ಟಿಟಿ ಆಟಗಾರ್ತಿ ಮೌಮ ದಾಸ್ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ

26-01-21 05:00 pm       Source: MYKHEL Sadashiva   ಕ್ರೀಡೆ

ಅನುಭವಿ ಟೆನಿಸ್ ಆಟಗಾರ್ತಿ ಮೌಮ ದಾಸ್ ಸೇರಿ, 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ನವದೆಹಲಿ: ಅನುಭವಿ ಟೆನಿಸ್ ಆಟಗಾರ್ತಿ ಮೌಮ ದಾಸ್ ಸೇರಿ, ದಂತಕತೆ ಅಥ್ಲೀಟ್ ಪಿಟಿ ಉಷಾ ಅವರ ಕೋಚ್ ಮಾಧವನ್ ನಂಬಿಯಾರ್ ಸೇರಿ ಒಟ್ಟು 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 72ನೇ ಗಣರಾಜ್ಯೋತ್ಸವ ದಿನ ಭಾರತ ಸರ್ಕಾರ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ.

ಟೇಬಲ್ ಟೆನಿಸ್ ಆಟಗಾರ್ತಿ ಮೌನ ದಾಸ್ ಮತ್ತು ಅಥ್ಲೆಟಿಕ್ಸ್ ಕೋಚ್ ಮಾಧವನ್ ನಂಬಿಯಾರ್ ಹೊರತು ಪಡಿಸಿ, ಭಾರತ ಬಾಸ್ಕೆಟ್ ಬಾಲ್ ತಂಡದ ಮಾಜಿ ನಾಯಕಿ ಪಿ ಅನಿತಾ, ದೂರದ ಓಟಗಾರ್ತಿ ಸುಧಾ ಸಿಂಗ್, ಭಾರತದ ಮಾಜಿ ರಸ್ಲರ್ ವಿಜೇಂದರ್ ಸಿಂಗ್, ಪ್ಯಾರಾ ಅಥ್ಲೀಟ್ ಕೆವೈ ವೆಂಕಟೇಶ್ ಮತ್ತು ಪರ್ವತಾರೋಹಿ ಅಂಶು ಜೇಮ್‌ಸೇನ್‌ಪ ಅವರಿಗೂ ಪದ್ಮಶ್ರೀ ನೀಡಲಾಗಿದೆ. ಭಾರತೀಯ ನಾಗರಿಕ ಪ್ರಶಸ್ತಿಗಳಲ್ಲಿ ಪದ್ಮಶ್ರೀ ಪ್ರಶಸ್ತಿ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾಗಿ ಗುರುತಿಸಿಕೊಂಡಿದೆ. ಗಣರಾಜ್ಯೋತ್ಸವ ದಿನ ಪ್ರತೀವರ್ಷ ಪದ್ಮಶ್ರೀ ವಿಜೇತರನ್ನು ‍ಘೋಷಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್ ವಿತರಿಸಲಿದ್ದಾರೆ.

ಮೌಮ ದಾಸ್‌ಗೆ 2013ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು. ಆದರೆ ಟೇಬಲ್ ಟೆನಿಸ್‌ನಲ್ಲಿ ಅಚಂತ ಶರತ್ ಕಮಲ್ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೆದ್ದ ಬಳಿಕ ಈ ಗೌರವಕ್ಕೆ ಪಾತ್ರರಾಗುತ್ತಿರುವ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ಮೌಮ ಪಾತ್ರರಾಗಿದ್ದಾರೆ.

This News Article is a Copy of MYKHEL