ಧೋನಿ, ರೋಹಿತ್ ಫ್ಯಾನ್ಸ್ ಗಳ ನಡುವೆ ಗಲಾಟೆ – ಓರ್ವ ಗಂಭೀರ

23-08-20 04:55 pm       Headline Karnataka News Network   ಕ್ರೀಡೆ

ಭಾರತ ತಂಡದ ಮಾಜಿ ನಾಯಕ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳ ನಡುವೆ ಕೇವಲ ಬ್ಯಾನರ್ ಹಾಕುವ ವಿಚಾರಕ್ಕೆ ಗಲಾಟೆಯಾಗಿದ್ದು, ಓರ್ವನಿಗೆ ಗಂಭೀರವಾಗಿ ಗಾಯವಾಗಿದೆ.

ಮುಂಬೈ: ಭಾರತ ತಂಡದ ಮಾಜಿ ನಾಯಕ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳ ನಡುವೆ ಗಲಾಟೆಯಾಗಿದ್ದು, ಓರ್ವನಿಗೆ ಗಂಭೀರವಾಗಿ ಗಾಯವಾಗಿದೆ.

ಈ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕುರುಂದವಾಡ್ ಎಂಬಲ್ಲಿ ನಡೆದಿದ್ದು, ವರದಿಯ ಪ್ರಕಾರ ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿಯೋರ್ವನಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಕೇವಲ ಬ್ಯಾನರ್ ಹಾಕುವ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.

ಅಗಸ್ಟ್ 15ರಂದು ನಿವೃತ್ತಿ ಘೋಷಣೆ ಮಾಡಿದ ಧೋನಿಯವ ಬ್ಯಾನರ್ ಅನ್ನು ಕುರುಂದವಾಡ್‍ನಲ್ಲಿ ಎಂಎಸ್‍ಡಿ ಅಭಿಮಾನಿಗಳು ಹಾಕಿದ್ದರು. ಕಳೆದ ಶನಿವಾರ ರೋಹಿತ್ ಶರ್ಮಾ ಅವರು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಬಂದಿದ್ದು, ಇದರ ಸಲುವಾಗಿ ರೋಹಿತ್ ಅಭಿಮಾನಿಗಳು ಕೂಡ ಇದೇ ಜಾಗದಲ್ಲಿ ಬ್ಯಾನರ್ ಹಾಕಿದ್ದಾರೆ. ಈ ವೇಳೆ ಧೋನಿಯವರ ಬ್ಯಾನರ್ ಅನ್ನು ಯಾರೋ ಕಿತ್ತು ಹಾಕಿದ್ದಾರೆ.

ನೆಚ್ಚಿನ ಆಟಗಾರನ ಬ್ಯಾನರ್ ಅನ್ನು ಕಿತ್ತು ಹಾಕಿದ್ದಾರೆ ಎಂದು ರೊಚ್ಚಿಗೆಂದ ಧೋನಿ ಅಭಿಮಾನಿಗಳು, ರೋಹಿತ್ ಅಭಿಮಾನಿಯೋರ್ವನ ಜೊತೆ ಜಗಳವಾಡಿದ್ದಾರೆ. ಈ ವೇಳೆ ರೋಹಿತ್ ಅಭಿಮಾನಿ ಕೂಡ ಗಲಾಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿಯನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ಆ ಯುವಕ ಆಸ್ಪತ್ರೆ ಸೇರಿದ್ದಾನೆ.

ಈ ವಿಚಾರ ವೈರಲ್ ಆಗಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡುತ್ತಿದಂತೆ ಬೇಸರಗೊಂಡ ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು, ಆಟಗಾರರು ಹೆಚ್ಚು ಮಾತನಾಡುವುದಿಲ್ಲ ನಿಜ. ಆದರೆ ಅವರು ಪರಸ್ಪರ ಜೊತೆಯಾಗಿ ಇರುತ್ತಾರೆ. ಅವರು ಅಗತ್ಯವಿರುವಷ್ಟು ಮಾತ್ರ ಮಾತನಾಡುತ್ತಾರೆ ಆದರೆ ಕೆಲವು ಅಭಿಮಾನಿಗಳು ಹುಚ್ಚರಾಗಿದ್ದಾರೆ. ದಯವಿಟ್ಟು ಪರಸ್ಪರರ ಕಿತ್ತಾಡಿಕೊಳ್ಳಬೇಡಿ ಮತ್ತು ಟೀಮ್ ಇಂಡಿಯಾವನ್ನು ಒಂದಾಗಿ ಪರಿಗಣಿಸಿ ಎಂದು ಟ್ವೀಟ್ ಮಾಡಿದ್ದಾರೆ.