊರೊನಾವೈರಸ್ ಕಾರಣ ಇರುವ ನಿರ್ಬಂಧಗಳು ಮತ್ತು ಅನಿಶ್ಚಿತತೆಯ ಕಾರಣದಿಂದಾಗಿ ಉದ್ದೇಶಿತ ಟೂರ್ನಿ ರದ್ದಾಗಿದೆ.

ಅಸಲಿಗೆ ಈ ಟೂರ್ನಿ 2020ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್-19 ಪರಿಸ್ಥಿತಿ ಸುಧಾರಿಸದ ಕಾರಣ ಟೂರ್ನಿಯನ್ನು ಮುಂದಿನ ವರ್ಷ ಜನವರಿಗೆ ಮುಂದೂಡಲಾಗಿತ್ತು. ಆದರೆ ಆ ದಿನಾಂಕದಂದೂ ಟೂರ್ನಿ ನಡೆಯದೆ ರದ್ದೆನಿಸಲ್ಪಟ್ಟಿದೆ. '2021ರ ಆತಿಥೇಯವು ಈಗಾಗಲೇ ಜಾರಿಯಲ್ಲಿದೆ ಮತ್ತು COVID-19 ಪರಿಸ್ಥಿತಿಯ ಅನಿಶ್ಚಿತತೆಯು ಮುಂದಿನ ವರ್ಷಕ್ಕೆ ಟೂರ್ನಿಯನ್ನು ವಿಸ್ತರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಟೂರ್ನಿಯನ್ನು ಮುಂದೂಡುವುದು ಒಂದು ಆಯ್ಕೆಯಾಗಿಲ್ಲ ಎನಿಸುತ್ತಿದೆ,' ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಹೇಳಿದೆ.

ಉದ್ದೇಶಿತ ಟೂರ್ನಿ ರದ್ದಾಗಿದೆಯಾದರೂ ನ್ಯೂಜಿಲೆಂಡ್ ಈಗಲೂ ಬಿಡಬ್ಲ್ಯೂಎಫ್‌ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್ ಆಯೋಜಿಸುವುದಕ್ಕೆ ಬದ್ಧವಾಗಿದೆ. ನ್ಯೂಜಿಲೆಂಡ್ ಬಿಡಬ್ಲ್ಯೂಎಫ್‌ಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಾರಿಯ ಟೂರ್ನಿ ರದ್ದಾಗಿದ್ದಕ್ಕೆ 2024ರಂದು ಇದೇ ಟೂರ್ನಿಯನ್ನು ನ್ಯೂಜಿಲೆಂಡ್ ನಡೆಸಲಿದೆ.

This News Article is a Copy of MYKHEL