ಒಲಿಂಪಿಕ್ ಚಾಂಪಿಯನ್ ಅತೀ ಹಿರಿಯ ಅಜ್ಜಿಗೆ 100 ವರ್ಷ ವಯಸ್ಸು!

10-01-21 02:46 pm       Source: MYKHEL Sadashiva   ಕ್ರೀಡೆ

ಒಲಿಂಪಿಕ್‌ನಲ್ಲಿ ಬಂಗಾರದ ಪದಕ ಗೆದ್ದಿರುವ ಹಂಗೆರಿಯ ಆ್ಯಗ್ನೆಸ್ ಕೆಲೆಟಿ 2021 ಜನವರಿ 9ಕ್ಕೆ ಭರ್ತಿ 100ನೇ ವರ್ಷಕ್ಕೆ ಕಾಲಿರಿಸಿದ್ದಾರೆ.

ಬುಡಾಪೆಸ್ಟ್: ಒಲಿಂಪಿಕ್‌ನಲ್ಲಿ ಬಂಗಾರದ ಪದಕ ಗೆದ್ದಿರುವ ಹಂಗೆರಿಯ ಆ್ಯಗ್ನೆಸ್ ಕೆಲೆಟಿ 2021 ಜನವರಿ 9ಕ್ಕೆ ಭರ್ತಿ 100ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಜಿಮ್ನ್ಯಾಸ್ಟಿಕ್‌ನಲ್ಲಿ ಕೆಲೆಟಿ ಒಟ್ಟು 10 ಪದಕಗಳನ್ನು ಗೆದ್ದ ಗಟ್ಟಿಗಿತ್ತಿ. ಇದರಲ್ಲಿ 5 ಚಿನ್ನದ ಪದಕಗಳೂ ಸೇರಿವೆ.

ತನ್ನ 100ನೇ ವರ್ಷದ ಹುಟ್ಟುಹಬ್ಬವನ್ನು ಆ್ಯಗ್ನೆಸ್ ಕೆಲೆಟಿ ಅವರು ತನ್ನ ತವರೂರಾದ ಬುಡಾಪೆಸ್ಟ್‌ನಲ್ಲಿ ಶನಿವಾರ ಆಚರಿಸಿಕೊಂಡಿದ್ದಾರೆ. ಈ ದಿನ ಕೆಲೆಟಿ ಅವರು ತನ್ನ ಬದುಕಿನ ಸಾಧನೆಗಳು, ಸಾಹಸ, ದುಃಖಕರ ಸಂಗತಿಗಳು, ಪರಿಶ್ರಮ ಇವನ್ನೆಲ್ಲ ಕಣ್ಣೆದುರು ತಂದುಕೊಂಡು ಸಣ್ಣದಾಗಿ ವಿವರಿಸಿದರು.

ಶನಿವಾರ ಬುಡಾಪೆಸ್ಟ್‌ನಲ್ಲಿ ತನ್ನ 100ನೇ ಹುಟ್ಟುಹಬ್ಬವನ್ನು ಆಚರಿಸುತ್ತ ಕೆಲೆಟಿ, 'ನನಗೀಗ 60 ವರ್ಷ ವಯಸ್ಸಾದಂತೆಯೇ ಭಾಸವಾಗುತ್ತಿದೆ,' ಎಂದಿದ್ದಾರೆ. 'ದ ಕ್ವೀನ್ ಆಫ್ ಜಿಮ್ನ್ಯಾಸ್ಟಿಕ್' ಎಂಬ ಹೆಸರು ಇರುವ ಕೆಲೆಟಿಯ ಜೀವನಾಧರಿತ ಪುಸ್ತಕವೂ ಇದೆ.

9 ಜನವರಿ 1921ರಂದು ಜನಿಸಿರುವ ಆಗ್ನೆಸ್ ಕೆಲೆಟಿ, ದ್ವಿತೀಯ ಮಹಾಯುದ್ಧವನ್ನು ಕಂಡವರು. ಮಹಾಯುದ್ಧದಿಂದಾಗಿ 1940 ಮತ್ತು 1944ರ ಒಲಿಂಪಿಕ್ಸ್ ರದ್ದಾದಾಗ ಕೆಲೆಟಿ ವೃತ್ತಿ ಬದುಕಿಗೆ ತೊಂದರೆಯಾಗಿತ್ತು. ಯಹೂದಿ ಮನೆತನದವರಾಗಿದ್ದರಿಂದ ಕೆಲೆಟಿಯನ್ನು ಅವರ ತಂಡದಿಂದ ಹೊರ ಹಾಕಲಾಯ್ತು. ಬಳಿಕ ಕೆಲೆಟಿ ಹಂಗೇರಿಯನ್ ರಾಷ್ಟ್ರದಲ್ಲಿ ತಲೆ ಮರೆಸಿ ಬದುಕಬೇಕಾದ ಸಂದರ್ಭವೂ ಎದುರಾಗಿತ್ತು.

This News Article is a Copy of MYKHEL