ಬಲಿಷ್ಠ ಎಟಿಕೆ ಮೋಹನ್‌ ಬಗಾನ್ ತಂಡಕ್ಕೆ ಚೆನ್ನೈಯಿನ್‌ ಎಫ್‌ಸಿ ಸವಾಲು

29-12-20 03:48 pm       Source: MYKHEL   ಕ್ರೀಡೆ

ಚೆನ್ನೈಯಿನ್‌ ಎಫ್‌ಸಿ ತಂಡ ಇದೀದ ಬಲಿಷ್ಠ ಎಟಿಕೆ ಮೋಹನ್‌ ಬಗಾನ್‌ ತಂಡದ ವಿರುದ್ಧವೂ ದಿಟ್ಟ ಪ್ರದರ್ಶನ ನೀಡಲಿದೆ

ಗೋವಾ: ಪ್ರಸಕ್ತ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಎರಡು ಗೆಲುವಿನ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಚೆನ್ನೈಯಿನ್‌ ಎಫ್‌ಸಿ ತಂಡ ಇದೀದ ಬಲಿಷ್ಠ ಎಟಿಕೆ ಮೋಹನ್‌ ಬಗಾನ್‌ ತಂಡದ ವಿರುದ್ಧವೂ ದಿಟ್ಟ ಪ್ರದರ್ಶನ ನೀಡಲಿದೆ ಎಂದು ತಂಡದ ಮುಖ್ಯ ಕೋಚ್ ಸಾಬಾ ಲಾಝ್ಲೊ ವಿಶ್ವಾಸ ಹೊರಹಾಕಿದ್ದಾರೆ. ಇಲ್ಲಿನ ಜಿಎಮ್‌ಸಿ ಕ್ರೀಡಾಂಗಣದಲ್ಲಿ ಮಂಗಳವಾರ ಅಂಕಪಟ್ಟಿಯ 7ನೇ ಸ್ಥಾನಿ ಚೆನ್ನೈಯಿನ್‌ ಎಫ್‌ಸಿ ತಂಡವು ಅಂಕಪಟ್ಟಿಯ 2ನೇ ಸ್ಥಾನದಲ್ಲಿರುವ ಎಟಿಕೆ ಮೋಹನ್‌ ಬಗಾನ್‌ ತಂಡದ ವಿರುದ್ಧ ಪೈಪೋಟಿ ನಡೆಸಲಿದೆ.

ಚೆನ್ನೈ ತಂಡ ಟೂರ್ನಿಯಲ್ಲಿ ಈವರೆಗೆ 7 ಫಮದ್ಯಗಳನ್ನು ಆಡಿದ್ದು ತಲಾ 2 ಗೆಲುವು ಮತ್ತು ಸೋಲಿನೊಂದಿಗೆ 3 ಪಂದ್ಯಗಳಲ್ಲಿ ಡ್ರಾ ಫಲಿಲಾಂಶ ಕಂಡು ಒಟ್ಟು 9 ಅಂಕಗಳನ್ನು ಪಡೆದುಕೊಂಡಿದೆ. ವಿಶೇಷವೆಂದರೆ ಚೆನ್ನೈ ತಂಡದ ಪರ ಎಲ್ಲಾ ವಿಭಾಗಗಳಿಂದಲೂ ಗೋಲ್‌ ಹರಿದುಬರುತ್ತಿದ್ದು, ಈವರೆಗೆ ಒಟ್ಟು ಆರು ಆಟಗಾರರು ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸಿ ಗಮನ ಸೆಳೆದಿದ್ದಾರೆ. ಆದರೆ, ತಂಡದ ಪ್ರಮುಖ ಸ್ಟ್ರೈಕರ್‌ಗಳು ಯಶಸ್ಸು ಕಾಣದೇ ಇರುವುದು ಚೆನ್ನೈ ತಂಡದ ಪ್ರಮುಖ ತಲೆಬಿಸಿಯಾಗಿದೆ.

ಈ ಬಾರಿ ಅದ್ಭುತ ಆಟವಾಡುತ್ತಿರುವ ಮೋಹನ್‌ ಬಗಾನ್‌ ತಂಡದ ಎದುರು ಚೆನ್ನೈಯಿನ್‌ ಯಶಸ್ಸು ಕಾಣಬೇಕಾದರೆ ಮುಖ್ಯ ಸ್ಟ್ರೈಕರ್‌ ಯಾಕುಬ್‌ ಸಿಲ್ವೆಸ್ಟರ್‌ ತಮ್ಮ ಹಿಂದಿನ ವೈಫಲ್ಯಗಳಿಂದ ಹೊರಬಂದು ಚೆಂಡನ್ನು ಗುರಿ ಮುಟ್ಟಿಸುವ ಕಡೆಗೆ ಕಾಲ್ಚಳಕ ಪ್ರದರ್ಶಿಸಬೇಕಿದೆ.

ಗೋಲ್‌ಗಳು ಬರುತ್ತಿರುವುದಕ್ಕೆ ಸಂತಸ ಈ ಬಗ್ಗೆ ಮಾತನಾಡಿರುವ ತಂಡದ ಮುಖ್ಯ ಕೋಚ್‌ ಲಾಝ್ಲೊ, ಎಲ್ಲಾ ವಿಭಾಗಗಳಿಂದ ಗೋಲ್‌ಗಳು ಬರುತ್ತಿರುವುದಕ್ಕೆ ಸಂತಸ ಹೊರಹಾಕಿದ್ದಾರೆ. "ನಮ್ಮ ತಂಡದಲ್ಲಿ ಕೇವಲ ಒಬ್ಬ ಆಟಗಾರ ಮಾತ್ರ ಗೋಲ್‌ ಗಳಿಸುತ್ತಿಲ್ಲ. ಎಲ್ಲಾ ಮೂಲೆಗಳಿಂದಲೂ ನಮಗೆ ಗೋಲ್‌ಗಳು ಬರುತ್ತಿವೆ. ಎಡ, ಬಲ ಮಧ್ಯ ಎಲ್ಲ ವಿಭಾಗಗಳಲ್ಲೂ ಆಟಗಾರರು ಗೋಲ್‌ ತಂದುಕೊಟ್ಟಿದ್ದಾರೆ. ಇದು ಒಂದು ರೀತಿ ನಮ್ಮ ತಂಡದ ರಣತಂತ್ರ ಕೂಡ," ಎಂದು ಲಾಝ್ಲೊ ಹೇಳಿದ್ದಾರೆ. ಹೇಳಿದ್ದಾರೆ. ಆದರೆ, ಇದೇ ವೇಳೆ ಪ್ರಮುಖ ಸ್ಟ್ರೈಕರ್‌ಗಳು ಅವಕಾಶ ಬಳಸಿಕೊಳ್ಳದೇ ಇರುವ ಬಗ್ಗೆಯೂ ಲಾಝ್ಲೊ ಮಾತನಾಡಿದ್ದಾರೆ. ಅದರಲ್ಲಿ ಸ್ಟ್ರೈಕರ್‌ ಲಾಲಿಯಾನ್ಜುವಾಲ ಚಾಂಗ್ಟೆ ಹಲವು ಬಾರಿ ಗೋಲ್‌ ಗಳಿಸುವ ಉತ್ತಮ ಸ್ಥಿತಿಯಲ್ಲಿ ಇದ್ದರೂ ಕೂಡ ಅದನ್ನು ಪರಿವರ್ತಿಸದೇ ಹೋದರು. ಆದರೂ ಎಸ್‌ಸಿ ಈಸ್ಟ್‌ ಬೆಂಗಾಲ್‌ ಎದುರು ಯಶಸ್ಸು ಕಂಡರು. ಮತ್ತೊಂದೆಡೆ ಸಿಲ್ವೆಸ್ಟರ್‌ ಹೀನಾಯ ಪ್ರದರ್ಶನ ನೀಡಿದ್ದುಅತ್ಯಂತ ಕಡಿಮೆ ಗೋಕ್‌ ಗಳಿಕೆಯ ಸರಾಸರಿ (5.26) ಹೊಂದಿದ್ದಾರೆ.

This News Article is a Copy of MYKHEL