ಸುದೀರ್ಘ 7 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳಿದ ಶ್ರೀಶಾಂತ್

30-12-20 04:16 pm       Source: MYKHEL   ಕ್ರೀಡೆ

7 ವರ್ಷಗಳ ಕಾಲ ನಿಷೇಧಿಸಲ್ಪಟ್ಟು ಕ್ರಿಕೆಟ್‌ನಿಂದ ದೂರ ಉಳಿದಿದ್ದ ಎಸ್‌ ಶ್ರೀಶಾಂತ್ ಮತ್ತು ಕ್ರಿಕೆಟ್‌ಗೆ ಮರಳಿದ್ದಾರೆ.

ತಿರುವನಂತಪುರಂ: ಮ್ಯಾಚ್ ಫಿಕ್ಸಿಂಗ್‌ ಆರೋಪದಡಿಯಲ್ಲಿ ಸುಮಾರು 7 ವರ್ಷಗಳ ಕಾಲ ನಿಷೇಧಿಸಲ್ಪಟ್ಟು ಕ್ರಿಕೆಟ್‌ನಿಂದ ದೂರ ಉಳಿದಿದ್ದ ಎಸ್‌ ಶ್ರೀಶಾಂತ್ ಮತ್ತು ಕ್ರಿಕೆಟ್‌ಗೆ ಮರಳಿದ್ದಾರೆ. ಮುಂಬರಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಶ್ರೀಶಾಂತ್ ಅವರು ಕೇರಳ ತಂಡದ ಪರ ಆಡಲಿದ್ದಾರೆ.

ಶ್ರೀಶಾಂತ್‌ ಅವರು ಕೇರಳ ಕ್ರಿಕೆಟ್‌ ತಂಡದಲ್ಲಿ ಆಡೋದು ಪಕ್ಕಾ ಆಗಿದೆ. ಹೀಗಾಗಿ ಕೇರಳ ಅಭ್ಯಾಸ ತಂಡದಲ್ಲಿ ಶ್ರೀಶಾಂತ್‌ ಕೂಡ ಸೇರಿಕೊಂಡಿದ್ದಾರೆ. ಡಿಸೆಂಬರ್ 30ರ ಬುಧವಾರ ಶ್ರೀಶಾಂತ್ ಅವರನ್ನು ಕೇರಳ ತಂಡಕ್ಕೆ ಕ್ಯಾಪ್‌ ನೀಡಿ ಬರ ಮಾಡಿಕೊಳ್ಳಲಾಗಿದೆ. ಹೀಗಾಗಿ ಶ್ರೀಶಾಂತ್‌ಗೆ 2020ರ ವರ್ಷ ಅವಿಸ್ಮರಣೀಯವೆನಿಸಲಿದೆ.

2013ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ ಆರೋಪದಲ್ಲಿ ಶ್ರೀಶಾಂತ್ ಆಜೀವ ನಿಷೇಧಕ್ಕೀಡಾಗಿದ್ದರು. ಆದರೆ ಆ ಬಳಿಕ ಮತ್ತೆ ವಿಚಾರಣೆ ವೇಳೆ ಶ್ರೀಶಾಂತ್ ನಿಷೇಧ ಕಡಿತಗೊಳಿಸಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಶ್ರೀಶಾಂತ್‌ ಮೇಲಿನ ನಿಷೇಧ ಕೊನೆಗೊಂಡಿತ್ತು.

This News Article is a Copy of MYKHEL