ಬ್ರೇಕಿಂಗ್ ನ್ಯೂಸ್
27-02-21 01:25 pm Source: MYKHEL ಕ್ರೀಡೆ
ಗೋವಾ, ಫೆಬ್ರವರಿ 26: ಹೀರೋ ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಸುಹೈರ್ ವಾದಕ್ಕೆಪೀಡಿಟ (34ನೇ ನಿಮಿಷ) ಹಾಗೂ ಲಾಲೆಂಗ್ಮಾವಿಯಾ (45ನೇ ನಿಮಿಷ) ಗಳಿಸಿದ ಗೋಲು ತಂಡಕ್ಕೆ ಜಯ ತಂದುಕೊಟ್ಟಿತು.
ಹೀರೋ ಇಂಡಿಯಲ್ ಸೂಪರ್ ಲೀಗ್ ನಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಎರಡನೇ ಬಾರಿಗೆ ಸೆಮಿಫೈನಲ್ ತಲುಪಿತು. ಗೋವಾ ಮತ್ತು ಹೈದರಾಬಾದ್ ನಡುವಿನ ಪಂದ್ಯದಲ್ಲಿ ಜಯ ಗಳಿಸುವ ತಂಡವು ನಾಲ್ಕನೇ ತಂಡವಾಗಿ ಅಂತಿಮ ನಾಲ್ಕರ ಹಂತ ತಲುಪಲಿದೆ. ಹೈದರಾಬಾದ್ ಒಂದು ವೇಳೆ ಡ್ರಾ ಗಳಿಸಿದರೆ ಗೋವಾದ ಹಾದಿ ಸುಗಮವಾಗಲಿದೆ.
ನಾರ್ಥ್ ಈಸ್ಟ್ ಮುನ್ನಡೆ
ಕೇರಳ ಕೊನೆಯ ಪಂದ್ಯದಲ್ಲೂ ಗೆಲ್ಲುವ ತಂಡದಂತೆ ಜೆಮ್ಷೆಡ್ಪುರ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಆಡಲಿಲ್ಲ. ಆದರೆ ಜಯವನ್ನೇ ಗುರಿಯಾಗಿಸಿಕೊಂಡಿರುವ ನಾರ್ಥ್ ಈಸ್ಟ್ ಯುನೈಟೆಡ್ ಅದಕ್ಕೆ ತಕ್ಕುದಾದ ಆಟ ಪ್ರದರ್ಶಿಸಿ 2-0 ಮುನ್ನಡೆ ಕಾಯ್ದುಕೊಂಡಿತು. 34ನೇ ನಿಮಿಷದಲ್ಲಿ ಸುಹೈರ್ ವಾದಕ್ಕೆಪೀಡಿಟ ಗಳಿಸಿದ ಗೋಲಿನಿಂದ ನಾರ್ಥ್ ಈಸ್ಟ್ ಮೊದಲ ಯಶಸ್ಸಿನ ನಡೆ ಪಡೆದುಕೊಂಡಿತು. 45ನೇ ನಿಮಿಷದಲ್ಲಿ ಲಾಲೆಂಗ್ಮಾವಿಯಾ ಗಳಿಸಿದ ಗೋಲು ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಇದು ಇದುವರೆಗೂ ಐಎಸ್ಎಲ್ ನಲ್ಲಿ ದಾಖಲಾದ ಅದ್ಭುತ ಗೋಲೆಂದರೆ ತಪ್ಪಾಗಲಾರದು. ಅಪುಯಾ ಎಂದೂ ಕರೆಯಲ್ಪಡುವ ಲಾಲೆಂಗ್ಮಾವಿಯಾ ಇದು ಐಎಸ್ಎಲ್ ನಲ್ಲಿ ಗಳಿಸಿದ ಮೊದಲ ಗೋಲಾಗಿತ್ತು. ಕೇರಳಕ್ಕೆ ಎರಡು ಬಾರಿ ಅವಕಾಶ ಸಿಕ್ಕಿತ್ತಾದರು ಅದನ್ನು ಗೋಲಾಗಿಸುವಲ್ಲಿ ಎಂದಿನಂತೆ ತಂಡ ವಿಫಲವಾಗಿತ್ತು.
ನಾರ್ಥ್ ಈಸ್ಟ್ ಗೆ ಜಯದ ಅಗತ್ಯ
ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಜಯ ಗಳಿಸಿ ಪ್ಲೇ ಆಫ್ ತಲಪುವ ಗುರಿಯೊಂದಿಗೆ ನಾರ್ಥ್ ಈಸ್ಟ್ ಅಂಗಣಕ್ಕಿಳಿಯಿತು. ಇದು ಎರಡೂ ತಂಡಗಳಿಗೂ ಅಂತಿಮ ಲೀಗ್ ಪಂದ್ಯ. ಕೇರಳ ಬ್ಲಾಸ್ಟರ್ಸ್ ತಂಡಕ್ಕೂ ಅಂತಿಮ ಪಂದ್ಯದಲ್ಲಿ ಜಯ ಗಳಿಸಿ ನಿರ್ಗಮಿಸುವ ಹಂಬಲವಿದೆ. ನಾರ್ಥ್ ಈಸ್ಟ್ ತಂಡಕ್ಕೆ ಇಲ್ಲಿ ಸೋಲುವಂತಿಲ್ಲ. ಸೆಮಿಫೈನಲ್ ನಲ್ಲಿ ಸ್ಥಾನ ಪಡೆಯಬೇಕಾದರೆ ಇಲ್ಲಿ ಒಂದು ಅಂಕವನ್ನು ಗಳಿಸಲೇಬೇಕಾಗಿದೆ.
ಪ್ಲೇಆಫ್‌ಗೆ ಹೆಜ್ಜೆ
19 ಪಂದ್ಯಗಳಿಂದ ನಾರ್ಥ್ ಈಸ್ಟ್ 30 ಅಂಕಗಳನ್ನು ಗಳಿಸಿದ್ದು, ನಾಲ್ಕನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿರುವ ಹೈದರಾಬಾದ್ ಗಿಂತ ಎರಡು ಅಂಕ ಮೇಲುಗೈ ಸಾಧಿಸಿದ್ದು, ಗೋವಾದೊಂದಿಗೆ ಸಮಬಲ ಸಾಧಿಸಿದೆ. ಕೇರಳ ತಂಡ ಪ್ರಧಾನ ಕೋಚ್ ಕಿಬು ವಿಕುನಾ ಅವರನ್ನು ಕಳೆದುಕೊಂಡಿದ್ದು ಮಧ್ಯಂತರ ಕೋಚ್ ಇಶ್ಫಕ್ ಅಹ್ಮದ್ ಅವರ ಮುಂದಾಳತ್ವದಲ್ಲಿ ತಂಡ ಜಯ ಗಳಿಸಿ ಗೌರವದೊಂದಿಗೆ ನಿರ್ಮಿಸುವ ಗುರಿಹೊಂದಿದೆ.
This News Article Is A Copy Of MYKHEL
23-11-24 02:15 pm
Bangalore Correspondent
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
23-11-24 05:34 pm
HK News Desk
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
23-11-24 12:20 pm
Mangalore Correspondent
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm