ಬ್ರೇಕಿಂಗ್ ನ್ಯೂಸ್
08-02-21 03:44 pm Source: MYKHEL ಕ್ರೀಡೆ
ಗೋವಾ, ಫೆಬ್ರವರಿ 8: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಂಬೈ ಸಿಟಿ ಎಫ್ ಸಿ ಹಾಗೂ ಎಫ್ ಸಿ ಗೋವಾ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಅನೇಕ ಅಂಕಿಅಂಶಗಳು ಪರಸ್ಪರ ತುಲನೆಗೆ ಒಳಗಾಗಲಿವೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಇತ್ತಂಡಗಳೂ ಮುಖಾಮುಖಿಯಾಗಲಿವೆ.
ಮುಂಬೈ ಹಾಗೂ ಗೋವಾ ತಂಡಗಳು ಹೆಚ್ಚಿನ ಸಮಯ ಮೊದಲ ಹಾಗೂ ದ್ವಿತೀಯ ಸ್ಥಾನದಲ್ಲಿದ್ದವು, ಆದರೆ ಗೋವಾ ಈಗ ಮೂರನೇ ಸ್ಥಾನದಲ್ಲಿದೆ. ಗೋವಾ 11 ಅಂಕಗಳಿಂದ ಹಿಂದೆ ಬಿದ್ದಿದೆ. ಜುವಾನ್ ಫೆರಾಂಡೋ ಈಗ ಕೋಚ್ ಆಗಿರುವ ಗೋವಾ ತಂಡದ ಹಿಂದಿನ ಯಶಸ್ಸಿಗೆ ಸರ್ಗಿಯೊ ಲೊಬೆರಾ ಅವರು ಕಾರಣ. ಗೋವಾ ತಂಡ ಪ್ರತಿ ಪಂದ್ಯಕ್ಕೆ 58 ಶೇ, ದಂತೆ 489 ಪಾಸುಗಳನ್ನು ದಾಖಲಿಸಿದ್ದು , ಮುಂಬೈ 56 ಪ್ರತಿಶತದಂತೆ 486 ಪಾಸ್ ಗಳನ್ನು ದಾಖಲಿಸಿದೆ. 75.71 ಸರಾಸರಿಯೊಂದಿಗೆ ಮುಂಬೈ ಪಾಸಿಂಗ್ ನಿಖರತೆಯನ್ನು ಮುಂಬೈ ಹೊಂದಿದೆ. ಗೋವಾ 74.94 % ನಿಖರತೆ ಹೊಂದಿದೆ.
ಈ ಮೊದಲು ಇತ್ತಂಡಗಳು ಪರಸ್ಪರ ಮುಖಾಮುಖಿಯಾದಾಗ ಆ ಪಂದ್ಯದ ಬಗ್ಗೆ ನಿರೀಕ್ಷೆಗೂ ಮೀರಿದ ಸುದ್ದಿಯಾಗಿತ್ತು. ಆದರೆ ರೀಡಿಂ ತ್ಲಾಂಗ್ ಆರಂಭದಲ್ಲೇ ರೆಡ್ ಕಾರ್ಡ್ ಪಡೆದ ಕಾರಣ ಮುಂಬೈ ಮೇಲುಗೈ ಸಾಧಿಸಿತ್ತು. ಈಗ ಇತ್ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದು, ಪಂದ್ಯದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಮುಂಬೈತಂಡಕ್ಕೆ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳು ಇಲ್ಲಿ ಜಯದ ಅಗತ್ಯ ಇದೆ. ಎಟಿಕೆ ಮೋಹನ್ ಬಾಗನ್ ತಂಡ ಮೂರು ಅಂಕಗಳಿಂದ ಹಿಂದೆ ಬಿದ್ದಿದೆ. ಗೋವಾ ತಂಡ ಕಳೆದ ಎಂಟು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಮಾಡಿ ತೋರಿಸುವುದಕ್ಕಿಂತ ಹೇಳುವುದೇ ಸುಲಭ ಎಂದು ಅವರಿಗೆ ಗೊತ್ತು. "ನಾವು ಒಂದು ಉತ್ತಮ ತಂಡದ ವಿರುದ್ಧ ಆಡಲಿದ್ದೇವೆ. ಅವರು ನಿಜವಾಗಿಯೂ ಒತ್ತಡದಲ್ಲಿದ್ದಾರೆ, ಏಕೆಂದರೆ ಅವರಿಗೆ ಪ್ಲೇ ಆಫ್ ತಲುಪಬೇಕಾಗಿದೆ. ಈ ಗುರಿಯನ್ನು ತಲುಪಲು ಹಲವು ತಂಡಗಳು ಸ್ಪರ್ಧೆಯಲ್ಲಿವೆ. ನಾವು ನಮ್ಮ ಬಗ್ಗೆ ಯೋಚಿಸುತ್ತಿದ್ದೇವೆ. ನಾವು ನಮ್ಮ ಆಟದಲ್ಲಿ ಸುಧಾರಣೆ ಕಂಡುಕೊಳ್ಳಲು ಯತ್ನಿಸುವೆವು. ಅದೇ ರೀತಿ ಎದುರಾಳಿ ತಂಡದ ಬಗ್ಗೆ ಅರಿತುಕೊಂಡು ಆಡುವೆವು, ಒಬ್ಬ ಕೋಚ್ ಆಗಿ ನನಗೆ ಯಾವುದು ಮುಖ್ಯವೆಂದರೆ ತಂಡ ಶೇ 100 ರಷ್ಟು ಆಡುವುದು. ನಮ್ಮ ತಂಡ ಆ ರೀತಿಯಲ್ಲಿ ಆಡಿದರೆ ಮೂರು ಅಂಕ ಕಟ್ಟಿಟ್ಟ ಬುತ್ತಿ," ಎಂದು ಲೊಬೆರಾ ಹೇಳಿದರು.
ಪ್ಲೇ ಆಫ್ ನ ಕೊನೆಯ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಸ್ಪರ್ಧೆಯಲ್ಲಿ ಗೋವಾ ಇತರ ತಂಡಗಳೊಂದಿಗೆ ಸ್ಪರ್ಧಿಸುತ್ತಿದೆ. ಈ ಹಂತದಲ್ಲಿ ಏರಳಿತಗಳಾದರೆ ತಂಡದ ಮುನ್ನಡೆಗೆ ಅಡ್ಡಿಯಾಗಲಿದೆ ಎಂದು ಫರಾಂಡೊ ಅವರಿಗೆ ಚೆನ್ನಾಗಿ ಗೊತ್ತು. ಆದರೆ ಅವರು ತಮ್ಮ ತಂಡ ಒತ್ತಡದಲ್ಲಿದೆ ಎಂಬುದನ್ನು ತಳ್ಳಿಹಾಕಿದ್ದಾರೆ. " ಗೋವಾ ತಂಡಕ್ಕೆ ಪ್ರತಿಯೊಂದು ಪಂದ್ಯದಲ್ಲೂ ಒತ್ತಡ ಇದೆ. ಏಕೆಂದರೆ ನಮಗೆ ಸುಧಾರಣೆ ಕಂಡುಕೊಂಡು ಮೂರು ಅಂಕಗಳನ್ನು ಗಳಿಸಬೇಕಾಗಿದೆ. ಮುಂಬೈ ತಂಡಕ್ಕೆ ಒತ್ತಡ ಇದ್ದಿರಬಹುದು, ಅದಕ್ಕೆ ಚಾಂಪಿಯನ್ಷಿಪ್ ಗೆಲ್ಲುವುದೇ ಗುರಿಯಾಗಿದೆ. ನಮಗೆ ಪಂದ್ಯದಲ್ಲಿ ಸುಧಾರಣೆ ಕಂಡುಕೊಲ್ಳುವುದೇ ಗುರಿ, ಉತ್ತಮವಾಗಿ ಆಡಿ, ಉತ್ತಮವಾಇಗ ಯೋಜನೆ ಮಾಡಿಕೊಂಡು, ಉತ್ತಮ ರೀತಿಯಲ್ಲಿ ಮೂರು ಅಂಕಗಳನ್ನು ಗಳಿಸುವುದಾಗಿದೆ," ಎಂದರು.
This News Article is a Copy of MYKHEL
23-11-24 11:35 am
Bangalore Correspondent
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
23-11-24 12:20 pm
Mangalore Correspondent
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm