ಬ್ರೇಕಿಂಗ್ ನ್ಯೂಸ್
06-06-22 09:58 pm Bengalore Correspondent ಕ್ರೈಂ
ಬೆಂಗಳೂರು, ಜೂನ್ 6: ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಬೆನ್ನತ್ತಿ ನ್ಯಾಯ ಕೊಡಿಸಬೇಕಾದ ಪೊಲೀಸ್ ಅಧಿಕಾರಿಯ ವಿರುದ್ಧ ಆತನ
ಪತ್ನಿಯೇ ಪೊಲೀಸ್ ದೂರು ನೀಡಿದ್ದು, 13 ವರ್ಷದ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಬೆಂಗಳೂರಿನ ಜೆಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ಜೆಸಿ ನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿರುವ ತನ್ನ ಗಂಡನ ವಿರುದ್ಧ ದೂರು ನೀಡಿದ್ದಾರೆ. ವಿಚಿತ್ರ ಅಂದರೆ, ಆರೋಪಿ ಪೊಲೀಸ್ ಅಧಿಕಾರಿ ದೂರು ನೀಡಿರುವ ಮಹಿಳೆಯ ಎರಡನೇ ಗಂಡನಾಗಿದ್ದಾನೆ. ಸದ್ಯಕ್ಕೆ ಆರೋಪಿ ಎಸೈ ವಿರುದ್ಧ ಪೋಕ್ಸೋ ಮತ್ತು ಅತ್ಯಾಚಾರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದಲ್ಲದೆ, ತನ್ನ ಜೊತೆಗೂ ಅನೈಸರ್ಗಿಕ ಲೈಂಗಿಕ ಚಟುವಟಿಕೆ ನಡೆಸಲು ಒತ್ತಾಯ ಮಾಡುತ್ತಾನೆಂದು ಮಹಿಳೆ ದೂರಿದ್ದಾರೆ.
ಮಹಿಳೆಗೆ ಈ ಹಿಂದೆ ಬೇರೆ ಮದುವೆಯಾಗಿದ್ದು, ಮೊದಲ ಪತಿ ಕಿರುಕುಳ ನೀಡುತ್ತಿದ್ದ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಠಾಣೆಯಲ್ಲಿ ಹೇಳಿಕೆಯನ್ನು ದಾಖಲಿಸಲು ಹೋಗಿದ್ದಾಗ, ಅಲ್ಲಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬ ಪರಿಚಯ ಆಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿದ್ದು ಮಹಿಳೆಗೆ ಮೊದಲ ಪತಿಯಿಂದ ವಿಚ್ಚೇದನ ಸಿಕ್ಕಿದ ಬಳಿಕ ಪೊಲೀಸ್ ಅಧಿಕಾರಿಯೇ ಈಕೆಯನ್ನು ಮದುವೆಯಾಗಿದ್ದ. ಪೊಲೀಸ್ ಅಧಿಕಾರಿಯೂ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದ ಕಾರಣ, ಇಬ್ಬರೂ ಜೊತೆಯಾಗಿದ್ದರು.
ಮಹಿಳೆಗೆ ಮೊದಲ ಪತಿಯ ಜೊತೆಗಿನ ಜೀವನದಲ್ಲಿ ಹೆಣ್ಣು ಮಗುವಾಗಿದ್ದು, ಈಗ ಆಕೆಗೆ 13 ವರ್ಷ ತುಂಬಿದೆ. ಜೊತೆಗೆ, ಮಹಿಳೆ ಇನ್ನೊಬ್ಬ ಸ್ವಂತ ತಂಗಿಯನ್ನೂ ಹೊಂದಿದ್ದಾಳೆ. ಕಾಮುಕ ಪೊಲೀಸ್ ಅಧಿಕಾರಿ 13 ವರ್ಷದ ಮಗಳು ಮತ್ತು ಪತ್ನಿಯ ತಂಗಿಯ ಮೇಲೆ ಕಣ್ಣು ಹಾಕಿದ್ದು, ಪತ್ನಿಯ ಕಣ್ಣು ತಪ್ಪಿಸಿ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆರಂಭದಲ್ಲಿ ಸರಿಯಾಗಿಯೇ ಇದ್ದ ಪತಿ, ಈಗ ವಿಕೃತ ಕಾಮ ಪೂರೈಸಿಕೊಳ್ಳಲು ಮುಂದಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
Bangalore Police inspector alleged of raping his 13-year-old daughter, wife files complaint at J J Nagar Police Station. The wife who has lodged a complaint against the inspector is said to be his second wife.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm