ಐಪಿಎಲ್‌ನಿಂದ ಹೊರಗುಳಿದ ರೈನಾ!!

29-08-20 03:55 pm       Dhruthi Anchan - Correspondent   ಕ್ರೀಡೆ

ವೈಯುಕಿಕ ಕಾರಣಕ್ಕೆ ಐಪಿಲ್ ಟೂರ್ನಿಯಿಂದ ಹೊರಬಂದ ಸುರೇಶ್ ರೈನಾ

ಹೊಸದಿಲ್ಲಿ, ಆಗಸ್ಟ್.29: ಚೆನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ವೈಯುಕ್ತಿಕ ಕಾರಣದಿಂದ ಯುಎಇಯಿಂದ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಹೀಗಾಗಿ ಅವರು ಈ ವರ್ಷ ನಡೆಯಲಿರುವ ಐಪಿಎಲ್ ಟೂರ್ನಿಯ ಎಲ್ಲಾ ಪಂದ್ಯಗಳಿOದ ಹೊರಗುಳಿಯಲಿದ್ದಾರೆ ಎಂದು ಚೆನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಟ್ವೀಟ್ ಮೂಲಕ ತಿಳಿಸಿದ್ದಾರೆ. 

ಸುರೆಶ್ ರೈನಾ ವೈಯುಕ್ತಿಕ ಕಾರಣಕ್ಕೆ ಭಾರತಕ್ಕೆ ವಾಪಾಸ್ಸಾಗಿದ್ದು, ಐಪಿಲ್ ಋತುವಿಗೆ ಲಭ್ಯವಿರುವುದಿಲ್ಲ. ಇಂತಹ ಸಮಯದಲ್ಲಿ ಚೆನೈ ಸೂಪರ್ ಕಿಂಗ್ಸ್ ಅವರ ಕುಟುಂಬಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಸಿಎಸ್‌ಕೆ ಸಿಇಒ ಕೆ.ಎಸ್.ವಿಶ್ವನಾಥನ್ ತಂಡದ ಅಧಿಕೃತ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.