ಭಾರತ vs ಆಸ್ಟ್ರೇಲಿಯಾ: ಕೊನೆಯ ದಿನ ಭಾರತದ ಗೆಲುವಿಗೆ 309 ರನ್‌ಗಳ ಅವಶ್ಯಕತೆ

10-01-21 02:17 pm       Source: MYKHEL Madhukara Shetty   ಕ್ರೀಡೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ನ ನಾಲ್ಕನೇ ದಿನದಾಟ ಅಂತ್ಯವಾಗಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ನ ನಾಲ್ಕನೇ ದಿನದಾಟ ಅಂತ್ಯವಾಗಿದೆ. ಆಸ್ಟ್ರೇಲಿಯಾ ನೀಡಿದ 407 ರನ್‌ಗಳ ಬೃಹತ್ ಗುರಿಯನ್ನು ಟೀಮ್ ಇಂಡಿಯಾ ಬೆನ್ನತ್ತಲು ಆರಂಬಿಸಿದ್ದು ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ತಮ್ಮ ವಿಕೆಟ್ ಕಳೆದುಕೊಂಡಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಲಾಬುಶೇನ್, ಸ್ಮಿತ್ ಹಾಗೂ ಕ್ಯಾಮರೂನ್ ಗ್ರೀನ್ ಸಿಡಿಸಿದ ಭರ್ಜರಿ ಅರ್ಧ ಶತಕಗಳ ನೆರವಿನಿಂದ 312 ರನ್ ಗಳಿಸಿತು. ಈ ವೇಳೆ ಆಸಿಸ್ ಡಿಕ್ಲೇರ್ ಮಾಡಿಕೊಂಡಿದ್ದು ಭಾರತಕ್ಕೆ 407 ರನ್‌ಗಳ ಬೃಹತ್ ಗುರಿಯನ್ನು ನೀಡಿದಂತಾಯಿತು.

ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿಯನ್ನನು ಟೀಮ್ ಇಂಡಿಯಾ ಆರಂಭಿಕರು ಉತ್ತಮ ರೀತಿಯಲ್ಲಿ ಬೆನ್ನಟ್ಟಿದರಾದರೂ ದೊಡ್ಡ ಜೊಯೆತಾಟವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಮೊದಲ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ಆರಂಭಿಕರಿಂದ ಬಂದಿತ್ತು. ಶುಬ್ಮನ್ ಗಿಲ್ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ರೋಹಿತ್ ಶರ್ಮಾ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕವನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದು 52 ರನ್ ಗಳಿಸಿ ಪ್ಯಾಟ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಹೀಗೆ ಭಾರತ ಆಸಿಸ್ ನೀಡಿರುವ ಬೃಹತ್ ಗುರಿಯನ್ನು ಬೆನ್ನತ್ತುವ ವೇಳೆ ಎರಡು ವಿಕೆಟ್ ಕಳೆದುಕೊಂಡಿದ್ದು 98 ರನ್ ಸಿಡಿಸಿದೆ.

ಅಂತಿಮ ದಿನ ಭಾರತ ಗೆಲ್ಲಲು 309 ರನ್‌ಗಳ ಅವಶ್ಯಕತೆಯಿದೆ. ಸದ್ಯ ಕ್ರೀಸ್‌ನಲ್ಲಿ ನಾಯಕ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದು ಕ್ರಮವಾಗಿ 9 ಹಾಗೂ 4 ರನ್ ಗಳಿಸಿದ್ದಾರೆ. ಅಂತಿಮ ದಿನದಾಟದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಯಾವ ರೀತಿಯ ಪ್ರದರ್ಶನವನ್ನು ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

This News Article is a Copy of MYKHEL