ಬ್ರೇಕಿಂಗ್ ನ್ಯೂಸ್
01-08-20 02:07 pm Headline Karnataka News Network ಕ್ರೀಡೆ
ಹೊಸದಿಲ್ಲಿ: ದಾಖಲೆಗಳಿಗೆ ಪರ್ಯಾಯ ಹೆಸರೇ ಸಚಿನ್ ತೆಂಡುಲ್ಕರ್. ಆದರೆ ಅವರಿಗೆ ಒಲಿಯದ ದಾಖಲೆಗಳೂ ಸಾಕಷ್ಟಿವೆ. ಇದರಲ್ಲಿ ಪ್ರಮುಖವಾದುದೆಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತೀ ಕಿರಿಯ ಆಟಗಾರನೆಂಬ ದಾಖಲೆ ಸ್ವಲ್ಪದರಲ್ಲೇ ಕೈತಪ್ಪಿದ್ದು. ಇದಕ್ಕೆ ತಾನೇ ಕಾರಣ ಎಂದು ನ್ಯೂಜಿಲ್ಯಾಂಡಿನ ಮಾಜಿ ವೇಗಿ ಡ್ಯಾನಿ ಮಾರಿಸನ್ ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ!
ನಾಯಕ ನೀಡಿದ ಎಚ್ಚರಿಕೆ
‘ಆಗಷ್ಟೇ ಪಾಕಿಸ್ಥಾನ ಪ್ರವಾಸ ಮುಗಿಸಿದ ತೆಂಡುಲ್ಕರ್ ನ್ಯೂಜಿಲ್ಯಾಂಡಿಗೆ ಆಗಮಿಸಿದ್ದರು. ಈ ಹುಡುಗನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅಭ್ಯಾಸ ತಂಡದ ನಾಯಕ ಕೆನ್ ರುದರ್‌ಫೋರ್ಡ್ ಎಚ್ಚರಿಸಿದ್ದರು.
ನನಗೂ 16ರ ಹರೆಯದ ಸಚಿನ್ ಬಗ್ಗೆ ಕುತೂಹಲ ಮೂಡಿತ್ತು. ಆವರು ರಿಚರ್ಡ್ ಹ್ಯಾಡ್ಲಿ ಎಸೆತಗಳನ್ನೂ ದಿಟ್ಟ ರೀತಿಯಲ್ಲಿ ನಿಭಾಯಿಸುತ್ತಿದ್ದರು…’ ಎಂದು ಮಾರಿಸನ್ 1990ರ ಘಟನೆಯನ್ನು ಮೆಲುಕು ಹಾಕಿದ್ದಾರೆ.
29 ವರ್ಷಗಳ ದಾಖಲೆ
ಪ್ರಥಮ ಪಂದ್ಯದಲ್ಲಿ ಸೊನ್ನೆ ಮತ್ತು 24 ರನ್ ಮಾಡಿದ ಸಚಿನ್, ನೇಪಿಯರ್‌ನ ದ್ವಿತೀಯ ಟೆಸ್ಟ್‌ನಲ್ಲಿ ಶತಕದತ್ತ ದೌಡಾಯಿಸಿದ್ದರು. ಇದನ್ನು ಸಾಧಿಸಿದ್ದೇ ಆದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತೀ ಕಿರಿಯ ಆಟಗಾರನೆಂಬ ವಿಶ್ವ ದಾಖಲೆ ನಿರ್ಮಾಣಗೊಳ್ಳುತ್ತಿತ್ತು. 1961ರಷ್ಟು ಹಿಂದೆ ಪಾಕಿಸ್ಥಾನದ ಮುಷ್ತಾಕ್ ಮೊಹಮ್ಮದ್ 17 ವರ್ಷ, 78ನೇ ದಿನದಲ್ಲಿ ಬಾರಿಸಿದ ಶತಕದ ದಾಖಲೆ ಪತನಗೊಳ್ಳುತ್ತಿತ್ತು.
88ಕ್ಕೆ ಕೊನೆಗೊಂಡ ಆಟ
’88 ರನ್ ಮಾಡಿ ಆಡುತ್ತಿದ್ದ ತೆಂಡುಲ್ಕರ್‌ಗೆ ನಾನು ಬೌಲಿಂಗ್ ಮಾಡಲಿಳಿದಿದ್ದೆ. ನನಗೆ 3 ಬೌಂಡರಿಗಳ ರುಚಿ ತೋರಿಸಿ ಶತಕ ಪೂರ್ತಿ ಮಾಡುತ್ತಾರೇನೋ ಎಂಬ ಆತಂಕ ಮನೆಮಾಡಿತ್ತು. ಆದರೆ ಅದೇ ಮೊತ್ತಕ್ಕೆ ನಾನು ಅವರ ವಿಕೆಟ್ ಹಾರಿಸಿದೆ. ಮಿಡ್ ಆಫ್ನಲ್ಲಿದ್ದ ಜಾನ್ ರೈಟ್ ಕ್ಯಾಚ್ ಪಡೆದಿದ್ದರು. ನಾನೊಂದು ದೊಡ್ಡ ಸಾಹಸ ಮಾಡಿದ್ದೆ’ ಎಂದು ಮಾರಿಸನ್ ಖುಷಿಯಿಂದ ಹೇಳಿದರು.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm