ಇಂಡಿಯಾ vs ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ ಆತ್ಮವಿಶ್ವಾಸದ ಆಟಕ್ಕೆ ತಲೆದೂಗಿದ ಸುನಿಲ್ ಗವಾಸ್ಕರ್

07-01-21 04:50 pm       Source: MYKHEL Madhukara Shetty   ಕ್ರೀಡೆ

ಸ್ಮಿತ್ ಉತ್ತಮ ಪ್ರದರ್ಶನ ನೀಡಿದ್ದು ಈ ಪ್ರದರ್ಶನ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮನಗೆದ್ದಿದೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಫಾರ್ಮ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಈ ಪ್ರಮುಖ ಬ್ಯಾಟ್ಸ್‌ಮನ್ ಸಂಪೂರ್ಣವಾಗಿ ವಿಫಲರಾಗಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಸ್ಮಿತ್ ಉತ್ತಮ ಪ್ರದರ್ಶನ ನೀಡಿದ್ದು ಫಾರ್ಮ್ ಕಂಡುಕೊಂಡಿದ್ದಾರೆ. ಈ ಪ್ರದರ್ಶನ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮನಗೆದ್ದಿದೆ.

ಸ್ಟೀವ್ ಸ್ಮಿತ್ ಮೊದಲ ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ನಲ್ಲಿ ಕೇವಲ 10 ರನ್ ಮಾತ್ರವೇ ಗಳಿಸಿದ್ದರು. ಔಟಾದ ಮೂರು ಸಂದರ್ಭಗಳಲ್ಲಿ ಎರಡು ಬಾರಿ ಆರ್ ಅಶ್ವಿನ್ ವಿಕೆಟ್ ಪಡೆದಿದ್ದರು. ಇನ್ನೊಂದು ಬಾರಿ ಜಸ್ಪ್ರಿತ್ ಬೂಮ್ರಾ ಸ್ಮಿತ್ ವಿಕೆಟ್ ಎಗರಿಸಿದ್ದರು.



ಆದರೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭದಿಂದ ಎಂದಿಗಿಂತ ಆಕ್ರಮಣಕಾರೊಯಾಗಿ ಆಡುವ ನಿರ್ಧಾರವನ್ನು ಮಾಡಿದ್ದರು ಸ್ಮಿತ್. ಈ ಮೂಲಕ ಸ್ಮಿತ್ ಲಯಕಂಡುಕೊಳ್ಳುವಲ್ಲಿ ಯಶಸ್ವಿಯೂ ಆದರು. ಈ ಬಗ್ಗೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು ಸ್ಮಿತ್ ವ್ಯಕ್ತಪಡಿಸಿದ ಆತ್ಮವಿಶ್ವಾಸವನ್ನು ಪ್ರಶಂಸಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 10000 ರನ್‌ಗಳ ಮೈಲಿಗಲ್ಲು ತಲುಪಿದ ಹೆಗ್ಗಳಿಕೆಯನ್ನು ಹೊಂದಿರುವ ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಾನು ಕಂಡ ಶ್ರೇಷ್ಠ ಆಟಗಾರರಲ್ಲಿ ಸ್ಟೀವ್ ಸ್ಮಿತ್ ಕೂಡ ಓರ್ವ ಎಂದಿದ್ದಾರೆ. "ನೀವು ಆತನ ಆಂಗಿನ ಭಾಷೆಯಲ್ಲಿಗೆ ಗಮನಿಸಬಹುದು.

ಅಶ್ವಿನ್ ಚೆಂಡನ್ನು ಗಾಳಿಯಲ್ಲಿ ನೀಡಿದಾಗಲೆಲ್ಲಾ ಅವರು ಪಿಚ್‌ನಿಂದ ಕೆಳಗಿಳಿಯಲು ನೋಡುತ್ತಿದ್ದರು. ಅವರು ಚೆಂಡನ್ನು ಆಫ್‌ಸೈಡ್‌ನತ್ತ ತಿರುಗಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದರು. ಅವರು ಒಮ್ಮೆ ಮಿಡ್ ವಿಕೆಟ್‌ನಿಂದ ಬೌಂಡರಿ ಗಳಿಸಿದ ನಂತರ ಹೆಚ್ಚಿನ ಆತ್ಮವಿಶ್ವಾಸವನ್ನು ಗಳಿಸಿದರು. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಟೆಸ್ಟ್ ಆಟಗಾರರಲ್ಲಿ ಅವರು ಕೂಡ ಒಬ್ಬರು" ಎಂದು ಸುನಿಲ್ ಗವಾಸ್ಕರ್ ಸ್ಮಿತ್ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

This News Article is a Copy of MYKHEL