ಬ್ರೇಕಿಂಗ್ ನ್ಯೂಸ್
09-02-21 04:10 pm Source: MYKHEL ಕ್ರೀಡೆ
ಗೋವಾ: ಸತತ ವೈಫಲ್ಯದ ನಂತರ ಜಯದ ಲಯ ಕಂಡುಕೊಂಡಿರುವ ಬೆಂಗಳೂರು ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಸೋಲರಿಯದ ನೌಶಾದ್ ಮೂಸಾ ಅವರ ಪಡೆ, ಹಿಂದಿನ ಎರಡು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಯಶಸ್ಸು ಕಂಡಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಬೆಂಗಳೂರು ತಂಡ ಅಗ್ರ ಸ್ಥಾನದ ಗುರಿಹೊಂದಿರುವ ಎಟಿಕೆಮೋಹನ್ ಬಾಗನ್ ವಿರುದ್ಧ ಸೆಣಸಲಿದೆ.
"ಸದ್ಯ ನಾವು ಎಟಿಕೆ ಮೋಹನ್ ಬಾಗನ್ ತಂಡದ ಕಡೆಗೆ ಗುರಿ ಇಟ್ಟಿದ್ದೇವೆ. ಹೇಗೆ ಆಡಬೇಕೆಂಬುದು ನಮಗೆ ಗೊತ್ತಿದೆ. ನಾವು ನಮ್ಮಿಂದಾದ ಉತ್ತಮ ಆಟವನ್ನು ಪ್ರದರ್ಶಿಸಲಿದ್ದೇವೆ. ಆಟಗಾರರು ಧನಾತ್ಮಕ ನಿಲುವಿನಲ್ಲಿದ್ದಾರೆ. ಪ್ರತಿಯೊಬ್ಬರೂ ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ನಾವು ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿಗೆ ಗೋಲು ನೀಡಿಲ್ಲ. ಇದೇ ರೀತಿಯಲ್ಲಿ ಧನಾತ್ಮಕ ಆಟ ಪ್ರದರ್ಶಿಸುತ್ತೇವೆ ಎಂಬ ನಂಬಿಕೆ ಇದೆ," ಎಂದು ಮಧ್ಯಂತರ ಕೋಚ್ ಮೂಸಾ ಹೇಳಿದರು

ಎರಡು ಕ್ಲೀನ್ ಶೀಟ್ ಯಶಸ್ಸು
ಗುರ್ ಪ್ರೀತ್ ಸಿಂಗ್ ಸಂಧೂ ಅವರ ಉತ್ತಮ ಪ್ರದರ್ಶನದ ನೆರವಿನಿಂದಾಗಿ ಎರಡು ಕ್ಲೀನ್ ಶೀಟ್ ಯಶಸ್ಸು ಸಿಕ್ಕಿದೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ಆರು ಬಾರಿ ಅದ್ಭುತ ಗೋಲುಗಳನ್ನು ತಡೆದು ತಂಡಕ್ಕೆ ನೆರವಾದರಲ್ಲಿದೆ, ಐಎಸ್ ಎಲ್ ನಲ್ಲಿ 29ನೇ ಕ್ಲೀನ್ ಶೀಟ್ ಗೆ ಕಾರಣಾದರು. ಎಟಿಕೆ ಮೋಹನ್ ಬಾಗನ್ ವಿರುದ್ಧದ ಪಂದ್ಯದಲ್ಲಿ ಎಲ್ಲವನ್ನೂ ಗೋಲ್ ಕೀಪರ್ ಮೇಲೆ ಬಿಡುವುದ ಸೂಕ್ತವಲ್ಲ ಎಂದು ತಂಡವನ್ನು ಎಚ್ಚರಿಸಿದ್ದಾರೆ. "ಬಾಗನ್ ತಂಡ ಆರಂಭದಲ್ಲಿ ಗೋಲು ನೀಡಿದರೂ ತಿರುಗೇಟು ನೀಡುವ ತಂಡ. ಆ ಬಗ್ಗೆ ನಾವು ಎಚ್ಚರದಲ್ಲಿರಬೇಕು. ನಾವು ಹೆಚ್ಚು ಒತ್ತಾಗಿ ಇರಬೇಕು. ನಾಳೆಯ ಪಂದ್ಯ ಅಷ್ಟು ಸುಲಭದ ಪಂದ್ಯವಲ್ಲ, ಮೊದಲು ನಾವು ಗೋಲಾಗುವುದನ್ನು ತಡೆಯಬೇಕು. ಮತ್ತೆ ನಾವು ಯಾವಾಗಲಾದರೂ ಗೋಲು ಗಳಿಸಬಹುದು. ಸುನಿಲ್ ಛೆಟ್ರಿ ಮತ್ತು ಕ್ಲೈಟನ್ ಸಿಲ್ವಾ ಇರುವುದರಿಂದ ಏನುಬೇಕಾದರೂ ಆಗಬಹುದು," ಎಂದರು.

