ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಅಗ್ರ ಪಟ್ಟವನ್ನು ಅಲಂಕರಿಸಿದ ನ್ಯೂಜಿಲೆಂಡ್

06-01-21 03:16 pm       Source: MYKHEL Madhukara Shetty   ಕ್ರೀಡೆ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಜಿಲೆಂಡ್ ಸರ್ವಶ್ರೇಷ್ಠ ಸಾಧನೆಯೊಂದನ್ನು ಮಾಡಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಜಿಲೆಂಡ್ ಸರ್ವಶ್ರೇಷ್ಠ ಸಾಧನೆಯೊಂದನ್ನು ಮಾಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಈಗ ನಂಬರ್ 1 ಸ್ಥಾನಕ್ಕೇರಿದ್ದು ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ತಂಡವನ್ನು ಎರಡನೇ ಸ್ಥಾನಕ್ಕೆ ತಳ್ಳಿರುವ ಕೀವಿಸ್ ಪಡೆ ಈ ಮಹತ್ವದ ಸಾಧನೆ ಮಾಡಿದೆ.

ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಎರಡು ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ಸಾಧನೆ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಟೆಸ್ಟ್ ಮಾದರಿಯ ಅಗ್ರ ತಂಡವನ್ನಾಗುವಂತೆ ಮಾಡಿದೆ.

ನ್ಯೂಜಿಲೆಂಡ್ ಪಾಕಿಸ್ತಾನದ ವಿರುದ್ಧ ಎರಡನೇ ಪಂದ್ಯ ಗೆದ್ದ ಬಳಿಕ ಟೆಸ್ಟ್ ಶ್ರೇಯಾಂಕಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ. ಇದರಲ್ಲಿ ನ್ಯೂಜಿಲೆಂಡ್ 118 ಅಂಕವನ್ನು ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಖಾತೆಯಲ್ಲಿ 116 ಅಂಕಗಳಿದೆ. ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದ್ದು 114 ಅಂಕವನ್ನು ಖಾತೆಯಲ್ಲಿ ಹೊಂದಿದೆ. ಕ್ರಿಕೆಟ್ ಜನಕ ಇಂಗ್ಲೆಂಡ್ ಟೆಸ್ಟ್ ಮಾದರಿಯಲ್ಲಿ 4ನೇ ಸ್ಥಾನದಲ್ಲಿದ್ದು 106 ಅಂಕವನ್ನು ಹೊಂದಿದೆ. ಐದನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ಆರನೇ ಸ್ಥಾನದಲ್ಲಿ ಶ್ರೀಲಂಕಾ ಏಳನೇ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು 8, 9, 10ನೇ ಸ್ಥಾನದಲ್ಲಿದೆ.

This News Article is a Copy of MYKHEL