ಬ್ರೇಕಿಂಗ್ ನ್ಯೂಸ್
03-06-22 08:25 pm HK News Desk ಕ್ರೈಂ
ಹೈದರಾಬಾದ್, ಜೂನ್ 3: ಹೈದರಾಬಾದ್ ನಗರದಲ್ಲಿ ಅಪ್ರಾಪ್ತ ಯುವತಿಯನ್ನು ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಕೂಡಿಹಾಕಿ ಶಾಸಕರ ಮಗ ಸೇರಿದಂತೆ ಪ್ರಭಾವಿಗಳ ಮಕ್ಕಳು ಸೇರಿ ಗ್ಯಾಂಗ್ ರೇಪ್ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮೇ 28ರಂದು ಘಟನೆ ನಡೆದಿದ್ದು, ಈ ಬಗ್ಗೆ ಸಂತ್ರಸ್ತ ಯುವತಿಯ ತಂದೆ ಪೊಲೀಸ್ ದೂರು ನೀಡಿದ್ದಾರೆ. ಜುಬಿಲಿ ಹಿಲ್ಸ್ ನ ಪಬ್ ಒಂದರಲ್ಲಿ ಗೆಳೆಯರೊಂದಿಗೆ ಮದ್ಯ ರಹಿತ ಪಾರ್ಟಿಗೆ ತೆರಳಿದ್ದ 17 ವರ್ಷದ ಯುವತಿಯನ್ನು ಮನೆಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಈ ವೇಳೆ, ಕಾರಿನ ಒಳಗಡೆಯೇ ಯುವತಿಯನ್ನು ಅತ್ಯಾಚಾರ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಎಐಎಂಐಎಂ ಪಕ್ಷದ ಶಾಸಕರೊಬ್ಬರ ಮಗ, ವಕ್ಫ್ ಬೋರ್ಡ್ ಅಧ್ಯಕ್ಷನ ಮಗ ಮತ್ತು ಟಿಆರ್ ಎಸ್ ನಾಯಕರ ಮಗ ಸೇರಿದಂತೆ ಒಟ್ಟು ಐದು ಮಂದಿ ಪ್ರಭಾವಿಗಳ ಮಕ್ಕಳು ಸೇರಿ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಯುವತಿಯನ್ನು ಪಬ್ ನಲ್ಲಿ ಪರಿಚಯ ಮಾಡಿಕೊಂಡ ಹುಡುಗರು ಸಂಜೆ ಹೊತ್ತಿಗೆ ಮನೆ ವರೆಗೆ ಬಿಡುತ್ತೇವೆ ಎಂದು ಹೇಳಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಕರೆದೊಯ್ದಿದ್ದರು. ಇದರ ನಡುವೆ ಬೇಕರಿ ಒಂದರಲ್ಲಿ ಕಾರನ್ನು ನಿಲ್ಲಿಸಿದ್ದು ಅಲ್ಲಿ ಸ್ನಾಕ್ಸ್ ತಿಂದಿದ್ದಾರೆ. ಆನಂತರ ಕಾರನ್ನು ತಿರುಗಿ ಪಬ್ ಇರುವಲ್ಲಿಗೇ ತಿರುಗಿಸಿದ್ದು ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಬೆಂಜ್ ಮತ್ತು ಇನ್ನೋವಾ ಕಾರಿನಲ್ಲಿದ್ದ ಐವರು ಸೇರಿ ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕೊನೆಗೆ ಯುವತಿ ಅವರಿಂದ ತಪ್ಪಿಸಿಕೊಂಡು ಪಬ್ ಪಾರ್ಟಿ ನಡೆಯುತ್ತಿದ್ದಲ್ಲಿಗೆ ಹೋಗಿದ್ದು, ತನ್ನ ತಂದೆಗೆ ಫೋನ್ ಮಾಡಿದ್ದಾಳೆ. ನಡೆದ ಘಟನೆ ಬಗ್ಗೆಯೂ ತಂದೆಗೆ ತಿಳಿಸಿದ್ದಾಳೆ. 17 ವರ್ಷದ ಯುವತಿ ಘಟನೆಯಿಂದ ಶಾಕ್ ಗೆ ಒಳಗಾಗಿದ್ದು, ಕುತ್ತಿಗೆ, ಮುಖದಲ್ಲಿ ಗಾಯದ ಗುರುತು ಕಂಡು ತಂದೆ ಪೊಲೀಸ್ ದೂರು ನೀಡಿದ್ದಾರೆ. ದೂರು ದಾಖಲಾದರೂ, ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ತೆಲಂಗಾಣ ಬಿಜೆಪಿ ನಾಯಕರು, ರಾಜ್ಯ ಸರಕಾರದ ಬಗ್ಗೆ ಆರೋಪ ಮಾಡಿದ್ದು, ಪೊಲೀಸರು ಪ್ರಭಾವಿಗಳ ಮಕ್ಕಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪೋಕ್ಸೋ ಕಾಯ್ದೆ ಮತ್ತು ಅತ್ಯಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಶಾಸಕರ ಮಗನೂ ಕೃತ್ಯದಲ್ಲಿ ಪಾಲ್ಗೊಂಡಿದ್ದಾನೆ ಅನ್ನುವುದನ್ನು ದೃಢಪಡಿಸಿದ್ದಾರೆ. ಕೃತ್ಯ ನಡೆಸಿರುವ ಐವರು ಆರೋಪಿಗಳು ಕೂಡ 18 ವರ್ಷದ ಒಳಗಿನವರೆಂದು ಪೊಲೀಸರು ತಿಳಿಸಿದ್ದಾರೆ.
The BJP has accused the Telangana police of attempting to hush up the case, as "the suspects include the son of an AIMIM MLA, a Waqf official and a TRS leader." The girl had gone to a pub in the upscale Road no 36 of Jubilee Hills on Saturday afternoon along with her friends for an “alcohol-free” party. The boys under question befriended the girl at the pub. They then left the pub and spent some time at a bakery in Banjara Hills.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm