ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ರಾಬಿನ್ ಜಾಕ್‌ಮ್ಯಾನ್ ನಿಧನ

26-12-20 02:44 pm       Source: MYKHEL Madhukara Shetty   ಕ್ರೀಡೆ

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ರಾಬಿನ್ ಜಾಕ್‌ಮನ್ ನಿಧನರಾಗಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ರಾಬಿನ್ ಜಾಕ್‌ಮನ್ ನಿಧನರಾಗಿದ್ದಾರೆ. ಅವರು ಇಂಗ್ಲೆಂಡ್ ಪರವಾಗಿ 15 ಏಕದಿನ ಪಂದ್ಯ ಹಾಗೂ 4 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ತಮ್ಮ 75ನೇ ವಯಸ್ಸಿನಲ್ಲಿ ಜಾಕ್‌ಮ್ಯಾನ್ ಮೃತಪಟ್ಟಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹೇಳಿದೆ.

1966ರಿಂದ 1982ರ ವರೆಗೆ ಇಂಗ್ಲೆಂಡ್‌ನ 399 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಾಕ್‌ಮನ್ ಆಡಿದ್ದು 1402 ವಿಕೆಟ್ ಪಡೆದಿದ್ದಾರೆ. ನಿವೃತ್ತಿಯ ನಂತರ ಜಾಕ್‌ಮನ್ ಪತ್ನಿ ವೋಯ್ನೆ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತಿದ್ದ ಅವರು ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸಾಕಷ್ಟು ಖ್ಯಾತಿಯನ್ನು ಪಡೆದಿದ್ದರು.

ಜಾಕ್‌ಮನ್ ನಿಧನದ ಬಗ್ಗೆ ಐಸಿಸಿ ಶುಕ್ರವಾರ ಹೇಳಿಕೆಯನ್ನು ಬಿಡುಗಡೆಮಾಡಿದೆ. "ಇಂಗ್ಲೆಂಡ್‌ನ ಮಾಜಿ ಬೌಲರ್ ಮತ್ತು ದಿಗ್ಗಜ ಕಾಮೆಂಟೇಟರ್ ರಾಬಿನ್ ಜಾಕ್‌ಮನ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ತಿಳಸಲು ವಿಷಾಧಿಸುತ್ತೇವೆ. ಈ ಕಠಿಣ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರ ನೋವಿನಲ್ಲಿ ಕ್ರಿಕೆಟ್ ಜಗತ್ತು ಕುಡ ಭಾಗಿಯಾಗುತ್ತದೆ" ಎಂದು ಐಸಿಸಿ ತಿಳಿಸಿದೆ.

ನ್ಯೂಜಿಲೆಂಡ್‌ನ ವಾಜಿ ಬೌಲರ್ ಹಾಗೂ ಜಾಕ್‌ಮನ್ ಜೊತೆ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡ್ಯಾನಿ ಮಾರಿಸನ್ ಟ್ವೀಟ್ ಮಾಡಿದ್ದು "ಆತ್ಮೀಯ ಸ್ನೇಹಿತ ಮತ್ತು ಕಾಮೆಂಟರಿಯಲ್ಲಿ ಸಹೋದ್ಯೋಗಿ ಜಾಕ್‌ಮನ್ ಅಗಲಿಕೆಯ ಸುದ್ದಿಯಿಂದ ಆಘಾತಗೊಂಡಿದ್ದೇನೆ. 'ಜಾಕರ್ಸ್' ಜೊತೆಗೆ ಉತ್ತಮವಾದ ಸಮಯವನ್ನು ಕಳೆದಿರುವುದಕ್ಕೆ ಧನ್ಯನಾಗಿದ್ದೇನೆ" ಎಂದು ಡ್ಯಾನಿ ಮಾರೊಸನ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ದಕ್ಷಿಣ ಆಫ್ರಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕೂಡ ಜಾಕ್‌ಮನ್ ಅವರ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ರಾಬಿನ್ ಜಾಕ್‌ಮನ್ ಭಾರತದ ಶಿಮ್ಲಾದಲ್ಲಿ 1945ರ ಆಗಸ್ಟ್ 13ರಂದು ಜನಿಸಿದ್ದರು.

This News Article is a Copy of MYKHEL