ತಂಡ ಯಾವುದೇ ಒತ್ತಡದಲ್ಲಿಲ್ಲ
ಬೆಂಗಳೂರು ತಂಡ ಎಟಿಕೆಎಂಬಿ ವಿರುದ್ಧ ಕಳಪೆ ದಾಖಲೆ ಹೊಂದಿದೆ, ಆದರೆ ತಮ್ಮ ತಂಡ ಯಾವುದೇ ಒತ್ತಡದಲ್ಲಿಲ್ಲ ಎಂದು ಮೂಸಾ ಹೇಳಿದ್ದಾರೆ. " ಎಲ್ಲಕ್ಕಿಂತ ಮುಖ್ಯವಾದುದು, ನಾನು ಆಟಗಾರರ ಮೇಲೆ ಒತ್ತಡ ಹೇರಲಾರೆ. ಅವರು ಸಾಕಷ್ಟು ಆರಾಮವಾಗಿರಬೇಕು. ಪಂದ್ಯಗಳು ಎಷ್ಟು ಪ್ರಮುಖವಾದುದು ಎಂಬುದು ಅವರಿಗೆ ಗೊತ್ತಿದೆ. ಪರಿಸ್ಥಿತಿಯ ಬಗ್ಗೆ ನಮಗೂ ಗೊತ್ತಿದೆ. ಬಾಗನ್ ತಂಡದಲ್ಲಿ ರಾಯ್ ಕೃಷ್ಣ ಮತ್ತು ಮನ್ವೀರ್ ಸಿಂಗ್ ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ನಾವು ಎಚ್ಚರಿಕೆಯಲ್ಲಿ ಇರಬೇಕು, ಆಟಗಾರರಿಗೂ ಇದು ಗೊತ್ತಿದೆ," ಎಂದರು. ಮುಂಬೈ ಸಿಟಿ ಎಫ್ ಸಿ ಗಿಂತ ಮೂರು ಅಂಕ ಹಿಂದೆ ಬಿದ್ದಿರುವ ಮೋಹನ್ ಬಾಗನ್, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಸುಸ್ಥಿತಿಯಲ್ಲಿದೆ. ನಾಳೆಯ ಪಂದ್ಯದಲ್ಲಿ ಜಯ ಗಳಿಸಿದರೆ ಆಂಟೊನಿಯೋ ಹಬ್ಬಾಸ್ ಪಡೆ ಅಗ್ರ ಸ್ಥಾನ ತಲುಪಲಿದೆ.

ಅಗ್ರ ಸ್ಥಾನದಲ್ಲಿರಬೇಕು
"ಲೆಕ್ಕಾಚಾರದ ಹೊರತಾಗಿ ಪ್ಲೇ ಆಫ್ ತಲುಪಬೇಕಾದರೆ ಅಗ್ರ ಸ್ಥಾನದಲ್ಲಿರಬೇಕು. ಆ ನಂತರ ಸೆಮಿಫೈನ್ ಮತ್ತು ಸಾಧ್ಯವಾದರೆ ಫೈನಲ್. ನಾವು ಪಂದ್ಯದಿಂದ ಪಂದ್ಯಕ್ಕೆ ಮತ್ತು ದಿನದಿಂದ ದಿನದ ಕಡೆಗೆ ಗಮನ ಹರಿಸುವೆವು. ನಮಗೆ ಬೆಂಗಳೂರು ವಿರುದ್ಧದ ಪಂದ್ಯವೆಂದರೆ ಮತ್ತೊಂದು ಪಂದ್ಯವಿದ್ದಂತೆ. ನಮ್ಮ ತಂಡ ಡಿಫೆನ್ಸ್ ವಿಭಾಗದಲ್ಲಿ ಉತ್ತಮವಾಗಿದೆ. ನಾವು ಅಟ್ಯಾಕ್ ನಲ್ಲೂ ಸುಧಾರಣೆ ಕಂಡಿದ್ದೇವೆ,ಇದು ಪ್ರಮುಖ ಅಂಶ," ಎಂದು ಹಬ್ಬಾಸ್ ಹೇಳಿದರು.
This News Article is a Copy of MYKHEL
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 11:45 am
HK News Staffer
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm