ಭಾರತ vs ಆಸ್ಟ್ರೇಲಿಯಾ: ಅಪರೂಪದ ದಾಖಲೆ ನಿರ್ಮಿಸಿದ ಭಾರತ

29-12-20 03:43 pm       Source: MYKHEL Sadashiva   ಕ್ರೀಡೆ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ವಿಶೇಷ ದಾಖಲೆಗೆ ಕಾರಣವಾಗಿದೆ.

ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ವಿಶೇಷ ದಾಖಲೆಗೆ ಕಾರಣವಾಗಿದೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ 8 ವಿಕೆಟ್‌ ಜಯ ದಾಖಲಿಸಿರುವ ಭಾರತ ಈ ವಿಶೇಷ ದಾಖಲೆ ನಿರ್ಮಿಸಿದೆ. ಪ್ರಮುಖ 5 ಆಟಗಾರರಿಲ್ಲದೆಯೂ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆದ್ದ ಹಿರಿಮೆಗೆ ಪಾತ್ರವಾಗಿದೆ.

ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 200 ರನ್ ಬಾರಿಸಿತ್ತು. ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 70 ರನ್ ಬಾರಿ ಜಯ ಗಳಿಸಿದೆ. ಆರಂಭಿಕ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ಹೀನಾಯ ಸೋಲು ಕಂಡಿತ್ತು. ಆ ಸೋಲಿಗೆ ಭಾರತ ದ್ವಿತೀಯ ಪಂದ್ಯದಲ್ಲಿ ಪ್ರತೀಕಾರ ತೀರಿಸಿಕೊಂಡಿದೆ. ಮತ್ತೊಂದು ವಿಶೇಷೆಂದರೆ ದ್ವಿತೀಯ ಪಂದ್ಯದಲ್ಲಿ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಇರಲಿಲ್ಲ. ಈ ಪ್ರಮುಖ ಆಟಗಾರರಿಲ್ಲದೆಯೂ ಭಾರತ ಟೆಸ್ಟ್ ಪಂದ್ಯ ಗೆದ್ದಿದೆ.

ವಿರಾಟ್ ಕೊಹ್ಲಿ ಸದ್ಯ ಪಿತೃತ್ವ ರಜೆ ಪಡೆದುಕೊಂಡಿದ್ದಾರೆ. ಗಾಯಕ್ಕೀಡಾಗಿದ್ದ ರೋಹಿತ್ ಶರ್ಮಾ ಇನ್ನಷ್ಟೇ ಟೆಸ್ಟ್ ತಂಡ ಸೇರಿಕೊಳ್ಳಬೇಕಿದೆ. ಇನ್ನು ವೇಗಿ ಮೊಹಮ್ಮದ್ ಶಮಿ ವಿಶ್ರಾಂತಿಯಲ್ಲಿದ್ದರೆ, ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅಂತೂ ಮೆಲ್ಬರ್ನ್‌ನಲ್ಲಿ ಭಾರತ ಪ್ರಮುಖ 5 ಆಟಗಾರರ ಹೊರತಾಗಿಯೂ ಪಂದ್ಯ ಗೆದ್ದು ಗಮನ ಸೆಳೆದಿದೆ.

This News Article is a Copy of MYKHEL