ಪಿಎಸ್ಐ ಅಕ್ರಮ ಹಗರಣ ; ಬೆಂಗಳೂರಿನಲ್ಲಿ ಮತ್ತೊಂದು ಎಫ್ಐಆರ್, ಪೊಲೀಸ್ ಕಾನ್ಸ್ ಟೇಬಲ್ 50 ಲಕ್ಷ ಡೀಲ್ ಪ್ರಕರಣ !  

06-06-22 08:49 pm       Bengalore Correspondent   ಕ್ರೈಂ

ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲು ಮಾಡಿದ್ದಾರೆ.‌

ಬೆಂಗಳೂರು, ಜೂನ್ 6 : ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲು ಮಾಡಿದ್ದಾರೆ.‌

ಸಿಐಡಿ ವಿಭಾಗದ ಡಿವೈಎಸ್ಪಿ ಶಿವಕುಮಾರ್ ದೂರಿನ ಮೇರೆಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಕಲಾಸಿಪಾಳ್ಯ ಠಾಣೆಯ ಕಾನ್ಸ್ ಟೇಬಲ್ ಹರೀಶ್, ಎಫ್ ಡಿಎ ಹರ್ಷ ಮತ್ತು ಹಣದ ಡೀಲ್ ಮಾಡಿದ್ದ ಮನೋಜ್ ಎಂಬಾತನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ‌ಸಿಐಡಿ ಅಧಿಕಾರಿಗಳು ಕಲಾಸಿಪಾಳ್ಯ ಕಾನ್ಸ್ ಟೇಬಲ್ ಹರೀಶ್ ನನ್ನು ಬಂಧಿಸಿದ್ದಾರೆ. 

ಪಿಎಸ್ ಐ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಹರೀಶ್, ಪಿಎಸ್ಐ ಹುದ್ದೆ ಪಡೆಯಲು 50 ಲಕ್ಷಕ್ಕೆ ಡೀಲ್ ಮಾಡಿದ್ದ ಎನ್ನುವ ಆರೋಪ ಇದೆ. ಇದಕ್ಕಾಗಿ ಡೀಲ್ ಕುದುರಿಸಿದ್ದ ಮನೋಜ್ ಗೆ 30 ಲಕ್ಷ ಹಣ ನೀಡಿದ್ದ. ತಾನು ಪರೀಕ್ಷೆ ಬರೆದಿದ್ದ ಓಎಂಆರ್ ಶೀಟನ್ನು ತಿದ್ದಲು ಹಣ ನೀಡಿದ್ದ. ಅಲ್ಲದೆ, ಎಕ್ಸಾಂ ವೇಳೆ ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟು ಬಂದಿದ್ದ. 

Four accused arrested by CID in Karnataka constables' exam impersonation  scam: | Country and Politics

ಬಳಿಕ ಸಿಐಡಿ ಕಚೇರಿಯಲ್ಲಿ ಎಫ್ ಡಿ ಎ ಹರ್ಷ ಸಹಾಯ ಪಡೆದು ಓಎಂಆರ್ ಶೀಟನ್ನು ತಿದ್ದಿದ್ದ ಎನ್ನುವ ಮಾಹಿತಿ ಸಿಐಡಿ ತನಿಖೆಯಲ್ಲಿ ಲಭಿಸಿತ್ತು. ಇತ್ತೀಚೆಗೆ ಓಎಂಆರ್ ಶೀಟ್ ವ್ಯತ್ಯಾಸ ಕಂಡುಬಂದಿದ್ದ ಕಾರಣ ಹರೀಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಪ್ರತ್ಯೇಕ ಎಫ್ ಐಆರ್ ದಾಖಲಿಸಿದ್ದು ಮೂವರನ್ನೂ ಬಂಧಿಸುವ ಸಾಧ್ಯತೆಯಿದೆ. ಹರೀಶ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದರು.  

Ashwath Narayan rules out ban on mobiles in colleges

ಇದೇ ವೇಳೆ, ಸಚಿವ ಅಶ್ವತ್ಥ ನಾರಾಯಣ ಸಂಬಂಧಿ ಎಂದು ಸುದ್ದಿಯಾಗಿದ್ದ ಪಿಎಸ್ಐ ಪರೀಕ್ಷೆ ಬರೆದು ಓಎಂಆರ್ ಶೀಟ್ ವ್ಯತ್ಯಾಸದಿಂದಾಗಿ ಎಫ್ಐಆರ್ ದಾಖಲಾಗಿದ್ದ ದರ್ಶನ್ ಗೌಡನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ದರ್ಶನ್ ಗೌಡ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರ ಸೋದರ ಡೀಲ್ ಕುದುರಿಸಿದ್ದಾರೆ, ಅವರನ್ನೂ ಸಿಐಡಿಯವರು ವಿಚಾರಣೆಗೆ ಕರೆಸಿದ್ದರು ಎನ್ನುವ ವದಂತಿಗಳು ಹರಡಿದ್ದವು. ಆದರೆ ಆ ವದಂತಿಯನ್ನು ಸಚಿವರು ನಿರಾಕರಿಸಿದ್ದರು.

Karnataka Psi scam,  Police Constable arested, 50 lakh deal exposed.