ಬ್ರೇಕಿಂಗ್ ನ್ಯೂಸ್
27-02-21 10:40 am Source: MYKHEL ಕ್ರೀಡೆ
ಭಾರತದ ಆಥ್ಲೆಟಿಕ್ ತಾರೆ ಹಿಮಾದಾಸ್ ಅವರನ್ನು ಅಸ್ಸಾಂ ಸರ್ಕಾರ ಉಪ ಪೋಲೀಸ್ ವರಿಷ್ಠಾಧಿಕಾರಿಯನ್ನಾಗಿ ಶುಕ್ರವಾರ ನೇಮಕ ಮಾಡಿದೆ. ಈ ತಿಂಗಳ ಆರಂಭದಲ್ಲಿ ಹಿಮಾದಾಸ್ ಅವರನ್ನು DSP ಆಗಿ ನೇಮಕ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಹೀಗಾಗಿ ಇಂದು ಹಿಮಾದಾಸ್‌ಗೆ ಅಧಿಕೃತವಾಗಿ ನೇಮಕಗೊಳಿಸಿದೆ.
ಅಸ್ಸಾಂ ಪೊಲೀಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ಅಸ್ಸಾಂ ಪೊಲೀಸ್‌ನ ಡಿಜಿಪಿ ಆಗಿರುವ ಭಾಸ್ಕರ್ ಜ್ಯೋತಿ ಮಹಾಂತ ಹೀಮಾದಾಸ್ ಅವರನ್ನು ಗೌರವಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯ ಮಂತ್ರಿ ಸರ್ಬಾನಂದ ಸೋನೋವಾಲ್ ಕೂಡ ಹಾಜರಿದ್ದರು.
ಈ ಬಗ್ಗೆ ಅಸ್ಸಾಂ ಸಿಎಂ ಟ್ವೀಟ್ ಮಾಡಿದ್ದು, "ಇದು ರಾಜ್ಯಕ್ಕೆ ಮತ್ತು ಹಿಮಾದಾಸ್ ಅವರಿಗೆ ಹೆಮ್ಮೆಯ ದಿನವಾಗಿದೆ. ಹಿಮಾ ದಾಸ್ ಅವರ ನೇಮಕವು ದೇಶದ ಯುವಜನರಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಉತ್ತೇಜನ ನೀಡುತ್ತದೆ" ಎಂದು ಹೇಳಿದ್ದಾರೆ.

ಮಾಜಿ ಕೇಂದ್ರ ಕ್ರೀಡಾ ಸಚಿವರೂ ಆಗಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ "ಯುವ ಪೀಳಿಗೆಗೆ ಕ್ರೀಡೆಗಳನ್ನು ಭರವಸೆಯ ವೃತ್ತಿಜೀವನವನ್ನಾಗಿ ಮಾಡಲು ರಾಜ್ಯ ಸರ್ಕಾರ ಸಮಗ್ರ ಕ್ರೀಡಾ ನೀತಿಯನ್ನು ಅಳವಡಿಸಿಕೊಂಡಿದೆ. ರಾಜ್ಯ ಸರ್ಕಾರವು ಸ್ಪ್ರಿಂಟರ್ ಹಿಮಾ ದಾಸ್ ಅವರನ್ನು ಅಸ್ಸಾಂ ಪೊಲೀಸರಲ್ಲಿ ಡಿಎಸ್ಪಿಯಾಗಿ ನೇಮಕ ಮಾಡಿದೆ, ಏಕೆಂದರೆ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ರಂಗದಲ್ಲಿ ತಮ್ಮ ಸಾಧನೆಗಳಿಂದ ರಾಜ್ಯವನ್ನು ಹೆಮ್ಮೆಪಡುತ್ತಾರೆ" ಎಂದು ಅವರು ಹೇಳಿದರು.
ಇನ್ನು ಈ ಬಗ್ಗೆ ಹಿಮಾದಾಸ್ ಕೂಡ ಟ್ವಿಟ್ಟರ್ ಖಾತೆಯಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ನನ್ನ ಜೀವನದ ಅತ್ಯಂತ ದೊಡ್ಡ ಕನಸೊಂದು ಇಂದು ನನಸಾಗೊರುವುದಕ್ಕೆ ನಾನು ತುಂಬಾ ಸಂತಸಗೊಂಡಿದ್ದೇನೆ. ಅಸ್ಸಾಂ ಪೋಲೀಸ್‌ನಲ್ಲಿ ಡಿಎಸ್‌ಪಿ ಆಗಿರಲು ನಾನು ಹೆಮ್ಮೆ ಪಡುತ್ತೇನೆ. ಈ ಗೌರವವನ್ನು ನಾನು ಹೆಮ್ಮೆಯಿಂದಲೇ ಸ್ವೀಕರಿಸುತ್ತೇನೆ" ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.
This News Article is a Copy of MYKHEL
12-12-25 08:47 pm
Bangalore Correspondent
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ...
12-12-25 03:15 pm
ನಾಯಕತ್ವ ಗೊಂದಲ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾತ...
12-12-25 01:36 pm
12-12-25 11:00 pm
HK News Desk
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
12-12-25 10:28 pm
Mangalore Correspondent
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
12-12-25 01:58 pm
Mangalore Correspondent
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm