ಬ್ರೇಕಿಂಗ್ ನ್ಯೂಸ್
17-12-20 02:55 pm Source: MYKHEL ಕ್ರೀಡೆ
ಗೋವಾ, ಡಿಸೆಂಬರ್ 17: ಪ್ರತಿಯೊಂದು ಪಂದ್ಯದಲ್ಲೂ ಗೋಲು ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದ ರಾಯ್ ಕೃಷ್ಣ ಗೋವಾ ವಿರುದ್ಧದ ಪಂದ್ಯದಲ್ಲೂ ಪೆನಾಲ್ಟಿ ಮೂಲಕ ಗೋಲು ಗಳಿಸಿ 1-0 ಅಂತರದ ಜಯಕ್ಕೆ ಕಾರಣರಾದರು. ಇದರೊಂದಿಗೆ ಪ್ರತಿ ಬಾರಿಯೂ ದ್ವಿತಿಯಾರ್ಧದಲ್ಲಿ ಗೋಲು ಗಳಿಸುವ ಎಟಿಕೆಎಂಬಿ ಮತ್ತೊಮ್ಮೆ ಯಶಸ್ಸು ಕಂಡಿತು. ಈ ಜಯದೊಂದಿಗೆ ಎಟಿಕೆಎಂಬಿ ಅಂಕ
ಉತ್ತಮ ಆಟಗಾರರಿಂದ ಕೂಡಿದ ತಂಡಗಳೆರಡು ಪರಸ್ಪರ ಮುಖಾಮುಖಿಯಾದಾಗ ಅಲ್ಲಿ ಗೋಲಿಗೆ ಅವಕಾಶ ಕಡಿಮೆ ಇರುತ್ತದೆ ಎಂಬುದಕ್ಕೆ ಎಟಿಕೆ ಮೂಹನ್ ಬಾಗನ್ ಮತ್ತು ಎಫ್ ಸಿ ಗೋವಾ ನಡುವಿನ ಪಂದ್ಯದ ಪ್ರಥಮಾರ್ಧ ಸಾಕ್ಷಿಯಾಯಿತು. ಈ ಮೂಲಕ ಎಟಿಕೆಎಂಬಿ ಮತ್ತೊಮ್ಮೆ ಪ್ರಥಮಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಯಿತು.

ಆರಂಭದಲ್ಲೇ ಎಟಿಕೆಎಂಬಿ ಆಕ್ರಮಣಕಾರಿ ಆಟಕ್ಕೆ ಮನಮಾಡಿತು ಪರಿಣಾಮ ತಿರಿ ಮತ್ತು ಡೇವಿಡ್ ವಿಲಿಯಮ್ಸ್ ಗೆ ಹಳದಿ ಕಾರ್ಡಿನ ಫಲ. ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಎರಡು ಬಾರಿ ಫ್ರೀ ಕಿಕ್ ಅವಕಾಶ ಸಿಕ್ಕಿತ್ತು. ಆದರೆ ಡೇವಿಡ್ ವಿಲಿಯಮ್ಸ್ ಅದರ ಸದುಪಯೋಗ ಪಡೆಯುವಲ್ಲಿ ವಿಫಲವಾದರು. ಗೋವಾಕ್ಕೆ ಸಿಕ್ಕಿದ ಅವಕಾಶ ಕಡಿಮೆ. ಒಂದು ನಿಮಿಷದ ವಿರಾಮದ ನಂತರವೂ ಡೇವಿಡ್ ವಿಲಿಯಮ್ಸ್ ಗೆ ಅದ್ಭುತ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಅದೃಷ್ಟ ಇರಲಿಲ್ಲ. ತುಳಿದ ಚೆಂಡು ಗೋಲ್ ಕೀಪರ್ ನನ್ನು ವಂಚಿಸಿದರೂ ಗೋಲ್ ಬಾಕ್ಸ್ ನ ಕಂಬಕ್ಕೆ ಬಡೆದು ಹೊರ ಸಾಗಿತು. ಇದರೊಂದಿಗೆ ಪ್ರಥಮಾರ್ಧ ಗೋಲಿಲ್ಲದೆ ಕೊನೆಗಗೊಂಡಿತು.

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬಲಿಷ್ಠರೆನಿಸಿಕೊಂಡಿರುವ ತಂಡಗಳಾದ ಎಫ್ ಸಿ ಗೋವಾ ಹಾಗೂ ಎಟಿಕೆ ಮೂಹನ್ ಬಾಗನ್ ತಂಡಗಳು ಮುಖಾಮುಖಿಯಾದವು. ಹಿಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವ ಎಟಿಕೆ ಇಲ್ಲಿ ಗೆಲ್ಲುವ ಆತ್ಮವಿಶ್ವಾಸ ಹೊಂದಿದೆ. ಆತಿಥೇಯ ಎಟಿಕೆಎಂಬಿ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಉತ್ತಮ ರೀತಿಯಲ್ಲೇ ಋತುವನ್ನು ಆರಂಭಿಸಿತ್ತು. ಆದರೆ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಅಗ್ರ ಸ್ಥಾನದಿಂದ ಕುಸಿಯಿತು. ಪ್ರಥಮಾರ್ಧದಲ್ಲಿ ಕೋಲ್ಕೊತಾ ಮೂಲದ ತಂಡ ಇದುವರೆಗೆ ನಡೆದ ಐದು ಪಂದ್ಯಗಳಲ್ಲಿ ಗೋಲು ಗಳಿಸಿರಲಿಲ್ಲ. ಗಳಿಸಿದ ಎಲ್ಲಾ ಗೋಲುಗಳು ದ್ವಿತಿಯಾರ್ಧದಲ್ಲೇ ದಾಖಲಾದವು. ಇಂದಿನ ಪಂದ್ಯದಲ್ಲಿ ಎಟಿಕೆಎಂಬಿ ದ್ವಿತಿಯಾರ್ಧದಲ್ಲೇ ಎದುರಾಳಿ ತಂಡಕ್ಕೆ ಹೆಚ್ಚು ಗೋಲುಗಳನ್ನು ನೀಡಿರುವ ತಂಡದ ವಿರುದ್ಧ ಆಡುತ್ತಿದೆ
This News Article is a Copy of MYKHEL
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm