ಮುತ್ತಯ್ಯ ಮುರಳೀಧರನ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ಅಶ್ವಿನ್

30-12-20 04:05 pm       Source: News 18 Kannada   ಕ್ರೀಡೆ

ಹ್ಯಾಝಲ್​ವುಡ್ ವಿಕೆಟ್ ಪಡೆಯುವುದರೊಂದಿಗೆ ಅಶ್ವಿನ್, ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ಎಡಗೈ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಿದ ದಾಖಲೆ ನಿರ್ಮಿಸಿದ್ದಾರೆ.

ಹೌದು, ಹ್ಯಾಝಲ್​ವುಡ್ ವಿಕೆಟ್ ಪಡೆಯುವುದರೊಂದಿಗೆ ಅಶ್ವಿನ್, ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ಎಡಗೈ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಿದ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿತ್ತು. ಮುರಳೀಧರನ್ 191 ಎಡಗೈ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಿದ್ದರೆ, ಅಶ್ವಿನ್ 192 ಎಡಗೈ ದಾಂಡಿಗರಿಗೆ ಪೆವಿಲಿಯನ್ ದಾರಿ ತೋರಿಸುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದರು.

ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಎಡಗೈ ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಿದ ಬೌಲರುಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್(186), ಆಸ್ಟ್ರೇಲಿಯಾ ವೇಗಿ ಗ್ಲೆನ್ ಮೆಕ್​ಗ್ರಾಥ್ (172), ಆಸ್ಟ್ರೇಲಿಯಾ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್(172) ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ (167) ಸ್ಥಾನ ಪಡೆದಿದ್ದಾರೆ.

ಇದಲ್ಲದೆ ಆರ್​. ಅಶ್ವಿನ್ ಟೀಮ್ ಇಂಡಿಯಾ ಪರ ಟೆಸ್ಟ್​ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಮೂರನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ (619) ಅಗ್ರಸ್ಥಾನದಲ್ಲಿದ್ದರೆ, ಹರ್ಭಜನ್ ಸಿಂಗ್(417) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 73 ಟೆಸ್ಟ್ ಪಂದ್ಯಗಳಿಂದ 375 ವಿಕೆಟ್‌ಗಳನ್ನು ಕಬಳಿಸಿರುವ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ.

This News Article is a Copy of News 18 Kannada