ಬ್ರೇಕಿಂಗ್ ನ್ಯೂಸ್
09-02-21 03:49 pm Source: MYKHEL Sadashiva ಕ್ರೀಡೆ
ಚೆನ್ನೈ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶಕ್ಕೆ ನಿರ್ಣಾಯಕವೆನಿಸಿರುವ ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ನಾಯಕ ಜೋ ರೂಟ್ ದ್ವಿಶತಕ, ಜೇಮ್ಸ್ ಆ್ಯಂಡರ್ಸನ್ ಮಾರಕ ಬೌಲಿಂಗ್‌ನಿಂದ ಕೊಹ್ಲಿ ಪಡೆ 227 ರನ್ ಸೋಲುಭವಿಸಿದೆ. ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0ಯ ಮುನ್ನಡೆ ಸಾಧಿಸಿದೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಫೆಬ್ರವರಿ 9) ಮುಕ್ತಾಯಗೊಂಡ ಮೊದಲನೇ ಟೆಸ್ಟ್‌ನಲ್ಲಿ ಭಾರತ ನೀರಸ ಪ್ರದರ್ಶನದೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ.
ಈ ಪಂದ್ಯದಲ್ಲಿ ಸರಣಿ ಗೆಲ್ಲುವ ತಂಡಕ್ಕೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಲಿದೆ.
ಇಂಗ್ಲೆಂಡ್ ಇನ್ನಿಂಗ್ಸ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್ 218, ಡೊಮಿನಿಕ್ ಸಿಬ್ಲಿ 87, ಬೆನ್ ಸ್ಟೋಕ್ಸ್ 82 ರನ್ ಗಮನಾರ್ಹ ಕೊಡುಗೆಯೊಂದಿಗೆ 190.1 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 578 ರನ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 46.3 ಓವರ್‌ಗೆ ಎಲ್ಲ ವಿಕೆಟ್ ಕಳೆದು 178 ರನ್ ಗಳಿಸಿತು.
ಭಾರತದ ಇನ್ನಿಂಗ್ಸ್
ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ 73, ರಿಷಭ್ ಪಂತ್ 91, ವಾಷಿಂಗ್ಟನ್ ಸುಂದರ್ ಅಜೇಯ 85 ರನ್‌ನೊಂದಿಗೆ 95.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 337 ರನ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 58.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 192 ರನ್ ಬಾರಿಸಿ ಶರಣಾಯಿತು.
ಹೆಚ್ಚು ವಿಕೆಟ್ ಪಡೆದವರು
ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಇಶಾಂತ್ ಶರ್ಮಾ 2+1, ಜಸ್‌ಪ್ರೀತ್ ಬೂಮ್ರಾ 3, ಶಹಬಾಝ್ ನದೀಮ್ 2+2, ಆರ್ ಅಶ್ವಿನ್ 3+6, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರೆ, ಭಾರತ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ 2+1, ಜೇಮ್ಸ್ ಆ್ಯಂಡರ್ಸನ್ 3+2, ಬೆನ್ ಸ್ಟೋಕ್ಸ್ 1, ಜ್ಯಾಕ್ ಲೀಚ್ 2+4, ಡಾಮ್ ಬೆಸ್ 4+1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಜೋ ರೂಟ್ ಪಂದ್ಯಶ್ರೇಷ್ಠರೆನಿಸಿದರು.
This News Article is a Copy of MYKHEL
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
05-09-25 10:53 pm
Mangalore Correspondent
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm
16 ವರ್ಷಗಳ ಹಳೆ ಪ್ರಕರಣದಲ್ಲಿ ಶಿಕ್ಷೆ ; ಬ್ರಹ್ಮಾವರದ...
05-09-25 12:34 pm
ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈ...
05-09-25 11:43 am