ಭಾರತಕ್ಕೆ ಮತ್ತೆ ಆಘಾತ, 4ನೇ ಟೆಸ್ಟ್‌ನಿಂದ ಪ್ರಮುಖ ಬೌಲರ್ ಔಟ್!

12-01-21 11:38 am       Source: MYKHEL Sadashiva   ಕ್ರೀಡೆ

ಭಾರತದ ಮತ್ತೊಬ್ಬ ಪ್ರಮುಖ ಆಟಗಾರ ತಂಡದಿಂದ ಹೊರ ಬಿದ್ದಿದ್ದಾರೆ.

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ವಿಜೇತರನ್ನು ನಿರ್ಧರಿಸಲು ಪ್ರಮುಖವೆನಿಸಿರುವ ಅಂತಿಮ ಟೆಸ್ಟ್‌ಗೂ ಮುನ್ನವೇ ಭಾರತದ ಮತ್ತೊಬ್ಬ ಪ್ರಮುಖ ಆಟಗಾರ ತಂಡದಿಂದ ಹೊರ ಬಿದ್ದಿದ್ದಾರೆ.

ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಜನವರಿ 15ರಂದು ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಭಾರತ vs ಆಸ್ಟ್ರೇಲಿಯಾ ನಾಲ್ಕನೇ ಮತ್ತು ಕೊನೇಯ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಕಿಬ್ಬೊಟ್ಟೆ ಭಾಗದಲ್ಲಿ ನೋವಿರುವುದರಿಂದ ನಾಲ್ಕನೇ ಟೆಸ್ಟ್‌ನಿಂದ ಬೂಮ್ರಾ ಹೊರ ಬಿದ್ದಿದ್ದಾರೆ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಸೋಮವಾರ (ಜನವರಿ 12) ಮುಕ್ತಾಯಗೊಂಡ ಮೂರನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ 2+1 ವಿಕೆಟ್ ಪಡೆದಿದ್ದರು. ಈ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯೀಗ 1-1ರಿಂದ ಸಮಬಲಗೊಂಡಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಕುತೂಹಲ ಮೂಡಿಸಿದೆ.

ಟೀಮ್ ಇಂಡಿಯಾದ ಪ್ರಮುಖ ಆಲ್ ರೌಂಡರ್‌ಗಳಾದ ಹನುಮ ವಿಹಾರಿ ಮತ್ತು ರವೀಂದ್ರ ಜಡೇಜಾ ಈಗಾಗಲೇ ನಾಲ್ಕನೇ ಟೆಸ್ಟ್‌ನಿಂದ ಹೊರಗುಳಿಸಿದಿದ್ದಾರೆ. ವೇಗಿ ಉಮೇಶ್ ಯಾದವ್ ಕೂಡ ಕಳೆದ ತಿಂಗಳು ಗಾಯಕ್ಕೀಡಾಗಿ ಟೆಸ್ಟ್‌ ಸರಣಿ ಮಧ್ಯದಲ್ಲೇ ಭಾರತಕ್ಕೆ ವಾಪಸ್ಸಾಗಿದ್ದರು.

This News Article is a Copy of MYKHEL