ಬ್ರೇಕಿಂಗ್ ನ್ಯೂಸ್
17-01-21 04:00 pm Source: MYKHEL ಕ್ರೀಡೆ
ಗೋವಾ : ಉತ್ತಮ ಪ್ರದರ್ಶನ ತೋರಿದ ಹೈದರಾಬಾದ್ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನದಲ್ಲಿದ್ದು ಬಲಿಷ್ಠ ತಂಡವೆನಿಸಿರುವ ಮುಂಬೈ ಸಿಟಿ ಎಫ್ ಸಿ ತಂಡಕ್ಕೆ ಗೋಲು ಗಳಿಸುವ ಅವಕಾಶವನ್ನು ಕೊನೆಯ ಕ್ಷಣದವರೆಗೂ ನೀಡಲಿಲ್ಲ. ಪರಿಣಾಮ ಹೀರೋ ಇಂಡಿಯನ್ ಸೂಪರ್ ಲೀಗ್ ನ 60ನೇ ಪಂದ್ಯ ಗೋಲಿಲ್ಲದೆ ಡ್ರಾಗೊಂಡಿತು. ಮುಂಬೈ ಈ ಡ್ರಾದೊಂದಿಗೆ ಆಗ್ರ ಸ್ಥಾನದಲ್ಲೇ ಮುಂದುವರಿಯಿತು. 26 ಅಂಕ ಗಳಿಸಿದ ಮುಂಬೈ ತಂಡದ ಅಗ್ರ ಸ್ಥಾನವನ್ನು ಕಬಳಿಸಲು ಸದ್ಯ ಯಾವುದೇ ತಂಡಕ್ಕೆ ಕಷ್ಟಸಾಧ್ಯವಾಗಿದೆ. ಟಿಕೆ ಮೋಹನ್ ಬಾಗನ್ ಮುಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಿ, ಮುಂಬೈ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದರೆ ಲೀಗ್ ಅಗ್ರ ಪಟ್ಟ ಬದಲಾಗಲಿದೆ. ಹೈದರಾಬಾದ್ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದ್ದು, ಇದು ಐದು, ಆರು ಮತ್ತು ಏಳನೇ ಸ್ಥಾನದಲ್ಲಿರುವ ತಂಡಗಳಿಗೆ ಉತ್ತಮ ಅವಕಾಶ ಕಲ್ಪಿಸಿದಂತಾಗಿದೆ.
ಗೋಲಿಲ್ಲದ ಪ್ರಥಮಾರ್ಧ: ಮುಂಬೈ ಸಿಟಿ ಎಫ್ ಸಿ ನಿರೀಕ್ಷೆಯಂತೆ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತು. ಸೆಟ್ ಪೀಸ್ ಮೂಲಕ ಗೋಲು ಗಳಿಸುವ ಅವಕಾಶವನ್ನೂ ಹೊಂದಿತ್ತು. ಆದರೆ ಹೈದರಾಬಾದ್ ನ ಡಿಫೆನ್ಸ್ ವಿಭಾಗ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. 33ನೇ ನಿಮಿಷದಲ್ಲಿ ಹೈದರಾಬಾದ್ ಗೆ ಉತ್ತಮ ರೀತಿಯಲ್ಲಿ ಓಪನ್ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಅಮರಿಂದರ್ ಸಿಂಗ್ ಅದ್ಭುತ ರೀತಿಯಲ್ಲಿ ಚೆಂಡನ್ನು ತಡೆದು, ಹೈದರಾಬಾದ್ ನ ಮುನ್ನಡೆಗೆ ಅಡ್ಡಿಯಾದರು. ದ್ವಿತಿಯಾರ್ಧದಲ್ಲಿ ಗೋಲು ಗಳಿಸುವಲ್ಲಿ ಪ್ರಭುತ್ವಹೊಂದಿರುವ ಹೈದರಾಬಾದ್ ಯಾವ ರೀತಿಯಲ್ಲಿ ಯಶಸ್ಸು ಕಾಣುತ್ತದೆ, ಮತ್ತು ಅದಕ್ಕೆ ಇದುವರೆಗೂ ಎದುರಾಳಿ ತಂಡಕ್ಕೆ ಕೇವಲ 4 ಗೋಲುಗಳನ್ನು ಗಳಿಸಲು ಅವಕಾಶ ನೀಡಿರುವ ಮುಂಬೈ ಯಾವ ರೀತಿಯಲ್ಲಿ ತಡೆಯೊಡ್ಡುತ್ತದೆ ಎಂಬುದು ಕುತೂಹಲ. ಕುತೂಹಲದ ಪಂದ್ಯ: ಹೀರೋ ಇಂಡಿಯನ್ ಸೂಪರ್ ಲೀಗ್ ನ 60ನೇ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್ ಸಿ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಹೈದರಾಬಾದ್ ಎಫ್ ಸಿ ತಂಡಗಳು ಮುಖಾಮುಖಿಯಾದವು. ಹೈದರಾಬಾದ್ ಗೆ ನಾಲ್ಕನೇ ಸ್ಥಾನದಲ್ಲಿ ಉಳಿಯಬೇಕಾದರೆ ಇಲ್ಲಿ ಜಯದ ಅಗತ್ಯ ಇದೆ. ಹಿಂದಿನ ಪಂದ್ಯದಲ್ಲಿ ಮುಂಬೈ ತಂಡ ಹೈದರಾಬಾದ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಆ ನಂತರ ಮುಂಬೈ ಸಿಟಿ ಸತತ ನಾಲ್ಕು ಪಂದ್ಯಗಳಲ್ಲಿ ಜಯ ದಾಖಲಿಸಿತ್ತು. ಅಲ್ಲಿಂದ ಲೀಗ್ ನಲ್ಲಿ 5 ಅಂಕಗಳ ಮುನ್ನಡೆಯೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿತ್ತು.
ಲೀಗ್ ನಲ್ಲಿ ಎಲ್ಲ ತಂಡಗಳಿಗಿಂತ ಅತಿ ಹೆಚ್ಚು ಎನ್ನುನಂತೆ 17 ಗೋಲುಗಳನ್ನು ಗಳಿಸಿದೆ. 10 ಪಂದ್ಯಗಳಲ್ಲಿ ಮುಂಬೈ ಎದುರಾಳಿ ತಂಡಕ್ಕೆ ಕೇವಲ 4 ಗೋಲುಗಳನ್ನು ಗಳಿಸುವ ಅವಕಾಶ ನೀಡಿತ್ತು. ನಿಜಾಮರ ಪಡೆ ಕಳೆದ ಎರಡು ಪಂದ್ಯಗಳಲ್ಲಿ ತಲಾ 4 ಗೋಲುಗಳನ್ನು ಗಳಿಸಿದೆ. ಈ ಎಂಟು ಗೋಲುಗಳು ಪಂದ್ಯದ ದ್ವಿತಿಯಾರ್ಧದಲ್ಲಿ ದಾಖಲಾಗಿರುವುದು ಗಮನಾರ್ಹ. ತಂಡ ಗಳಿಸಿರು ಗೋಲುಗಳಲ್ಲಿ ಶೇ 80 ರಷ್ಟು ಗೋಲುಗಳು ದ್ವಿತಿಯಾರ್ಧದಲ್ಲಿ ದಾಖಲಾಗಿವೆ. ಜೊಯೆಲ್ ಚೈನೆಸೆ ಅವರ ಆಗಮನ ಹೈದಾರಾಬದ್ ನ ಅಟ್ಯಾಕ್ ವಿಭಾಗವನ್ನು ಬಲಿಷ್ಠಗೊಳಿಸಿದೆ. ಇತ್ತಂಡಗಳ ಸಾಮರ್ಥ್ಯವನ್ನು ಗಮನಿಸಿದಾಗ ಪಂದ್ಯ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಸ್ಪಷ್ಟ.
This News Article is a Copy of MYKHEL
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 10:33 pm
Mangalore Correspondent
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
Ullal news, Mangalore, Batapady; ಭ್ರಷ್ಟ ಅಧಿಕಾ...
22-11-24 11:55 am
22-11-24 10:47 pm
Mangalore Correspondent
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm