ಬ್ರೇಕಿಂಗ್ ನ್ಯೂಸ್
27-05-22 08:59 pm Mangalore Correspondent ಕ್ರೈಂ
ಉಳ್ಳಾಲ, ಮೇ 27: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಉಚ್ಚಿಲ ಸಮೀಪ ನಸುಕಿನ ಜಾವ ನಡೆದಿರುವ ರೌಡಿಶೀಟರ್ ಅಜ್ಜಿನಡ್ಕ , ಮುಳ್ಳುಗುಡ್ಡೆ ನಿವಾಸಿ ಆರೀಫ್ (37) ಕೊಲೆಯತ್ನ ಪ್ರಕರಣದ ಐವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಮೇಲಂಗಡಿ ನಿವಾಸಿ ಅಬ್ದುಲ್ ಕರೀಂ(46), ಪೈಝಲ್‌ನಗರ ನಿವಾಸಿಗಳಾದ ಪುಚ್ಚ ನಿಶಾಕ್(25), ಮೊಹಮ್ಮದ್ ಅಶ್ಪಾಕ್(26), ಕಾಟಿಪಳ್ಳ ನಿವಾಸಿ ಉಮ್ಮರ್ ಫಾರೂಕ್(25), ಮಾರ್ನಮಿಕಟ್ಟೆ ನಿವಾಸಿ ರಿಫಾತ್ (27) ಬಂಧಿತ ಆರೋಪಿಗಳು. ರೌಡಿಶೀಟರ್ ಆರೀಫ್ ಮತ್ತು ಅಬ್ದುಲ್ ಕರೀಂ ಜತೆಯಾಗಿ ವ್ಯವಹಾರ ಮಾಡುತ್ತಿದ್ದು, ಕರೀಂ ಎಂಬಾತ ಆರೀಫ್ ನಿಂದ ಸಾಲ ಪಡೆದುಕೊಂಡಿದ್ದ ಎನ್ನಲಾಗಿದೆ.


ಕೆಲವು ದಿನಗಳ ಹಿಂದೆ ಆರೀಫ್ ಸಾಲ ನೀಡಿದ ಹಣ ವಾಪಸ್ ನೀಡುವಂತೆ ಕರೀಂನಲ್ಲಿ ಕೇಳಿದ್ದ. ಈ ವಿಚಾರವನ್ನು ಕರೀಂ ನೌಫಾಲ್ ಬಳಿ ತಿಳಿಸಿದ್ದ ಎನ್ನಲಾಗಿದೆ. ನೌಫಾಲ್ ಆರೀಫ್‌ಗೆ ಕರೆ ಮಾಡಿ ಎಲ್ಲಾ ಹಣ ವಾಪಸ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದ. ಇದೇ ವಿಚಾರದಲ್ಲಿ ಅವರ ಮಧ್ಯೆ ಸಂಘರ್ಷ ನಡೆದಿದ್ದು, ನೌಫಾಲ್ ತನ್ನ ಸ್ನೇಹಿತರಾದ ನಿಶಾಕ್, ಅಶ್ಪಾಕ್, ಫಾರೂಕ್ ಮತ್ತು ರಿಫಾತ್ ಗೆ ಕೊಲೆ ಮಾಡಲು ಸುಫಾರಿ ನೀಡಿದ್ದ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಮಂಗಳವಾರ ನಸುಕಿನ ಜಾವ ಆರೋಪಿಗಳು ಆರೀಫ್ ನನ್ನು ಉಚ್ಚಿಲ ಬಳಿ ತಡೆದು ನಿಲ್ಲಿಸಿ ಮಚ್ಚಿನಿಂದ ದಾಳಿ ನಡೆಸಿ ಕೊಲೆಯತ್ನ ನಡೆಸಿದ್ದರು. ಗಂಭೀರ ಗಾಯಗೊಂಡ ಆರೀಫ್ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ನೌಫಾಲ್ , ತಲ್‌ಹತ್ ಬಂಧನಕ್ಕೆ ಶೋಧ ಮುಂದುವರಿದಿದೆ.
ಉಳ್ಳಾಲ ; ಹಳೇ ದ್ವೇಷ ತೀರಿಸಲು ರೌಡಿಗೆ ಇರಿದು ಕೊಲೆಯತ್ನ, ನಾಲ್ವರು ದುಷ್ಕರ್ಮಿಗಳಿಂದ ಕುಕೃತ್ಯ
Rowdy stabbed at Ullal, five arrested by Ullal police in Mangalore. Arif was stabbed by miscreants over old revenge near Uchila. The search for another accused is on.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm