ದೀಪಕ್ ಕೂಡಾಗೆ ಅಮಾನತಿನ ಬಿಸಿ ಮುಟ್ಟಿಸಿದ ಬರೋಡಾ ಕ್ರಿಕೆಟ್ ಮಂಡಳಿ

22-01-21 04:12 pm       Source: MYKHEL Madhukara Shetty   ಕ್ರೀಡೆ

ಬರೋಡಾ ಕ್ರಿಕೆಟಿಗ ದೀಪಕ್ ಹೂಡಾ ಅವರನ್ನು ಬರೋಡಾ ಕ್ರಿಕೆಟ್ ಅಸೋಸಿಯೇಶನ್ ಪ್ರಸಕ್ತ ಕ್ರಿಕೆಟ್‌ ಋತುವಿಗೆ ಸಂಪೂರ್ಣವಾಗಿ ಅಮಾನತುಗೊಳಿಸುವ ತೀರ್ಮಾ ಕೈಗೊಂಡಿದೆ.

ಬರೋಡಾ ಕ್ರಿಕೆಟಿಗ ದೀಪಕ್ ಹೂಡಾ ಅವರನ್ನು ಬರೋಡಾ ಕ್ರಿಕೆಟ್ ಅಸೋಸಿಯೇಶನ್ ಪ್ರಸಕ್ತ ಕ್ರಿಕೆಟ್‌ ಋತುವಿಗೆ ಸಂಪೂರ್ಣವಾಗಿ ಅಮಾನತುಗೊಳಿಸುವ ತೀರ್ಮಾ ಕೈಗೊಂಡಿದೆ. ಜನವರಿ 21ರಂದು ಅಪೆಕ್ಸ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಂಡಳಿಯ ಈ ನಿರ್ಧಾರಕ್ಕೆ ಕೆಲ ಸದಸ್ಯರಯ ವಿರೋಧವನ್ನು ವ್ಯಕ್ತಪಡಿಸಿರುವ ಘಟನೆ ಕೂಡ ನಡೆಯಿತು.

ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಜೊತೆಗೆ ಮಾತಿನ ಚಕಮಕಿಯ ನಂತರ ದೀಪಕ್ ಹೂಡ ಅಸಮಾಧಾನಗೊಂಡು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಹೊರಬಂದಿದ್ದರು. ದೀಪಕ್ ಹೂಡಾ ಅವರ ಈ ವರ್ತನೆ ಬರೋಡಾ ಕ್ರಿಕೆಟ್ ಮಂಡಳಿಯ ಆಕ್ರೋಕ್ಕೆ ಕಾರಣವಾಗಿದೆ.

"ಪ್ರಸಕ್ತ ದೇಶೀಯ ಋತುವಿನಲ್ಲಿ ದೀಪಕ್ ಹೂಡಾ ಅವರನ್ನು ಬರೋಡಾ ತಂಡವನ್ನು ಪ್ರತಿನಿಧಿಸಲು ಪರಿಗಣಿಸಲಾಗುವುದಿಲ್ಲ ಎಂದು ಅಪೆಕ್ಸ್ ಕೌನ್ಸಿಲ್ ನಿರ್ಧರಿಸಿದೆ. ಘಟನೆಯ ಬಗ್ಗೆ ತಂಡದ ಮ್ಯಾನೇಜರ್ ಮತ್ತು ತರಬೇತುದಾರರ ವರದಿಗಳು ಹಾಗೂ ಹೂಡಾ ಅವರೊಂದಿಗಿನ ಮಾತುಕತೆಯನ್ನು ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಬರೋಡಾ ಮಂಡಳಿ ಹೇಳಿದೆ. ದೀಪಕ್ ಹೂಡಾ ಅವರು ಪ್ರಸಕ್ತ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹಾಗೂ ಈ ಋತುವಿನ ಮುಂಬರುವ ಟೂರ್ನಿಗಳಲ್ಲೂ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. 2021-22ರ ಋತುವಿನಲ್ಲಿ ಹೂಡಾ ಅವರು ಮತ್ತೆ ಆಡುವ ಅಚಕಾಶ ಪಡೆಯಲಿದ್ದಾರೆ" ಎಂದು ಬಿಸಿಎನ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಮುಖ್ಯಸ್ಥ ಸತ್ಯಜಿತ್ ಗಾಯಕ್ವಾಡ್ ಹೇಳಿದ್ದಾರೆ.

ಆದರೆ ಬಿಸಿಎ ತೆಗೆದುಕೊಮಡಿರುವ ಈ ನಿರ್ಧಾರಕ್ಕೆ ಬಿಸಿಎ ಜೊತೆ ಕಾರ್ಯದರ್ಶಿ ಪರಾಗ್ ಪಟೇಲ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹೂಡಾ ಅವರು ಮಾಡಿರುವ ತಪ್ಪೆಂದರೆ ತಂಡದ ಮ್ಯಾನೇಜ್‌ಮೆಂಟ್ ಜೊತೆಗೆ ಘಟನೆಯ ಬಗ್ಗೆ ಚರ್ಚಿಸದೆ ತಂಡದಿಂದ ಹೊರನಡೆದಿದ್ದಾರೆ. ಆದರೆ ಅದಕ್ಕಾಗಿ ಇಡೀ ಋತುವಿನಿಂದ ಅವರನ್ನು ಅಮಾನತು ಮಾಡುವುದು ಅನಗತ್ಯವಾಗಿತ್ತು. ಆತನ ಕೃತ್ಯವನ್ನು ಖಂಡಿಸಿ ಆತನಿಗೆ ಅವಕಾಶವನ್ನು ನೀಡಬಹುದಾಗಿತ್ತು ಎಂದಿದ್ದಾರೆ ಪರಾಗ್ ಪಟೇಲ್.

This News Article is a Copy of MYKHEL