ಭಾರತ vs ಆಸ್ಟ್ರೇಲಿಯಾ: ರೋಹಿತ್ ಶರ್ಮಾ ಹೆಸರಿಗೆ ಕೆಟ್ಟ ದಾಖಲೆ

16-01-21 05:25 pm       Source: MYKHEL Sadashiva   ಕ್ರೀಡೆ

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಹೆಸರಿಗೆ ಕೆಟ್ಟ ದಾಖಲೆಯೊಂದು ಸೇರ್ಪಡೆಯಾಗಿದೆ.

ಬ್ರಿಸ್ಬೇನ್: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಹೆಸರಿಗೆ ಕೆಟ್ಟ ದಾಖಲೆಯೊಂದು ಸೇರ್ಪಡೆಯಾಗಿದೆ. ಶನಿವಾರ (ಜನವರಿ 16) ನಡೆದ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಮತ್ತು ಕೊನೇಯ ಟೆಸ್ಟ್‌ನಲ್ಲಿ ಶರ್ಮಾ ಬೇಡದ ದಾಖಲೆಗೆ ಕಾರಣರಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಬ್ಬನೇ ಬೌಲರ್‌ಗೆ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ದಾಖಲೆ ಶರ್ಮಾ ನಿರ್ಮಿಸಿದ್ದಾರೆ.

ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 74 ಎಸೆತಗಳಲ್ಲಿ 44 ರನ್ ಬಾರಿಸಿ ಆಸೀಸ್ ಸ್ಪಿನ್ನರ್ ನೇಥನ್ ಲಿಯಾನ್ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಇದರೊಂದಿಗೆ ಶರ್ಮಾ ಹೆಸರಿನಲ್ಲಿ ಬೇಡದ ದಾಖಲೆ ನಿರ್ಮಾಣವಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಶರ್ಮಾ ಹೆಚ್ಚು ಬಾರಿ ವಿಕೆಟ್‌ ಒಪ್ಪಿಸಿದ ಅಂಕಿ-ಅಂಶಗಳನ್ನು ಗಮನಿಸಿದರೆ ಶರ್ಮಾ ವಿಕೆಟ್ ಹೆಚ್ಚು ಸಾರಿ ಕೆಡವಿದ್ದು ನೇಥನ್ ಅವರೇ. ಟೆಸ್ಟ್‌ನಲ್ಲಿ ಲಿಯಾನ್ ಅವರ 258 ಎಸೆತಗಳನ್ನು ಎದುರಿಸಿರುವ ಹಿಟ್‌ಮ್ಯಾನ್‌ ರೋಹಿತ್ ಒಟ್ಟು 6 ಸಾರಿ ವಿಕೆಟ್ ನೀಡಿದ್ದಾರೆ.

This News Article is a Copy of MYKHEL