ಕ್ರಿಕೆಟ್‌ ಜಗತ್ತು ಮಾಹಿಯ ಹೆಲಿಕಾಪ್ಟರ್ ಶಾಟ್ ಮಿಸ್ ಮಾಡಿಕೊಳ್ಳಲಿದೆ ; ಅಮಿತ್ ಷಾ

16-08-20 12:09 pm       Headline Karnataka News Network   ಕ್ರೀಡೆ

ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದರೊಂದಿಗೆ ಜಗತ್ತು ಅವರ ಹೆಲಿಕಾಪ್ಟರ್ ಶಾಟ್ ಗಳನ್ನೂ ಮಿಸ್ ಮಾಡಿಕೊಳ್ಳಲಿದೆ ಎಂದು ಅಮಿತ್ ಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ನವದೆಹಲಿ, ಆಗಸ್ಟ್ 16: ಕ್ರಿಕೆಟ್‌  ಜಗತ್ತಿನ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ ಅವರ ಹೆಲಿಕಾಪ್ಟರ್ ಶಾಟ್ ಗೆ  ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಫೇನ್ ಆಗಿದ್ದರು. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದರೊಂದಿಗೆ ಜಗತ್ತು ಅವರ ಹೆಲಿಕಾಪ್ಟರ್ ಶಾಟ್ ಗಳನ್ನೂ ಮಿಸ್ ಮಾಡಿಕೊಳ್ಳಲಿದೆ ಎಂದು ಅಮಿತ್ ಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಭಾರತದ ಕ್ರಿಕೆಟ್‌ ಕ್ಷೇತ್ರಕ್ಕೆ ಸರಿಸಾಟಿಯಿಲ್ಲದ ಕೊಡುಗೆ ನೀಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾರತೀಯ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

"ಭಾರತೀಯ ಕ್ರಿಕೆಟ್‌ಗೆ ಸರಿಸಾಟಿಯಿಲ್ಲದ ಕೊಡುಗೆಗಳಿಗಾಗಿ ಎಮ್‌ ಎಸ್ ಧೋನಿ ಅವರಿಗೆ ಧನ್ಯವಾದ ಅರ್ಪಿಸಲು ನಾನು ಜಗತ್ತಿನಾದ್ಯಂತ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಸೇರುತ್ತೇನೆ. ಅವರ ಕೂಲ್ ಮನಸ್ಥಿತಿ ಹಲವಾರು ಸಂದರ್ಭಗಳಲ್ಲಿ ಆಟದ ದಿಕ್ಕನ್ನೇ ಬದಲಿಸಿದೆ. ಕೈ ತಪ್ಪಿದ್ದ ಆಟ ಸಹ ಭಾರತದ ಪರವಾಗಿ ಮಾಡಿದೆ. ಅವರ ನಾಯಕತ್ವದಲ್ಲಿ ಭಾರತವು ಎರಡು ಬಾರಿ ವಿಶ್ವ ಚಾಂಪಿಯನ್‌ಗಳಾಗಿ ಹೊರ ಹೊಮ್ಮಿದೆ, "ಎಂದು ಅವರು ಟ್ವೀಟ್ ಮಾಡಿದ್ದಾರೆ.